Featured, ಇತರೆ, ಸ್ಥಳೀಯ

ಪೆರಾಬೆ ಗ್ರಾಮ ಮನವಳಿಕೆ 1 ಅಂಗನವಾಡಿ ಕೇಂದ್ರದಲ್ಲಿ ಅಕ್ಷರ ಉತ್ಸಾಹ ಮೇಳ,ಸ್ವಚ್ಛ ಗ್ರಾಮ ನಿರ್ವಹಣೆ ಸಂವಾದ ಸಂಕಲ್ಪ.ಬಾಲ ಮೇಳ ಕಾರ್ಯಕ್ರಮ

ಪೆರಾಬೆ: ಫೆಬ್ರವರಿ 20 ರಂದು ಪೆರಾಬೆ ಗ್ರಾಮ ಮನವಳಿಕೆ 1 ಅಂಗನವಾಡಿ ಕೇಂದ್ರದಲ್ಲಿ ಅಕ್ಷರ ಉತ್ಸಾಹ ಮೇಳ,ಸ್ವಚ್ಛ ಗ್ರಾಮ ನಿರ್ವಹಣೆ ಸಂವಾದ ಸಂಕಲ್ಪ.ಬಾಲ ಮೇಳ ಕಾರ್ಯಕ್ರ ನಡೆಯಿತು
ಕಾರ್ಯಕ್ರಮವನ್ನು ಜನ ಶಿಕ್ಷಣ ಟ್ರಸ್ಟ್ ನ ಶೀನ ಶೆಟ್ಟಿ ರವರು ಉದ್ಘಾಟಿಸಿ ಅಧ್ಯಕ್ಷತೆ ವಹಿಸಿದರು.
ಕಾರ್ಯಕ್ರಮದ ಅಧ್ಯಕ್ಷರಾದ ಶೀನ ಶೆಟ್ಟಿ ರವರು ಮಾತನಾಡಿ ಸ್ವಚ್ಛತೆಯ ಕುರಿತು ಮಾಹಿತಿಯೊಂದಿಗೆ ಅರಿವು ಮೂಡಿಸಿದರು.ಬಳಿಕ ನಿವೃತ್ತ ಶಿಕ್ಷಕರಾದ ಸುಬ್ರಹ್ಮಣ್ಯ ಗೌಡ ಎರ್ಮಾಳ,ಹಿರಿಯ ಅಂಗನವಾಡಿ ಕಾರ್ಯಕರ್ತೆ ಜೈನಾಬಿ, ಹಾಗೂ ಎಲ್ಲಾ ಗಣ್ಯ ವ್ಯಕ್ತಿಗಳು ಸಂದರ್ಭೋಚಿತವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕೆನರಾ ಬ್ಯಾಂಕ್ ಆಲಂಕಾರು ಇದರ ಸಂಸ್ಥಾಪಕರನ್ನು,ಪೆರಾಬೆ ಗ್ರಾಮ ಪಂಚಾಯತ್ ಸ್ವಚ್ಚ ವಾಹಿನಿಯ ಚಾಲಕರಾದ ಯಶೋದಾ,ಮಾದರಿ ಮಹಿಳೆ ಕುಸುಮ ಪಾಟಾಳಿ ಇವರನ್ನು ಗುರುತಿಸಿ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.ಬಳಿಕ ಅಂಗನವಾಡಿಯಲ್ಲಿ ನಡೆದ ವಿವಿಧ ಬಗೆಯ ಆಟೋಟ ಸ್ಪರ್ಧೆಯಲ್ಲಿ ಭಾಗವಹಿಸಿದ ಮಹಿಳೆಯರು ಮತ್ತು ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು.ಬಹುಮಾನದ ಪ್ರಾಯೋಜಕತ್ವವನ್ನು ಝಿಂದಗಿ ಬ್ರದರ್ಸ್ ಕೋಚಕಟ್ಟೆ ಕುಂತೂರು ಇವರು ಅಂಗನವಾಡಿಗೆ ನೀಡುವುದರೊಂದಿಗೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.


ಊರವರಿಗೆ ಅಂಗನವಾಡಿಯ ಮಹತ್ವನ್ನು ತಿಳಿಸಿಕೊಂಡು,ಎಲ್ಲರನ್ನೂ ಒಗ್ಗೂಡಿಸಿಕೊಂಡು ಕಾರ್ಯಕ್ರಮ ಆಯೋಜಿಸಿದ್ದನ್ನು ಎಲ್ಲಾ ಗಣ್ಯರು ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಮೋಹಿನಿ ಇವರ ಕಾರ್ಯಕ್ರಮ ಆಯೋಜನೆಯನ್ನು ಪ್ರಶಂಸಿಸಿದರು. ಸಭಾ ಕಾರ್ಯಕ್ರಮದ ನಂತರ ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ವೇದಿಕೆಯಲ್ಲಿ ಶೀನ ಶೆಟ್ಟಿ ಜನಶಿಕ್ಷಣ ಟ್ರಸ್ಟ್,ನಿವೃತ್ತ ಶಿಕ್ಷಕ ಸುಬ್ರಹ್ಮಣ್ಯ ಗೌಡ ಎರ್ಮಾಳ,ಜನಾಶಿಕ್ಷಣ ಟ್ರಸ್ಟಿನ ಕೃಷ್ಣ ಮೂಲ್ಯ,ಹಿರಿಯ ಅಂಗನವಾಡಿ ಕಾರ್ಯಕರ್ತೆ ಜೈನಾಭಿ,ಅಂಗನವಾಡಿ ನೌಕರರ ಸಂಘದ ಅಧ್ಯಕ್ಷರು, ಬಾಲ ವಿಕಾಸ ಸಮಿತಿ ಅಧ್ಯಕ್ಷರಾದ ಸಂಜೀವ ರೈ ಪರಾರಿ,ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಬೇಬಿ ಸಿ ಪಾಟಾಳಿ,ಪೆರಾಬೆ ಶಾಲಾ ಶಿಕ್ಷಕರು, ಪೆರಾಬೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂಧ್ಯಾ ಕೆದ್ದೋಟ್ಟೆ,ಸದಸ್ಯರಾದ ಮಮತಾ ಅಂಬರಾಜೆ,ಸಿ ಎಂ ಫಯಾಝ್ ಉಪಸ್ಥಿತರಿದ್ದರು.


ಕಾರ್ಯಕ್ರಮವನ್ನು ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಮೋಹಿನಿರವರು ಸ್ವಾಗತಿಸಿ ವಂದಿಸಿದರು.ಪೆರಾಬೆ ಶಾಲಾ ಶಿಕ್ಷಕಿಯಾದ ಶ್ರೀಮತಿ ಹೇಮಲತಾ ಪ್ರದೀಪ್ ನಿರೂಪಿಸಿದರು.
ಕಾರ್ಯಕ್ರಮದ ಯಶಸ್ಸಿಗೆ ಕಾರಣಕರ್ತರಾದ ಸ್ತ್ರೀ ಶಕ್ತಿ ಗುಂಪಿನ ಸದಸ್ಯರು,ಮಕ್ಕಳ ಪೋಷಕರು ಅದೇ ರೀತಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸುವುದರೊಂದಿಗೆ ಕಾರ್ಯಕ್ರಮವನ್ನು ಕೊನೆಗೊಳಿಸಲಾಯಿತು

m

Related Posts