ಸಂಪ್ಯ ಯೂನಿಟ್ ಚಾಂಪಿಯನ್, ಕೆಮ್ಮಾಯಿ ಯೂನಿಟ್ ರನ್ನರ್ಸ್, ಬನ್ನೂರು ಯೂನಿಟ್ ತೃತೀಯ
ಪುತ್ತೂರು: ರಾಷ್ಟ್ರ ಮಟ್ಟದವರೆಗೆ ವರ್ಷಂಪ್ರತಿ ನಡೆಸಿಕೊಂಡು ಬರುವ ಎಸ್ಸೆಸ್ಸೆಫ್ ಸಾಹಿತ್ಯೋತ್ಸವ ಇದರ ಪುತ್ತೂರು ಸೆಕ್ಟರ್ ಮಟ್ಟದ ಸಾಹಿತ್ಯೋತ್ಸವವು ಜೂನ್ 28 ರಂದು ಪುತ್ತೂರು ಪುರಭವನದಲ್ಲಿ ನಡೆಯಿತು.
ಕೆಎಂಜೆ ನಾಯಕರಾದ ಯೂಸುಫ್ ಗೌಸಿಯಾ, ಕೊಂಬಾಳಿ ಇಸ್ಮಾಯಿಲ್ ಹಾಜಿ ನೇತೃತ್ವದಲ್ಲಿ ಧ್ವಜಾರೋಹಣದೊಂದಿಗೆ ಚಾಲನೆಗೊಂಡ ಕಾರ್ಯಕ್ರಮವನ್ನು ಡಿವಿಷನ್ ಅಧ್ಯಕ್ಷರಾದ ಸಲಾಂ ಹನೀಫಿಯವರು ಉದ್ಘಾಟಿಸಿದರು.
ಬಳಿಕ ಏಳು ವಿಭಾಗಗಳಲ್ಲಿ ಸೆಕ್ಟರಿನ ಒಂಭತ್ತು ಯೂನಿಟ್ ಗಳ, ನೂರ ಐವತ್ತು ಸ್ಪರ್ಧೆಗಳ, ನೂರ ಐವತ್ತು ಸ್ಪರ್ಧಾರ್ಥಿಗಳ ನಡುವೆ ನಡೆದ ಆವೇಶಭರಿತವಾದ ಸ್ಪರ್ಧಾ ಕೂಟದಲ್ಲಿ ಅಂತಿಮ ಫಲಿತಾಂಶ ಬರುವುದರೊಂದಿಗೆ ಕಳೆದ ಬಾರಿಯ ಚಾಂಪಿಯನ್ ಎಸ್ಸೆಸ್ಸೆಫ್ ಸಂಪ್ಯ ಯೂನಿಟ್ ಈ ಭಾರಿಯೂ ಚಾಂಪಿಯನ್ ಪಟ್ಟ ಅಲಂಕರಿಸಿಕೊಂಡಿತು. ಕೆಮ್ಮಾಯಿ ಯೂನಿಟ್ ರನ್ನರ್ಸ್ ಪಟ್ಟ ಪಡೆದುಕೊಂಡರೆ, ಬನ್ನೂರು ಯೂನಿಟ್ ತೃತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ಸಂಪ್ಯ ಯೂನಿಟ್ ನ ಬಿ.ಕೆ.ಕಾಮಿಲ್ ಮದನಿಯವರು ಸ್ಟೇಜ್ ಕಾರ್ಯಕ್ರಮಗಳಲ್ಲಿ ಅತ್ಯುತ್ತಮ ಗ್ರೇಡ್ ಅಂಕಗಳನ್ನು ಪಡೆಯುವ ಮೂಲಕ ‘ಸ್ಟಾರ್ ಆಫ್ ದಿ ಫೆಸ್ಟ್’ ಅವಾರ್ಡ್ ಪಡೆದರೆ, ಸ್ಟೇಜೇತರ ಕಾರ್ಯಕ್ರಮಗಳಲ್ಲಿ ಅದೇ ಯೂನಿಟ್ ನ ನೌಶದ್ ಹಿಮಮಿ ಸಖಾಫಿ ಅತ್ಯುತ್ತಮ ಗ್ರೇಡ್ ಅಂಕಗಳೊದಿಗೆ ‘ಪೆನ್ ಆಫ್ ದಿ ಫೆಸ್ಟ್’ ಅವಾರ್ಡ್ ಪಡೆದರು. ಇಲ್ಲಿ ಪ್ರಥಮ ಸ್ಥಾನಿಯಾದ ಸ್ಪರ್ಧಾರ್ಥಿಗಳು ಜುಲೈ 26 ರಂದು ನಡೆಯುವ ಡಿವಿಷನ್ ಮಟ್ಟದ ಸ್ಪರ್ಧೆಯಲ್ಲಿ ಪುತ್ತೂರು ಸೆಕ್ಟರನ್ನು ಪ್ರತಿನಿಧಿಸಲಿದ್ದಾರೆ.

ಕೊನೆಗೆ ನಡೆದ ಸಮಾರೋಪ ಸಮಾರಂಭದಲ್ಲಿ ಅಬುಲ್ ಬುಶ್ರಾ ಅಬ್ದುರ್ರಹ್ಮಾನ್ ಫೈಝಿ ಸಂಪ್ಯ ಉಸ್ತಾದರು ದುಅ ಗೆ ನೇತೃತ್ವ ನೀಡಿದರೆ, ಉಸ್ಮಾನ್ ಹಾಜಿ ಚೆನ್ನಾರ್ ಅಧ್ಯಕ್ಷತೆಯನ್ನು ವಹಿಸಿದ್ದರು. ಸ್ವಾಗತ ಸಮಿತಿ ಚೇರ್ಮೇನ್ ರಫೀಕ್ ಸಖಾಫಿ ಬಳ್ಳಾರಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಕೆಎಂಜೆ, ಎಸ್ ವೈ ಎಸ್, ಎಸ್ಸೆಸ್ಸೆಫ್ ನ ಹಲವಾರು ಉಲಮಾ ಉಮರಾ ನಾಯಕರುಗಳು ಉಪಸ್ಥಿತರಿದ್ದರು.
ಉದ್ಘಾಟನಾ ಸಮಾರಂಭದಲ್ಲಿ ಪ್ರೋಗ್ರಾಂ ಕಮಿಟಿ ಕನ್ವೀನರ್ ಅಹ್ಮದ್ ಹಾಶಿಮಿ ಅಜ್ಜಿಕಟ್ಟೆ ಸ್ವಾಗತಿಸಿದರೆ, ಸಮಾರೋಪ ಸಮಾರಂಭದಲ್ಲಿ ಸ್ವಾಗತ ಸಮಿತಿ ಕನ್ವೀನರ್ ಅಬ್ದುಲ್ ಖಾದರ್ ಸಂಟ್ಯಾರ್ ಸ್ವಾಗತಿಸಿದರು. ಸೆಕ್ಟರ್ ಅಧ್ಯಕ್ಷರಾದ ರಶೀದ್ ಹಿಮಮಿ ಸಖಾಫಿ ವಂದಿಸಿದರು.
ವರದಿ: ಬಿಕೆಎಸ್ಎ ಸಂಪ್ಯ





m
