ತನ್ನನ್ನು ಸ್ವಯಂ ಆತ್ಮ ಸಂಸ್ಕರಣೆ ಗೆ ಒಳಪಡಿಸಿ ಧ್ಯಾನದಲ್ಲಿ ನಿರತರಾದ ಸತ್ಯ ವಿಶ್ವಾಗಳಿಗೆ ಈದುಲ್ ಫಿತ್ರ್ ಹಬ್ಬ ಅರ್ಥಪೂರ್ಣ ವಾಗಿ ಅರ್ಪಣೆ ಯಾಗಲಿದೆ : ಆಶ್ರಫ್ ಕಾಮೀಲ್ ಸಖಾಫಿ

ಸುಳ್ಯ : ಸುಳ್ಯ ಕೇಂದ್ರ ( ಮುಹಿಯದ್ದೀನ್ ಜುಮಾ) ಮಸೀದಿಯಲ್ಲಿ ಧಾರ್ಮಿಕ ಶ್ರದ್ಧಾ ಭಕ್ತಿ ಯೊಂದಿಗೆ ಸಂಭ್ರಮದ ಈದುಲ್ ಫಿತ್ರ್ ಹಬ್ಬವನ್ನು (31/03/2025) ಆಚರಿಸಲಾಯಿತು
ಇಂದು (31/03/2025) ಸೂರ್ಯೋದಯ ಏಕ ದೇವ ಸ್ಮರಣೆ ( ತಕ್ಬೀರ್ ದ್ವನಿ) ಯಿಂದ ಆರಂಭಗೊಂಡ ಧಾರ್ಮಿಕ ಕಾರ್ಯಕ್ರಮ ಬೆಳಗಿನ ಜಾವ 7.30 ಕ್ಕೆ ಅರ್ಥಪೂರ್ಣ ಈದ್ ಸಂದೇಶ ಹಾಗೂ ಈದ್ ನಮಾಝ್ ನ್ನು ಖತೀಬ್ ರಾದ ಆಶ್ರಫ್ ಕಾಮೀಲ್ ಸಖಾಫಿ ನೆರವೇರಿಸಿದರು

ಲಹರಿ ( ಮಾದಕವಸ್ತು) ಮುಕ್ತ ಸಮಾಜ ನಿರ್ಮಾಣ ಪ್ರತಿಯೊಬ್ಬರ ಹೊಣೆಯಾಗಿದೆ ಮಾದಕ ಪಿಡುಗು ಸಮಸ್ಯೆಗೆ ಸಾಮೂಹಿಕ ಪ್ರಯತ್ನಗಳೇ ಪರಿಹಾರ. ಸಮಾಜದ ಪ್ರತಿಯೊಬ್ಬರ ಸಹಕಾರ ಇಲ್ಲಿ ಗಂಭೀರವಾಗಿ ಅಗತ್ಯವಿದೆ. ಎಂದು ಜಾಗೃತಿ ಮೂಡಿಸಿದರು

ತನ್ನನ್ನು ಸ್ವಯಂ ಆತ್ಮ ಸಂಸ್ಕರಣೆ ಗೆ ಒಳಪಡಿಸಿ ಧ್ಯಾನದಲ್ಲಿ ನಿರತರಾದ ಸತ್ಯ ವಿಶ್ವಾಗಳಿಗೆ ಈದುಲ್ ಫಿತ್ರ್ ಹಬ್ಬ ಅರ್ಥಪೂರ್ಣ ವಾಗಿ ಅರ್ಪಣೆ ಯಾಗಲಿದೆ. ಆತ್ಮ ಸಂಸ್ಕರಣೆ (Self-Reformation) ಎಂದರೆ ತನ್ನ ಆಲೋಚನೆ, ನಡವಳಿಕೆ, ಮತ್ತು ಭಾವನೆಗಳನ್ನು ಸಕಾರಾತ್ಮಕವಾಗಿ ಪರಿವರ್ತಿಸಿಕೊಳ್ಳುವ ಪ್ರಕ್ರಿಯೆ. ಇದು ವ್ಯಕ್ತಿಯ ಆತ್ಮವಿಕಾಸದ ದಾರಿಯಲ್ಲಿ ನಿರಂತರವಾದ ಪ್ರಯತ್ನ ಮತ್ತು ಪ್ರಗತಿಯನ್ನು ಒಳಗೊಂಡಿರುತ್ತದೆ. ಇದರ ಮೂಲ ಉದ್ದೇಶವೆಂದರೆ ತನ್ನ ದೋಷಗಳನ್ನು ಗುರುತಿಸಿ, ಅವುಗಳನ್ನು ಸರಿಪಡಿಸಿಕೊಂಡು ಉತ್ತಮ ವ್ಯಕ್ತಿತ್ವವನ್ನು ರೂಪಿಸುವುದು.ಮತ್ತು ಮುಂದಿನ ಜೀವನದಲ್ಲಿ ಅಳವಡಿಸುವುದು ಆಗಿರುತ್ತದೆ ಎಂದು ಉಲ್ಲೇಖಿಸಿದರು ಮುಂದುವರಿದು ಇಂದು ಮಾದಕ ವಸ್ತುಗಳು ಸಮಾಜದಲ್ಲಿ ನೆಲೆಯೂರಿರುವ ಗಂಭೀರ ಸಮಸ್ಯೆ ಅಗಿದೆ ಮಾತ್ರವಲ್ಲ ಆತಂಕ ಸೃಷ್ಟಿಯಾಗುವಂತ ಘಟನೆಗಳು ನಡೆಯುತ್ತಿದೆ ಇದರ ಜಾಲ ದಿನ ದಿಂದ ದಿನಕ್ಕೆ ವ್ಯಾಪಿಸುತ್ತಿದೆ ಯುವಜನತೆಯ ಮೇಲೆ ಅತ್ಯಂತ ಪರಿಣಾಮಕಾರಿ ಪ್ರಭಾವ ಬೀರುತ್ತದೆ ಯುವಜನತೆಯ ಬಾಳನ್ನೆ ನಾಶಮಾಡುತ್ತದೆ ಸರಕಾರಗಳು ಈ ವಿಚಾರವಾಗಿ ಕಾನೂನನ್ನು ಮತ್ತಷ್ಟು ಬಲಿಷ್ಠ ಗೊಳಿಸಬೇಕು ಮಾದಕವಸ್ತು ವಿಗೆ ನಿಷೇಧ ಹೆರಲು ಕಟ್ಟುನಿಟ್ಟಿನ ಆಜ್ನೆ ಪಾಲನೆ ಯಾಗಬೇಕು ಮಾದಕ ಪಿಡುಗು ಸಮಸ್ಯೆಗೆ ಸಾಮೂಹಿಕ ಪ್ರಯತ್ನಗಳೇ ಪರಿಹಾರ. ಸಮಾಜದ ಪ್ರತಿಯೊಬ್ಬರ ಸಹಕಾರ ಇಲ್ಲಿ ಗಂಭೀರವಾಗಿ ಅಗತ್ಯವಿದೆ. ಎಂದು ಜಾಗೃತಿ ಮೂಡಿಸಿದರು

ಮುಸ್ಲಿಂ ಸಮುದಾಯವು ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ, ಧಾರ್ಮಿಕ ಕಾರ್ಯಕ್ರಮಗಳು, ಮತ್ತು ಸಾಮಾಜಿಕ ಸೇವಾ ಚಟುವಟಿಕೆಗಳೊಂದಿಗೆ ಈದ್ ಅನ್ನು ಆಚರಿಸುತ್ತಾರೆ. ಇದು ಸಹಿಷ್ಣುತೆ, ಸೌಹಾರ್ದತೆ, ಮತ್ತು ಮಾನವೀಯತೆಯ ಸಂದೇಶವನ್ನು ಹರಡುವ ಹಬ್ಬವಾಗಿದೆ
ಈದುಲ್ ಫಿತರ್ ಹಬ್ಬದ ಸಲುವಾಗಿ ಈದ್ ಕುತುಬ ಮತ್ತು ಪಾರ್ಥನೆಯನ್ನು ಖತೀಬರಾದ ಅಶ್ರಫ್ ಖಾಮಿಲ್ ಸಖಾಫಿ ನೆರವೇರಿಸಿದರು,ಜಮಾಯತ್ ಅಧ್ಯಕ್ಷರಾದ ಹಾಜಿ ಮಹಮ್ಮದ್ ಕೆಎಂಎಸ್, ಸೂಡ ಅಧ್ಯಕ್ಷ ಹಾಜಿ ಕೆಎಂ ಮುಸ್ತಫಾ, ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್ ಕುತ್ತಮೊಟ್ಟೆ, ನಗರ ಪಂಚಾಯತ್ ಸದಸ್ಯರಾದ ಉಮ್ಮರ್ ಕೆ ಎಸ್,ರಿಯಾಜ್ ಕಟ್ಟೆಕ್ಕಾರ್, ಶರೀಫ್ ಕಂಠಿ,ಸಿದ್ದೀಕ್ ಕೊಕ್ಕೊ,ಅನ್ಸಾರ್ ಅಧ್ಯಕ್ಷ ಅಬ್ದುಲ್ಲಾ ಹಾಜಿ ಕಟ್ಟೆಕ್ಕಾರ್, ಅನ್ಸಾರಿಯಾ ಅಧ್ಯಕ್ಷ ಅಬ್ದುಲ್ ಮಜೀದ್ ಜನತಾ,ಪ್ರಧಾನ ಕಾರ್ಯದರ್ಶಿ ಲತೀಫ್ ಹರ್ಲಡ್ಕ ಮೊದಲಾದವರು ಉಪಸ್ಥಿತರಿದ್ದರು.
ಈದ್ ನಮಾಜ್ ಬಳಿಕ ಸೇರಿದವರಲ್ಲರೂ ಪರಸ್ಪರ ಹಸ್ತಲಾಘ ಮಾಡಿದರು.
ನಂತರ ಸಾಮೂಹಿಕ ಪಾರ್ಥನೆ ಮತ್ತು ಕಬರ್ ಝಿಯಾರತ್ ಕಾರ್ಯಕ್ರಮ ನಡೆಯಿತು. ನಂತರ ಮನೆ ಮನೆಗಳಿಗೆ ಭೇಟಿ ನೀಡಿ ಈದ್ ಸಂದೇಶ ನಿಡುವುದರ ಮೂಲಕ ಈದ್ ಆಚರಿಸಿದರು






m

