Featured, ಅಂಕಣ, ಸ್ಥಳೀಯ

ಜಿಲ್ಲಾ ನಗರ ಯೋಜನಾ ಸಹಾಯಕ ನಿರ್ದೇಶಕ (ಪ್ರಭಾರ ) ಪ್ರವೀಣ್ ರವರಿಗೆ ಮಂಡ್ಯ ಕ್ಕೆ ವರ್ಗಾವಣೆ ಬೀಳ್ಕೊಡುಗೆ

ಮೂಡಬಿದ್ರಿ, ಸುಳ್ಯ, ಯೋಜನಾ ಪ್ರಾಧಿಕಾರಗಳ ಸದಸ್ಯ ಕಾರ್ಯದರ್ಶಿ ಯಾಗಿ ಜಿಲ್ಲಾ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕರಾಗಿ ಕರ್ತವ್ಯ ದಲ್ಲಿದ್ದು ಇದೀಗ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ವರ್ಗವಣೆ ಗೊಂಡು ತೆರಳುತ್ತಿರುವ ಪ್ರವೀಣ್ ರವರನ್ನು ಇಂದು ಮಂಗಳೂರು ಪಡೀಲ್ ಜಿಲ್ಲಾಧಕಾರಿಗಳ ಕಚೇರಿ ಸಂಕೀರ್ಣ ದಲ್ಲಿರುವ ಜಿಲ್ಲಾ ನಗರ ಮತ್ತು ಗ್ರಾಮಾoತರ ಯೋಜನಾ ಇಲಾಖೆಯ ಜಿಲ್ಲಾ ಕಚೇರಿ ಯಲ್ಲಿ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು, ಅಧ್ಯಕ್ಷತೆ ವಹಿಸಿದ್ದ ಸುಳ್ಯ ನಗರ ಯೋಜನಾ ಪ್ರಾಧಿಕಾರ (ಸೂಡ) ಅಧ್ಯಕ್ಷ ಕೆ. ಎಂ. ಮುಸ್ತಫ ಮಾತನಾಡಿ ಜಿಲ್ಲೆಯಲ್ಲಿ 8 ವರ್ಷ ಗಳ ಸುಧೀರ್ಘ ಸೇವೆ ಸಲ್ಲಿಸಿ ಜನ ಸ್ನೇಹಿ ಅಧಿಕಾರಿ ಎನಿಸಿಕೊಂಡಿರುವ ಪ್ರವೀಣ್ ರವರ ಕಾರ್ಯ ಶೈಲಿ ಮತ್ತು ಸಾರ್ವಜನಿಕ ಸಂಬಂಧ ಇತರ ಅಧಿಕಾರಿಗಳಿಗೂ ಮಾದರಿ ಎಂದರು

ಜಿಲ್ಲಾ ನಗರಾಭಿವೃದ್ಧಿ ಕೋಶ ಇದರ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಅರುಣ್. ಕೆ. ಪ್ರವೀಣ್ ರವರನ್ನು ಸನ್ಮಾನಿಸಿದರು

ಈ ಸಂದರ್ಭದಲ್ಲಿ ಟೌನ್ ಪ್ಲಾನರ್ , ಸಂತೋಷ್ ಮತ್ತು ಮೋಕ್ಷ ರಾಣಿ, ಕಚೇರಿ ಆದೀಕ್ಷಕಿ ಶ್ರೀಮತಿ ರೂಪಾ,ಸಿಬ್ಬಂದಿ ಗಳಾದ ಮಲ್ಲಿಕಾ ಉಪಸ್ಥಿತರಿದ್ದರು

ನಗರ ಯೋಜಕರಾದ ಫೈರೋಜ್ ಸ್ವಾಗತಿಸಿ ವಂದಿಸಿದರು

m

Related Posts