ಪುತ್ತೂರು: ಎಸ್ಸೆಸ್ಸೆಫ್ ಸಂಪ್ಯ ಯೂನಿಟ್ ವತಿಯಿಂದ ಮಾಸಿಕ ಝುಮ್ರ ತರಗತಿ ಮೇ 31 ರಂದು ಎಸ್ಸೆಸ್ಸೆಫ್ ಕಛೇರಿಯಲ್ಲಿ ನಡೆಯಿತು.
ಯೂನಿಟ್ ಅಧ್ಯಕ್ಷರಾದ ಬಿ.ಕೆ.ಕಾಮಿಲ್ ಮದನಿ ದುಆ ನಡೆಸಿಕೊಟ್ಟರು. ಹಾಫಿಳ್ ಬಾಝಿಲ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ನಡೆದ ಝುಮ್ರ ತರಗತಿಗೆ ನೇತೃತ್ವ ನೀಡಿದ ಕೆಎಂಹೆಚ್ ಝುಹ್ರಿ ಕೊಂಬಾಳಿ ಉಸ್ತಾದರು ಇಸ್ಲಾಮ್ ದೀನಿನ ಚೌಕಟ್ಟನ್ನು, ನೀತಿ ನಿಯಮಗಳನ್ನು ಬಹಳ ಸಾರವತ್ತಾಗಿ ವಿವರಿಸಿದರು.
ಕಾರ್ಯಕ್ರಮದಲ್ಲಿ ಎಸ್ ವೈ ಎಸ್ ನಾಯಕರಾದ ರಶೀದ್ ಮದನಿ ಸಂಪ್ಯ, ಅಝೀಝ್ ಕಲ್ಲರ್ಪೆ, ಶರೀಫ್ ಸಂಪ್ಯ, ಅಶ್ರಫ್ ಕಲ್ಲರ್ಪೆ ಮುಂತಾದವರು ಉಪಸ್ಥಿತರಿದ್ದರು. ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ ಆಫ್ ಇಂಡಿಯಾ ಇದರ ಮುಫತ್ತಿಷ್ ಆಗಿ ಆಯ್ಕೆಗೊಂಡ ಕೊಂಬಾಳಿ ಝುಹ್ರಿ ಉಸ್ತಾದರಿಗೆ ಇದೇ ಸಂದರ್ಭದಲ್ಲಿ ಮೆಮೆಂಟೋ ನೀಡಿ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಕಾರ್ಯದರ್ಶಿ ಝುಬೈರ್ ಸ್ವಾಗತಿಸಿ, ಕೋಶಾಧಿಕಾರಿ ಬಿ.ಕೆ.ಸ್ವಾದಿಕ್ ಅಲಿ ವಂದಿಸಿದರು.





m

