ಮುಹ್ಯದ್ದೀನ್ ಜುಮಾ ಮಸೀದಿ ಜಾಲ್ಸೂರು ಅಡ್ಕಾರು ಇದರ ಅಧೀನದಲ್ಲಿರುವ ಹಯಾತುಲ್ ಇಸ್ಲಾಂ ಮದ್ರಸ ಜಾಲ್ಸೂರು ಅಡ್ಕಾರು ಹಾಗೂ ಜಾಲ್ಸೂರು ಟೌನ್ ಮದ್ರಸದ “ಅಕ್ಷರಲೋಕಕ್ಕೆ ಮೊದಲ ಹೆಜ್ಜೆ” ಮದ್ರಸ ಪ್ರಾರಂಭೋತ್ಸವ “ಫತ್ಹೇ ಮುಬಾರಕ್” ಕಾರ್ಯಕ್ರಮ ಏಪ್ರಿಲ್ 9 ರಂದು ಬುಧವಾರ ಬೆಳಗ್ಗೆ 7 ಗಂಟೆಗೆ ಮದ್ರಸ ಸಭಾಂಗಣದಲ್ಲಿ ನಡೆಯಿತು. ಅಬ್ಬಾಸ್ ಫೈಝಿ ಉಸ್ತಾದರು ದುಆ ನೆರವೇರಿಸಿದರು. ಸದರ್ ಮುಅಲ್ಲಿಂ ಶಾಹುಲ್ ಹಮೀದ್ ಸಖಾಫಿ ಸರ್ವರನ್ನು ಸ್ವಾಗತಿಸಿದರು. ಮಸೀದಿ ಖತೀಬ್ ಮುನೀರ್ ಸಅದಿ ಅಲ್ ಅರ್ಷದಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮದ್ರಸ ಕಾರ್ಯಚಟುವಟಿಕೆಗಳ ಬಗ್ಗೆ ಸವಿಸ್ತಾರವಾಗಿ ವಿಧ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಮಸೀದಿ ಅಧ್ಯಕ್ಷ ಜಿ.ಪಿ.ಅಬ್ದುಲ್ ಕುಂಞಿ, ಪ್ರಧಾನ ಕಾರ್ಯದರ್ಶಿ ಸಿ.ಪಿ ಅಬ್ದುಲ್ ರಝಾಕ್, ಅಬ್ದುಲ್ಲ ಹಾಜಿ ಕದಿಕಡ್ಕ , ಅಡ್ವಕೇಟ್ ಅಬೂಬಕರ್, ಅಬ್ದುಲ್ಲ ಪಿ ಎಂ, ಮುಅಲ್ಲಿಮರಾದ ಹಬೀಬ್ ಹಿಮಮಿ,ಸ್ವಾದಿಖ್ ಫಾಳಿಲಿ , ಸಾಬಿತ್ ಫಾಳಿಲಿ, ರಶೀದ್ ಮದನಿ ಹಾಗೂ ವಿಧ್ಯಾರ್ಥಿಗಳು, ಪೋಷಕರು, ಸರ್ವ ಜಮಾಅತ್ ಸದಸ್ಯರು ಉಪಸ್ಥಿತರಿದ್ದರು, ನೂತನ ವಿಧ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಕೂಡ ನಡೆಯಿತು. ಟೌನ್ ಮದ್ರಸ ಸದರ್ ಮುಅಲ್ಲಿಂ ಜುನೈದ್ ಹಿಮಮಿ ಸಖಾಫಿ ಅಲ್ ಹಾದಿ ವಂದಿಸಿದರು. ಸಿಹಿ ತಿಂಡಿ ಹಂಚುವ ಮೂಲಕ ಕಾರ್ಯಕ್ರಮವನ್ನು ಕೊನೆಗೊಳಿಸಲಾಯಿತು.






m
