Featured, ಆರೋಗ್ಯ, ಇತರೆ, ಸ್ಥಳೀಯ

ಬೆಳ್ಳಾರೆ ದಾರುಲ್ ಹಿಕ್ಮ ಸೆಕೆಂಡರಿ ಮದರಸ ಎಸ್ ಬಿ ಎಸ್ ರಚನೆ

ಬೆಳ್ಳಾರೆ: ಬೆಳ್ಳಾರೆ ದಾರುಲ್ ಹಿಕ್ಮ ಸೆಕೆಂಡರಿ ಮದರಸದ ಸುನ್ನಿ ಬಾಲ ಸಂಘ (SBS) ಸಮಿತಿ ರಚನಾ ಸಭೆ ಮದರಸಾ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸ್ಥಳೀಯ ಮದರಸದ ಸದರ್ ಮುಅಲ್ಲಿಂ ನಿಝಾರ್ ಸಖಾಫಿ ಮೂಡೂರು ವಹಿಸಿದ್ದರು.
ದಾರುಲ್ ಹಿಕ್ಮ ಮದರಸದ ಅಧ್ಯಾಪಕರಾದ ತಾಜುದ್ದೀನ್ ಸಖಾಫಿ ಮೊಗರ್ಪಣೆ ಎಸ್‌ಬಿಎಸ್ ಸಂಘಟನೆಯ ಉದ್ದೇಶ ಹಾಗೂ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಬಳಿಕ ಕಳೆದ ಸಾಲಿನ ವಾರ್ಷಿಕ ಲೆಕ್ಕಪತ್ರ ಮತ್ತು ವರದಿಯನ್ನು ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಸಅದ್ ಸಭೆಯ ಮುಂದೆ ವಾಚಿಸಿದರು.
ನಂತರ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಮುಹಮ್ಮದ್ ಆತೀಫ್, ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹಿಂ ಸಅದ್, ಫೈನಾನ್ಸ್ ಕಾರ್ಯದರ್ಶಿಯಾಗಿ ಖಲಂದರ್ ಶಮ್ಮಾಸ್ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಮುಹಮ್ಮದ್ ಅಸ್ಲಂ ಹಾಗೂ ಮುಹಮ್ಮದ್ ಶಹೀರ್, ಜೊತೆ ಕಾರ್ಯದರ್ಶಿಗಳಾಗಿ ಅಹಮದ್ ಫಲಾಹ್ ಮತ್ತು ಅಬ್ದುಲ್ ರಹಿಮಾನ್ ಆಯ್ಕೆಯಾದರು.
ಸಮಿತಿಯ ಸದಸ್ಯರಾಗಿ ಖಾಸಿಂ ಅಯಾಝ್, ಅಷ್ಫರ್ ಅಬ್ದುಲ್ಲ, ಸಲ್ಮಾನುಲ್ ಫಾರೀಸ್ ಹಾಗೂ ತಖೀಯುದ್ದೀನ್ ಅವರನ್ನು ಆಯ್ಕೆ ಮಾಡಲಾಯಿತು.
ಗ್ರೂಪ್ ಲೀಡರ್‌ಗಳಾಗಿ ಇಬ್ರಾಹಿಂ ಸಅದ್, ಖಲಂದರ್ ಶಮ್ಮಾಸ್, ಫಾತಿಮತ್ ನಫಾ ಹಾಗೂ ಫಾತಿಮತ್ ಹನ್ನತ್ ಅವರನ್ನು ನೇಮಕ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಇಬ್ರಾಹಿಂ ಸಅದ್ ಸ್ವಾಗತಿಸಿ, ಮುಹಮ್ಮದ್ ಅಸ್ಲಂ ವಂದಿಸಿದರು.
m

Related Posts