ಪುತ್ತೂರು: ಸಂಪ್ಯದಲ್ಲಿ ಎಸ್ಸೆಸ್ಸೆಫ್ ಸ್ಥಾಪಕ ದಿನಾಚರಣೆ ಹಾಗೂ ಝುಮ್ರ ತರಗತಿ ಎಪ್ರಿಲ್ 29 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ಸಂಪ್ಯ ಯುನಿಟ್ ಕ್ಯಾಂಪಸ್ ಕಾರ್ಯದರ್ಶಿ ಹಾಫಿಳ್ ಬಾಸಿಲ್ ಕಲ್ಲರ್ಪೆ ದುಆ ನೆರವೇರಿಸಿ ಸಂದೇಶ ಭಾಷಣ ನಡೆಸಿದರು.

ಬಳಿಕ ಯುನಿಟ್ ಅಧ್ಯಕ್ಷರಾದ ಬಿ.ಕೆ.ಕಾಮಿಲ್ ಮದನಿ, ಕೋಶಾಧಿಕಾರಿ ಬಿ.ಕೆ.ಸ್ವಾದಿಕ್ ಅಲಿ ಯವರಿಂದ ‘ಡ್ರಗ್ಸ್ ಮನುಕುಲಕ್ಕೆ ಮಾರಕ’ ಎಂಬ ವಿಷಯದ ಕುರಿತು ಎಸ್ಸೆಸ್ಸೆಫ್ ಹಾಗೂ ರೈನ್ಬೋ ಮಕ್ಕಳಿಗೆ ಝುಮ್ರ ತರಗತಿ ನಡೆಯಿತು.
ನಂತರ ಝುಮ್ರ-1 ರಲ್ಲಿ ನಡೆಸಿದ ಕ್ವಿಝ್ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ಯುನಿಟ್ ಕಾರ್ಯದರ್ಶಿ ಝುಬೈರ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.




m
