ಮಾಣಿ : ಇಲ್ಲಿನ ಸೂರಿಕುಮೇರು ಜಂಕ್ಷನ್ ಸಮೀಪದ ಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಕಾಯರಡ್ಕ ಎಂಬಲ್ಲಿ ಕೋಳಿ ಅಂಗಡಿ ಉಮ್ಮರ್ ಎಂಬವರ ಮನೆಗೆ ತಾಗಿಕೊಂಡೇ ಅಪಾಯಕಾರಿ ಬೃಹತ್ ಗುಡ್ಡವೊಂದು ಇರುವುದರಿಂದ ಮನೆ ಮಂದಿ ಭಯಭೀತರಾಗಿ ಜೀವನ ಸಾಗಿಸುತ್ತಿದ್ದು ನಿಲ್ಲದ ವಿಪರೀತ ಮಳೆಯಿಂದ ಅಲ್ಲಲ್ಲಿ ದುರ್ಘಟನೆಗಳು ಸಂಭವಿಸುತ್ತಿದ್ದು,ಈ ಗುಡ್ಡವು ಭಾರೀ ಗಾತ್ರದ್ದು ಮತ್ತು ಅಪಾಯಕಾರಿಯಾಗಿಯೂ ಇರುವುದರಿಂದ ಯಾವುದೇ ಅನಾಹುತ ಸಂಭವಿಸುವ ಮುನ್ನ ಸಂಬಂಧಪಟ್ಟ ಬಾಳ್ತಿಲ ಗ್ರಾಮ ಪಂಚಾಯತ್, ಬಂಟ್ವಾಳ ತಹಶೀಲ್ದಾರ್,ಶಾಸಕರು,ಸಂಸದರ ಗಮನಕ್ಕೆ ಮಾಧ್ಯಮದ ಮೂಲಕ ಗಮನಕ್ಕೆ ತರುತ್ತಿದ್ದೇವೆ,ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಇದರ ಬಗ್ಗೆ ದೂರು ನೀಡಲಾಗಿದೆ ಅದರ ಪ್ರತಿ ಕೈಯಲ್ಲಿ ಇದೆ,ಗುಡ್ಡವು ಇನ್ನೊಬ್ಬರಿಗೆ ಸೇರಿದ ಜಾಗವಾಗಿರುವುದರಿಂದ ಅವರು ತೆರವುಗೊಳಿಸದೇ ಇರುವುದರಿಂದ ಇದು ಭಾರೀ ಅನಾಹುತಕ್ಕೆ ಕಾರಣವಾಗಲಿದ್ದು ಅದೇ ಪರಿಸರದ ಎರಡು ಮೂರು ಮನೆಗಳಿಗೂ ಇದರರಿಂದ ಅಪಾಯವಿದೆ, ಆದ್ದುದ್ದರಿಂದ ಈ ಕೂಡಲೇ ಜಿಲ್ಲಾಧಿಕಾರಿಗಳು ಭೇಟಿನೀಡಿ ಸೂಕ್ತ ಪರಿಹಾರ ಮಾಡಿಕೊಡಬೇಕಾಗಿದೆ.




m
