Featured, ಅಂಕಣ, ಸ್ಥಳೀಯ

ಇಂದಿನಿಂದ ಈಶ್ವರಮಂಗಲ ತ್ವೈಬಾದಲ್ಲಿ 12 ದಿನಗಳ ಪ್ರವಾದಿ ಪ್ರಕೀರ್ತನಾ ಮಜ್ಲಿಸ್

ಈಶ್ವರಮಂಗಲ: ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ಅವರ ಪವಿತ್ರ ಜನ್ಮದಿನದ ಪ್ರಯುಕ್ತ ತ್ವೈಬಾ ಎಜುಕೇಶನ್ ಸೆಂಟರ್ ಈಶ್ವರಮಂಗಲದಲ್ಲಿ ‘ರಿಹ್ಲತುಲ್ ವಿಸಾಲ್’ ಶೀರ್ಷಿಕೆಯಡಿ 12 ದಿನಗಳ ಭವ್ಯ ‘ಮಿಲಾದ್ ಕ್ಯಾಂಪೇನ್’ ವೈಭವದೊಂದಿಗೆ ಚಾಲನೆಗೊಂಡಿದೆ. ರಬೀಉಲ್ ಅವ್ವಲ್ 1 ರಿಂದ 12 ರವರೆಗೆ ನಡೆಯುವ ಈ ಬೃಹತ್ ಆಚರಣೆಯು ಆಧ್ಯಾತ್ಮಿಕ ಹಾಗೂ ವೈಚಾರಿಕ ಚಟುವಟಿಕೆಗಳ ಮೂಲಕ ಗಮನ ಸೆಳೆಯಲಿದೆ. 

ಪ್ರವಾದಿ ಮುಹಮ್ಮದ್ ﷺ ಅವರ ಜೀವನ, ಸಂದೇಶ, ಸ್ವಭಾವ ಮಹಿಮೆ ಹಾಗೂ ಪ್ರವಾದಿ ಪ್ರೇಮವನ್ನು ಸಮಾಜದಲ್ಲಿ ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಕ್ಯಾಂಪೇನ್ ಹಮ್ಮಿಕೊಳ್ಳಲಾಗಿದೆ.

ಮಿಲಾದ್ ಕ್ಯಾಂಪೇನ್‌ನ ಅಂಗವಾಗಿ ತಶ್ವೀಕ್, ಮೌಲಿದ್ ಸಂಚಾರ, ರಬೀಅ್ ಘೋಷಣಾ ಜಾಥಾ, ಫನಾ ಫೀ ರಸೂಲ್ ﷺ, ತಬರ್ರುಕ್ ವಿತರಣೆ, ತಆವುನ್, ಲೈಲತುಲ್ ಬುರ್ದಾ, ಮಿಸ್ಕುಲ್ ವಿಸಾಲ್, ದಲಾಸ್, ರಿಬಾತ್, ಇನ್ಫೋಸೀರಾ, ಸೀರತುನ್ನಬಿ ಅಕಾಡೆಮಿಕ್ ಸೆಮಿನಾರ್ ಹಾಗೂ ಹಲ್ಕತುಲ್ ವಿಸಾಲ್ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 

ಈಶ್ವರಮಂಗಲ ಟೌನ್‌ನಲ್ಲಿ ಅದ್ಧೂರಿಯಾಗಿ ಜರುಗಿದ ರಬೀಅ್ ಘೋಷಣಾ ಜಾಥಾವು ಮಿಲಾದ್ ಸಂಭ್ರಮಕ್ಕೆ ಶೋಭೆ ತಂದಿದೆ.

ಕ್ಯಾಂಪೇನ್‌ನ ಪ್ರತಿ ದಿನವೂ ಆಸರ್ ನಮಾಝ್‌ನ ಬಳಿಕ ಮೌಲಿದ್ ಮಜ್ಲಿಸ್ ಹಾಗೂ ಹೆಸರಾಂತ ವಿದ್ವಾಂಸರು ಮತ್ತು ಪ್ರಮುಖ ಪ್ರಭಾಷಕರಿಂದ ವೈವಿಧ್ಯಮಯ ವಿಷಯಗಳಲ್ಲಿ ಪಾಂಡಿತ್ಯಪೂರ್ಣ ಪ್ರವಚನ ನಡೆಯಲಿದೆ. 

ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿರುವ ಈ ‘ಮಿಲಾದ್ ಕ್ಯಾಂಪೇನ್’ನಲ್ಲಿ ಎಲ್ಲಾ ಪ್ರವಾದಿಪ್ರೇಮಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ತ್ವೈಬಾ ಎಜುಕೇಶನ್ ಸೆಂಟರ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಮಿಸ್ಬಾಹಿ ತಿಳಿಸಿದ್ದಾರೆ.

Related Posts