Featured, ಅಂಕಣ, ಸ್ಥಳೀಯ

ಎಸ್ಸೆಸ್ಸೆಫ್ ಸಂಪ್ಯ ಯುನಿಟ್ ವಾರ್ಷಿಕ ಕೌನ್ಸಿಲ್ ಹಾಗೂ ಮಾಸಿಕ ಝುಮ್ರ ತರಗತಿ

ಅಧ್ಯಕ್ಷರಾಗಿ ಬಿ.ಕೆ.ಕಾಮಿಲ್ ಮದನಿ, ಪ್ರ.ಕಾರ್ಯದರ್ಶಿಯಾಗಿ ಝುಬೈರ್, ಕೋಶಾಧಿಕಾರಿಯಾಗಿ ಬಿ.ಕೆ.ಸ್ವಾದಿಕ್ ಅಲಿ ಪುನರಾಯ್ಕೆ

ಪುತ್ತೂರು: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ (ರಿ.) ಇದರ ಸಂಪ್ಯ ಶಾಖೆಯ ವಾರ್ಷಿಕ ಮಹಾಸಭೆ ಹಾಗೂ ಮಾಸಿಕ ಝುಮ್ರ ತರಗತಿ ಡಿಸೆಂಬರ್ 07 ರಂದು ಸಂಪ್ಯ ಎಸ್ಸೆಸ್ಸೆಫ್ ಕಛೇರಿಯಲ್ಲಿ ನಡೆಯಿತು.

ಯುನಿಟ್ ಅಧ್ಯಕ್ಷರಾದ ಬಿ.ಕೆ.ಕಾಮಿಲ್ ಮದನಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸೆಕ್ಟರ್ ನಾಯಕರಾದ ಶಾಹುಲ್ ಬನ್ನೂರು ಉದ್ಘಾಟಿಸಿದರು. ಬಳಿಕ ನಡೆದ ಮಾಸಿಕ ಝುಮ್ರ ತರಗತಿಗೆ ನೇತೃತ್ವ ನೀಡಿದ ಎಸ್ಸೆಸ್ಸೆಫ್ ಸಂಪ್ಯ ಯುನಿಟ್ ಉಸ್ತುವಾರಿಯಾದ ನರಿಮೊಗರು ಹಾರಿಸ್ ಸುರೈಜಿ ಸಖಾಫಿ ಉಸ್ತಾದರು ಎಲ್ಲರಿಗೂ ಮನಮುಟ್ಟುವ ರೀತಿಯಲ್ಲಿ ತರಗತಿ ನಡೆಸಿಕೊಟ್ಟರು.

ವೇದಿಕೆಯಲ್ಲಿ ಎಸ್ ವೈ ಎಸ್ ಸಂಪ್ಯ ಕೋಶಾಧಿಕಾರಿ ಅಶ್ರಫ್ ಕಲ್ಲರ್ಪೆ, ಇರ್ಫಾನ್ ನರಿಮೊಗರು ಮುಂತಾದವರು ಉಪಸ್ಥಿತರಿದ್ದರು. ನಂತರ ಪುತ್ತೂರು ಸೆಕ್ಟರ್ ನಾಯಕರ ಸಮ್ಮುಖದಲ್ಲಿ 2026-27 ರ ನೂತನ ಸಮಿತಿಯನ್ನು ರಚಿಸಲಾಯಿತು. ಝುಬೈರ್ ಸ್ವಾಗತಿಸಿ, ಸಫ್ವಾನ್ ವಂದಿಸಿದರು.

2026-27 ನೇ ಸಾಲಿನ ಪದಾಧಿಕಾರಿಗಳು:

ಬಿ.ಕೆ.ಕಾಮಿಲ್ ಮದನಿ (ಅಧ್ಯಕ್ಷರು), ಬಿ.ಕೆ.ಮನ್ಸೂರ್ ಅಲಿ (ಉಪಾಧ್ಯಕ್ಷರು), ಝುಬೈರ್ (ಪ್ರ.ಕಾರ್ಯದರ್ಶಿ), ಮುಹಮ್ಮದ್ ಮುಆಝ್ (ಕನ್ವೀನರ್), ಬಿ.ಕೆ.ಸ್ವಾದಿಕ್ ಅಲಿ (ಕೋಶಾಧಿಕಾರಿ), ಹಾಫಿಳ್ ಅಬ್ದುಲ್ ಬಾಸಿಲ್ (ದ‌ಅವಾ ಕಾರ್ಯದರ್ಶಿ), ನೌಶದ್ ಹಿಮಮಿ ಸಖಾಫಿ (ದಅವಾ ಕನ್ವೀನರ್), ಮುಹಮ್ಮದ್ ಮಿಕ್ದಾದ್ (ಕ್ಯಾಂಪಸ್ ಕಾರ್ಯದರ್ಶಿ), ಮುಹಮ್ಮದ್ ರಬೀಅ್ (ಕ್ಯಾಂಪಸ್ ಕನ್ವೀನರ್), ಮುಹಮ್ಮದ್ ಸಫ್ವಾನ್ (ರೈಂಬೋ ಕಾರ್ಯದರ್ಶಿ), ಮುಹಮ್ಮದ್ ರಾಫಿದ್ (ರೈಂಬೋ ಕನ್ವೀನರ್), ಹಮೀದ್ (ಅಮ್ಮಿ) (ಮೀಡಿಯಾ ಕಾರ್ಯದರ್ಶಿ), ಬಿ.ಕೆ.ನೌಫಲ್ (ಮೀಡಿಯಾ ಕನ್ವೀನರ್), ಬಿ.ಕೆ.ಯಾಸೀನ್ ಹಿಮಮಿ ಅಲ್ ಅಹ್ಸನಿ (ಕ್ಯೂ.ಡಿ ಸೆಕ್ರೆಟರಿ), ನಿಝಾಂ (ಕ್ಯೂ.ಡಿ ಕನ್ವೀನರ್), ಬಿ.ಕೆ.ಮುಹಮ್ಮದ್ ಫಾಖಿಹ್ (ಜಿ.ಡಿ ಸೆಕ್ರೆಟರಿ), ಮುಸ್ತಫಾ (ಜಿ.ಡಿ ಕನ್ವೀನರ್), ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳು.

ವರದಿ: ಬಿ.ಕೆ.ಎಸ್.ಎ ಸಂಪ್ಯ

Related Posts