Featured, ಇತರೆ, ಸ್ಥಳೀಯ

ಬೆಂಗಳೂರಿನಿಂದ ಊರಿಗೆ ಬರುತ್ತೇನೆಂದು ಹೇಳಿ ಹೊರಟ ಯುವಕ ನಾಪತ್ತೆ: ಸುಳ್ಯ ಠಾಣೆಗೆ ಪೋಷಕರ ದೂರು

ಸುಳ್ಯ, ಜು. 6: ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆ ಗ್ರಾಮದ ಜೀರ್ಮುಕ್ಕಿ ನಿವಾಸಿ, 20 ವರ್ಷದ ಯುವಕ ಝುಬೈರ್ ಅವರು ಬೆಂಗಳೂರಿನಲ್ಲಿ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.

ಪದವಿ ವ್ಯಾಸಂಗ ಮಾಡುತ್ತಿದ್ದ ಝುಬೈರ್ ಅವರು ಬಿಡುವಿನ ವೇಳೆಯಲ್ಲಿ ಸುಳ್ಯದ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅನಾರೋಗ್ಯದ ಕಾರಣದಿಂದಾಗಿ ಈ ಶೈಕ್ಷಣಿಕ ವರ್ಷದಲ್ಲಿ ಕಾಲೇಜಿಗೆ ತೆರಳದೆ, ಮುಂದಿನ ವರ್ಷ ವ್ಯಾಸಂಗ ಮುಂದುವರಿಸುವ ಉದ್ದೇಶ ಹೊಂದಿದ್ದರು ಆರೋಗ್ಯ ಸುಧಾರಿಸಿದ ಬಳಿಕ ಬೆಂಗಳೂರಿನ ಸರ್ವಿಸ್ ಸ್ಟೇಷನ್ (ಕಾರ್ ವಾಷ್) ಸಂಸ್ಥೆಯೊಂದರಲ್ಲಿ ಉದ್ಯೋಗಕ್ಕೆ ಸೇರಿದ್ದರು.

ಜುಲೈ 2, 2026ರಂದು ತಮ್ಮ ಕೆಲಸದ ಸ್ಥಳದಿಂದ ಊರಿಗೆ ಬರುತ್ತಿರುವುದಾಗಿ ತಿಳಿಸಿ ಅವರು ಬೆಂಗಳೂರಿನಿಂದ ಹೊರಟಿದ್ದರು. ಆದರೆ, ಇದುವರೆಗೆ ಮನೆಗೆ ತಲುಪಿಲ್ಲ ಹಾಗೂ ಕೆಲಸದ ಸ್ಥಳಕ್ಕೂ ಮರಳಿಲ್ಲ. ಅಲ್ಲದೆ, ಅವರ ಮೊಬೈಲ್ ಫೋನ್ ಕೂಡ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಮಗ ನಾಪತ್ತೆಯಾಗಿರುವ ಕುರಿತು ಅವರ ತಾಯಿ ಜುಹರಾ ಅವರು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಯುವಕನ ಪತ್ತೆಗಾಗಿ ತನಿಖೆ ಆರಂಭಿಸಿದ್ದಾರೆ. ಝಬೈರ್ ಅವರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ತಕ್ಷಣವೇ ಸಮೀಪದ ಪೊಲೀಸ್ ಠಾಣೆ ಅಥವಾ ಸುಳ್ಯ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.

ಸಂಪರ್ಕ ಸಂಖ್ಯೆ : 9110253648

ಸುಳ್ಯ ಪೋಲಿಸ್ ಠಾಣೆ : 08257 230337

m

Related Posts