ದಿನಾಂಕ 13-05-2026 ಬುಧವಾರ ಬೆಳಿಗ್ಗೆ 10:00 ಕ್ಕೆ ಸರಿಯಾಗಿ ಕಾಪೆಜಾಲು ಮದ್ರಸದಲ್ಲಿ ನಡೆದ SBS ವಾರ್ಷಿಕ ಮಹಾಸಭೆಯು ರಫೀಖ್ ಅಂಜದಿ ಉಸ್ತಾದರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು.ಪ್ರ.ಕಾರ್ಯದರ್ಶಿ ಅಹ್ಮದ್ ಅಸ್ಲಂ ಸರ್ವರಿಗೂ ಸ್ವಾಗತ ಹೇಳಿ ಸ್ವಾಗತ ಭಾಷಣ ನಡೆಸಿದ ಬಳಿಕ ಕೋಶಾಧಿಕಾರಿ ಮುಹಮ್ಮದ್ ಶಮೀಂ ವರದಿ ವಿವರ ಹಾಗೂ ಲೆಕ್ಕಪತ್ರ ಮಂಡಿಸಿದರು. ಸದರ್ ಉಸ್ತಾದರು ಕಾರ್ಯಕ್ರಮ ಉದ್ಘಾಟಿಸಿ ನೂತನ ಸಮಿತಿಯ ಆಯ್ಕೆ ಪ್ರಕ್ರೀಯ ಬಗ್ಗೆ ಮಾಹಿತಿ ನೀಡಿದರು.ನೂತನ ಅಧ್ಯಕ್ಷರಾಗಿ 10 ನೇ ತರಗತಿ ವಿಧ್ಯಾರ್ಥಿ ಮುಹಮ್ಮದ್ ಶಹೀರ್.ಪ್ರ.ಕಾರ್ಯದರ್ಶಿಯಾಗಿ ಅಹ್ಮದ್ ಅಸ್ಲಂ 6th ಕೋಶಾಧಿಕಾರಿಯಾಗಿ ಮುಹಮಮ್ದ್ ಶಮೀಂ 8th ಮದ್ರಸಾ ಗರ್ಲ್ಸ್ ನಾಯಕಿಯರಾಗಿ ಫಾತಿಮತ್ ಸಹ್ಲಾ 10th,ಫಾತಿಮತ್ ಶಾಹಿನಾ 8th ಆಯ್ಕೆಗೊಂಡರು.ಉಪಾಧ್ಯಕ್ಷರಾಗಿ ಉನೈಸ್,ಜೊ.ಕಾರ್ಯದರ್ಶಿಯಾಗಿ -ಶಬೀರ್ ಅಲಿ ಆಯ್ಕೆಯಾದರು. ನೂತನ ಅಧ್ಯಕ್ಷರ ಮಾತಿನ ಬಳಿಕ ವಿಧ್ಯಾರ್ಥಿಗಳು ಮದ್ಹ್ ಗೀತೆಗಳು ಹಾಡಿದರು.ಕೊನೆಯಲ್ಲಿ ವಿಧ್ಯಾರ್ಥಿಗಳಿಗೆ ಸಹಿತಿಂಡಿ ಹಂಚಿ ಸ್ವಲಾತಿನೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.





m
