Featured, ಅಂಕಣ, ಸ್ಥಳೀಯ

ಮರ್ಕಂಜ: ಶೂನ್ಯ ಶಿಕ್ಷಕ ದಾಸರಬೈಲು ಕಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಕರನ್ನು ನೀಡುವಂತೆ ರಾಧಾಕೃಷ್ಣ ಬೊಳ್ಳೂರು ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರಿಂದ ಶಿಕ್ಷಣಾಧಿಕಾರಿಗೆ ಮನವಿ

ಒಬ್ಬರು ಖಾಯಂ ಶಿಕ್ಷಕರನ್ನು ನೇಮಿಸಿ ಆದೇಶ ಹೊರಡಿಸಿದ ಶಿಕ್ಷಣಾಧಿಕಾರಿ

ಸುಳ್ಯ ತಾಲೂಕಿನ ದಾಸರಬೈಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದ ಮುಚ್ಚುವ ಹಂತದಲ್ಲಿದ್ದು, ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 17 ಮಕ್ಕಳ ಭವಿಷ್ಯ ಅತಂತ್ರವಾಗಿದೆ. ದಾಸರಬೈಲು ಕಿರಿಯ ಪ್ರಾಥಮಿಕ ಶಾಲೆಯ ಎಸ್ ಡಿ ಎಂ ಸಿ ಸದಸ್ಯ ಬಾಲಕೃಷ್ಣ ಗೌಡರು ಬ್ಲಾಕ್ ಕಾಂಗ್ರೆಸ್ ನಿಯೋಜಿತ ಅಧ್ಯಕ್ಷ, ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ರವರನ್ನು ಭೇಟಿಯಾಗಿ ಶಿಕ್ಷಕರ ಕೊರತೆಯಿಂದ ಶೂನ್ಯ ಶಿಕ್ಷಕ ಶಾಲೆಯಗಿರುವ ದಾಸರಬೈಲು ಶಾಲೆಗೆ ಶಿಕ್ಷಕರನ್ನು ನೇಮಿಸುವಂತೆ ಶಿಕ್ಷಣಾಧಿಕಾರಿಗಳಿಗೆ ತಿಳಿಸುವಂತೆ ಕೋರಿಕೊಂಡ ಮೇರೆಗೆ ತಕ್ಷಣ ಸುಳ್ಯ ತಾಲೂಕು ಶಿಕ್ಷಣಾಧಿಕಾರಿಗಳನ್ನು ಕಾಂಗ್ರೆಸ್ ಮುಖಂಡರೊಂದಿಗೆ ಭೇಟಿಯಾಗಿ ಶಾಲೆಯ ಮಕ್ಕಳ ಭವಿಷ್ಯ ಮತ್ತು ಶಾಲೆಯ ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡಿದರು. ಕೂಡಲೇ ಶಿಕ್ಷಣಾಧಿಕಾರಿಯವರು ಒಬ್ಬರು ಖಾಯಂ ಶಿಕ್ಷಕರನ್ನು ನೇಮಿಸಿ ಆದೇಶ ಮಾಡಿದರು. ಈ ಶಾಲೆಯಲ್ಲಿ ಒಬ್ಬರು ಅತಿಥಿ ಶಿಕ್ಷಕರಿದ್ದು ಈಗ 2 ಶಿಕ್ಷಕರನ್ನು ಹೊಂದಿದಂತಾಗಿದೆ.

ನಿಯೋಗದಲ್ಲಿ ಸುಳ್ಯ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯ ಭವಾನಿಶಂಕರ್ ಕಲ್ಮಡ್ಕ, ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಎಂ ಜೆ, ಯುವ ಮುಖಂಡ ವಿಷ್ಣುಪ್ರಸಾದ್ ಕೆದಿಲಾಯ, ದಾಸರಬೈಲು ಶಾಲೆಯ ಎಸ್ ಡಿ ಎಂ ಸಿ ಸದಸ್ಯ ಬಾಲಕೃಷ್ಣ ಗೌಡ ಉಪಸ್ಥಿತರಿದ್ದರು.

m

Related Posts