Featured, ಇತರೆ, ಸ್ಥಳೀಯ

ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ರಾಧಾಕೃಷ್ಣ ಬೊಳ್ಳೂರು ರವರ ನೇಮಕ ಸೂಕ್ತವಾಗಿತ್ತು.

ಈಗ ತಡೆ ನೀಡಿರುವುದು ಖಂಡನೀಯ ಕೂಡಲೇ ತಾತ್ಕಾಲಿಕ ತಡೆಯನ್ನು ಹಿಂತೆಗೆಯಬೇಕು : ಭವಾನಿಶಂಕರ್ ಕಲ್ಮಡ್ಕ

ಸುಳ್ಯ ಬ್ಲಾಕ್ ಕಾಂಗ್ರೆಸ್ ಗೆ ನೂತನ ಅಧ್ಯಕ್ಷರನ್ನಾಗಿ ಕಾಂಗ್ರೆಸ್ ಹಿರಿಯ ಕಾಂಗ್ರೆಸ್ ಮುಖಂಡ, ಚತುರ ಸಂಘಟಕ ರಾಧಾಕೃಷ್ಣ ಬೊಳ್ಳೂರು ರವರನ್ನು ಕೆಪಿಸಿಸಿ ಅಧ್ಯಕ್ಷರು ಪಕ್ಷದ ನಿಯಮಾನುಸಾರ ನೇಮಕ ಮಾಡಿ ಆದೇಶ ಮಾಡಿರುವುದು ಉತ್ತಮ ಕಾರ್ಯ. ಆದರೆ ಸುಳ್ಯದಲ್ಲಿ ಪಕ್ಷ ಸಂಘಟನೆಯನ್ನು ಸಹಿಸದ ಕಾರ್ಯಕರ್ತರ ಭಾವನೆಗೆ ಬೆಲೆ ಕೊಡದ ನಾಲ್ಕು ಜನ ಸ್ವಾರ್ಥ ನಾಯಕರು ವಿನಾಕಾರಣ ರಾಜ್ಯಧ್ಯಕ್ಷರನ್ನು ಭೇಟಿ ಯಾಗಿ ಅಪಪ್ರಚಾರ ಮಾಡಿ, ಸುಳ್ಯದಲ್ಲಿ ಪಕ್ಷವನ್ನು ಸರ್ವನಾಶ ಮಾಡಬೇಕೆಂಬ ದುರುದ್ದೇಶದಿಂದ ನೇಮಕಾತಿಗೆ ತಾತ್ಕಾಲಿಕ ತಡೆ ನೀಡಿರುವುದು ಖಂಡನೀಯ.

ಸುಳ್ಯದಲ್ಲಿ ಈಗಾಗಲೇ ಸಹಕಾರಿ ಸಂಘಗಳಲ್ಲಿ, ಗ್ರಾಮ ಪಂಚಾಯತ್ ಚುನಾವಣೆಯಲ್ಲಿ, ಎಂ ಎಲ್ ಎ ಚುನಾವಣೆಗಳಲ್ಲಿ ಸೋತು ಐ ಸಿ ಯು ನಲ್ಲಿದೆ.

ಪಕ್ಷವನ್ನು ತಳ ಮಟ್ಟದಿಂದ ಸಂಘಟಿಸುವ ನಾಯಕರ ಮತ್ತು ಕಾರ್ಯಕರ್ತರಲ್ಲಿ ಹೊಸ ಹುರುಪು ನೀಡಿದ್ದ ರಾಧಾಕೃಷ್ಣ ಬೊಳ್ಳೂರು ರವರ ನೇಮಕಾತಿ ತಡೆಯನ್ನು ಕೂಡಲೇ ಹಿಂಪಡೆದು ಅವರನ್ನೇ ಮುಂದುವರಿಸಬೇಕು. ಎಂದು ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ, ಭವಾನಿಶಂಕರ್ ಕಲ್ಮಡ್ಕ ಪತ್ರಿಕಾ ಹೇಳಿಕೆಯಲ್ಲಿ ಹೇಳಿದ್ದಾರೆ.

m

Related Posts