ಇತರೆ

ಸುಳ್ಯ : ಬೀದಿ ಬದಿಯಲ್ಲಿ ಆಶ್ರಯ ಪಡೆಯುತ್ತಿದ್ದ, ಅನಾರೋಗ್ಯಕ್ಕೆ ಒಳಗಾದ ಅನಾಥೆ, ಅಪರಿಚಿತೆ, ಅಲೆಮಾರಿ ವೃದ್ಧೆ ಯನ್ನು ಆಸ್ಪತ್ರೆಗೆ ದಾಖಲಿಸಿದ ನಗರ ಪಂಚಾಯತ್ ಸದಸ್ಯ ಕೆ ಎಸ್ ಉಮ್ಮರ್

ಸುಳ್ಯ : ಬೀದಿಯಲ್ಲಿ ಭಿಕ್ಷೆ ಬೇಡಿ, ಬೀದಿ ಬದಿಯಲ್ಲಿ ಆಶ್ರಯ ಪಡೆಯುತ್ತಿದ್ದ ಅಲೆಮಾರಿ ಅನಾಥೆ, ಅಪರಿಚಿತೆ, ವೃದ್ಧೆಯೋರ್ವರು ಸುಳ್ಯ ಖಾಸಗಿ ಬಸ್ ಸ್ಟಾಂಡ್ ಬಳಿ ಇರುವ ರಿಕ್ಷಾ ಪಾರ್ಕಿಂಗ್ ಬಳಿ ಅನಾರೋಗ್ಯಕ್ಕೆ ಒಳಗಾಗಿ ಅಸಹಾಯಕ ಪರಿಸ್ಥಿತಿಯಲ್ಲಿ ಇದ್ದದ್ದನ್ನು ಗಮನಿಸಿದ ನಗರ ಪಂಚಾಯತ್ ಸದಸ್ಯ ಕೆ ಎಸ್ ಉಮ್ಮರ್ ರವರು, ಅನಾಥೆ ಅಪರಿಚಿತೆ ವೃದ್ಧೆಯನ್ನು ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ ವೃದ್ಧೆ ಯನ್ನು ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಮಾತ್ರವಲ್ಲ ಆ ಕಡೆ ಗಮನಹರಿಸಿದ್ದಾರೆ.

ನಿರಂತರವಾಗಿ ಸಮಾಜ, ಸಮುದಾಯ ಮುಖಿ ಸೇವೆ ನೀಡುತಿರುವ ಕೆ ಎಸ್ ಉಮ್ಮರ್ ರವರ ಮಾದರಿ ಸೇವೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗುತ್ತಿದೆ

m

Related Posts