Featured, ಅಂಕಣ, ಇತರೆ, ಸ್ಥಳೀಯ

ಸುಳ್ಯ: ಆಪರೇಷನ್ ಸಿಂಧೂರ ಕಾರ್ಯಚರಣೆ : ಕಯಾರ್ಥೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ವಿಶೇಷ ಪೂಜೆ*

ಕಾಯರ್ತೊಡಿ ಶ್ರೀ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನೇತೃತ್ವದಲ್ಲಿ ಭಾರತೀಯ ಸೇನಾಪಡೆಗಳು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರಗಾಮಿಗಳ ನೆಲೆಗಳಿಗೆ ಕ್ಷಿಪಣಿ ದಾಳಿಗಳನ್ನು ನಡೆಸಿ ಉಗ್ರಗಾಮಿಗಳ ನೆಲೆಗಳನ್ನು ನೆಲಸಮಮಾಡಿ ಪೆಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕಾರವಾಗಿ ಆಪರೇಷನ್ ಸಿಂಧೂರ ಕಾರ್ಯಚರಣೆ ಮಾಡಿರುವ ಹಿನ್ನೆಲೆಯಲ್ಲಿ ದೇಶದ ವೀರ ಸೈನಿಕರಿಗೆ ಧೈರ್ಯ, ಶಕ್ತಿ, ಮತ್ತು ಆಯುರಾರೋಗ್ಯ ನೀಡಲಿ ಮತ್ತು ಇನ್ನು ಮುಂದೆಯೂ ದೇಶದ ರಕ್ಷಣೆ ಮತ್ತು ಭಯೋತ್ಪಾದಕರನ್ನು ಸದೆಬಡಿಯುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ವಿಶೇಷ ಪೂಜೆ ನಡೆಸಲಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ ವೆಂಕಪ್ಪ ಗೌಡ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿಸಿ ಜಯರಾಮ, ಪ್ರದಾನ ಕಾರ್ಯದರ್ಶಿ ಪಿ ಎಸ್ ಗಂಗಾಧರ, ತಾಲೂಕ್ ಪಂಚಾಯತ್ ಇದರ ಕೆಡಿಪಿ ನಾಮ ನಿರ್ದೇಶನ ಸದಸ್ಯರಾ ಧರ್ಮಪಾಲ ಕೊಯ0ಗಾಜೆ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜತ್ತಪ್ಪ ರೈ ಆರಂಭರೂ, ವಿಠ್ಠಲ ಸರ್ವೇಯರ್, ಶೃತಿ ಕಾಯರ್ತೊಡಿ, ಶಶಿಧರ ಮರ್ಕಂಜ, ಕಿಶನ್ ಜಬಳೆ, ನಿರಂಜನ ಮತ್ತಿತರರು ಉಪಸ್ಥಿತರಿದ್ದರು.

m

Related Posts