Featured, ಅಂಕಣ, ಸ್ಥಳೀಯ

ಎಸ್ಸೆಸ್ಸೆಫ್ ಸಂಪ್ಯ: ಇಂದು ಬೃಹತ್ ಬುರ್ದಾ ಮಜ್ಲಿಸ್ ಹಾಗೂ ಇಶಲ್ ನೈಟ್

ಪುತ್ತೂರು: ಎಸ್ಸೆಸ್ಸೆಫ್ ಸಂಪ್ಯ ಇದರ ವತಿಯಿಂದ ಇಂದು (ಸೋಮವಾರ) ಬೃಹತ್ ಬುರ್ದಾ ಮಜ್ಲಿಸ್ ಹಾಗೂ ಇಶಲ್ ನೈಟ್ ಕಾರ್ಯಕ್ರಮವು ಸಂಪ್ಯ ಜಂಕ್ಷನ್ ನಲ್ಲಿ ಅಲಂಕೃತಗೊಂಡ ಮರ್ಹೂಂ ಬಾಪುಕುಂಞಿ ಉಸ್ತಾದ್ ವೇದಿಕೆಯಲ್ಲಿ ನಡೆಯಲಿಕ್ಕಿದೆ.

ಸಾಯಂಕಾಲ 5 ಗಂಟೆಗೆ ಆರಂಭವಾಗುವ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೋಗ್ರಾಂ ಕಮಿಟಿ ಚೇರ್ಮೇನ್ ಜನಾಬ್ ಉಸ್ಮಾನ್ ಹಾಜಿ ಚೆನ್ನಾರ್ ವಹಿಸಲಿದ್ದು, ಅಬುಲ್ ಬುಶ್ರಾ ಬಿ.ಕೆ.ಅಬ್ದುರ್ರಹ್ಮಾನ್ ಫೈಝಿ ಉಸ್ತಾದರು ದುಆಃ ನೆರವೇರಿಸಲಿದ್ದಾರೆ. ಬಾಳೆಪುಣಿ ಮುದರ್ರಿಸ್ ಬಿ.ಕೆ.ಮುಹಮ್ಮದ್ ಅಲಿ ಫೈಝಿ ಉಸ್ತಾದರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಮಗ್ರಿಬ್ ನಮಾಝಿನ ನಂತರ ನಡೆಯುವ ಗ್ರ್ಯಾಂಡ್ ಬುರ್ದಾ ಮಜ್ಲಿಸ್ ಹಾಗೂ ಇಶಲ್ ನೈಟ್ ಕಾರ್ಯಕ್ರಮದ ನೇತೃತ್ವವನ್ನು ಸೆಯ್ಯದ್ ತ್ವಾಹ ತಂಙಳ್ ಪೂಕೊಟ್ಟೂರು, ಶಹೀನ್ ಬಾಬು, ನಾಸಿಫ್ ಕ್ಯಾಲಿಕಟ್, ಇನ್ಶಾದ್ ಅಬೂಬಕ್ಕರ್, ಶಮೀಮ್ ಕಾಂತಪುರಂ ಮುಂತಾದ ಪ್ರಸಿದ್ದ ಗಾಯಕರು ವಹಿಸಲಿದ್ದಾರೆ.

ಬಳಿಕ ನಡೆಯುವ ದುಆಃ ಮಜ್ಲಿಸ್ ನೇತೃತ್ವವನ್ನು ಅಸ್ಸಯ್ಯದ್ ಸೆಯ್ಯಿದಲವಿ ಕೋಯಾ ತಂಙಳ್ (ಕುಂಜಿಲ ತಂಙಳ್) ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಹಲವಾರು ಉಲಮಾ ಉಮರಾ ನಾಯಕರುಗಳು ಭಾಗವಹಿಸಲಿದ್ದಾರೆ. ಸ್ತ್ರೀಯರಿಗೆ ಪ್ರತ್ಯೇಕ ಸ್ಥಳ ಸೌಕರ್ಯವಿದ್ದು, ಕೊನೆಯಲ್ಲಿ ತಬರ್ರುಕ್ ವಿತರಣೆ ನಡೆಯಲಿದೆ.

Related Posts