Featured, ಇತರೆ, ಸ್ಥಳೀಯ

ಮುಸ್ಲಿಂ ಯೂತ್ ಫೆಡರೇಶನ್ ಸುಳ್ಯ ತಾಲೂಕು ಸಮಿತಿ. ಇದರ ಆಶ್ರಯದಲ್ಲಿ ನಾಳೆ ಜೂನ್ 13 ಮತ್ತು 14 ರಂದು ಅದಾ‌ರ್ ತಿದ್ದುಪಡಿ, ಮತ್ತು ನೋಂದಣಿ ಶಿಬಿರ

ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ,ಇವಾರ್ತೆ ಡಿಜಿಟಲ್ ಮೀಡಿಯಾ ಇದರ ಸಹಕಾರದೊಂದಿಗೆ

ಸುಳ್ಯ : ಮುಸ್ಲಿಂ ಯೂತ್ ಫೆಡರೇಶನ್ ಸುಳ್ಯ ತಾಲೂಕು ಸಮಿತಿ ಇದರ ಆಶ್ರಯದಲ್ಲಿ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ,ಇವಾರ್ತೆ ಡಿಜಿಟಲ್ ಮೀಡಿಯಾ ಇದರ ಸಹಕಾರದಿಂದ, ಜೂನ್ 13 ನಾಳೆ ಮತ್ತು ಜೂನ್ 14 ರಂದು ( ಶುಕ್ರವಾರ ಮತ್ತು ಶನಿವಾರ) ಅದಾ‌ರ್ ತಿದ್ದುಪಡಿ ಮತ್ತು ನೋಂದಣಿ ಶಿಬಿರ ನಡೆಯಲಿದೆ

ಸುಳ್ಯ ತಾಲೂಕಿನಲ್ಲಿ ಬೆಳ್ಳಾರೆ ಪೊಸ್ಟ್ ಆಫೀಸ್ ಬಿಟ್ಟರೆ ತಾಲೂಕಿನ ಇತರ ಯಾವುದೇ ಕಡೆಗಳಲ್ಲಿ ಆಧಾರ್ ಸೇವಾ ಕೇಂದ್ರ ಕಾರ್ಯಾಚರಿಸುತ್ತಿಲ್ಲ. ಸುಮಾರು 6 ತಿಂಗಳಿಂದ ಸುಳ್ಯ ನಗರದಲ್ಲಿ ಕಾರ್ಯಾಚರಿಸುತ್ತಿದ್ದ ಎಲ್ಲಾ ಅಧಾರ್ ಸೇವಾ ಕೇಂದ್ರಗಳು, ಸೇವೆ ಸ್ಥಗಿತ ಗೊಳಿಸಿದೆ,

ಶೈಕ್ಷಣಿಕ, ಸರಕಾರಿ ಸವಲತ್ತು, ಸರಕಾರ ಸಂಬಂಧಿಸಿದ ಕೆಲಸ ಕಾರ್ಯಗಳಿಗೆ, ವೈಯಕ್ತಿಕ ದಾಖಲೆ ಕೆಲಸ ಕಾರ್ಯಗಳಿಗೆ ಆಧಾರ್ ಪ್ರಮುಖ ದಾಖಲೆ ಯಾಗಿರುತ್ತದೆ. ಹೊಸ ಆಧಾರ್, ಆಧಾರ್ ತಿದ್ದುಪಡಿ, ಅಪ್ಡೇಟ್, ಮೊಬೈಲ್, ಸಂಖ್ಯೆ, ಇಮೇಲ್, ಇನ್ನಿತರ ಅದಾರ್ ಕ್ರಿಯೆಗಳನ್ನು ನೊಂದಾಯಿಸಲು, ಸುಳ್ಯ ತಾಲೂಕಿನಲ್ಲಿ ಅಧಾರ್ ಸೇವಾ ಕೇಂದ್ರಗಳು ಇಲ್ಲದೆ ವಿಧ್ಯಾರ್ಥಿಗಳು ಸಾರ್ವಜನಿಕರು ಬಹಳ ಪ್ರಯಾಸ ಪಡುತ್ತಿದ್ದು, ನೆರೆ ರಾಜ್ಯದ ಗಡಿಗಳಲ್ಲಿ ಇರುವ ಅಕ್ಷಯ ಕೇಂದ್ರಗಳಗೆ ಹೋಗಿ ಆಧಾರ್ ಸೇವೆಗಳನ್ನು ಪಡೆಯಬೇಕಾದ ಪರಿಸ್ಥಿತಿ ಉದ್ಬವಿಸಿದೆ. ಆದರೆ ಕೆಲವೊಂದು ಸಂಘ ಸಂಸ್ಥೆಗಳು ಮುಂದೆಬಂದು ಸಾರ್ವಜನಿಕ ಹಿತದೃಷ್ಟಿಯ ನೆಲೆಯಲ್ಲಿ, ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ಸಹಕಾರದೊಂದಿಗೆ, ಅದಾ‌ರ್ ತಿದ್ದುಪಡಿ ಮತ್ತು ನೋಂದಣಿ ಶಿಬಿರ ನಡೆಸಿಕೊಂಡು ಬರುತ್ತಿದ್ದು ಈ ನಿಟ್ಟಿನಲ್ಲಿ ನಾಳೆ ಸುಳ್ಯದ ಅನ್ಸಾರ್ ಕಾಂಪ್ಲೆಕ್ಸ್ ನಲ್ಲಿ , ಮುಸ್ಲಿಂ ಯೂತ್ ಫೆಡರೇಶನ್ ಸುಳ್ಯ ತಾಲೂಕು ಸಮಿತಿ ವತಿಯಿಂದ, ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ,ಇವಾರ್ತೆ ಡಿಜಿಟಲ್ ಮೀಡಿಯಾ ಇದರ ಸಹಕಾರದಿಂದ, ಅದಾ‌ರ್ ತಿದ್ದುಪಡಿ ಮತ್ತು ನೋಂದಣಿ ಶಿಬಿರ ನಡೆಯಲಿದೆ ಇದರ ಸದುಪಯೋಗ ವನ್ನು ಸಾರ್ವಜನಿಕರು ಬಳಸಿಕೊಳ್ಳಬಹುದು ಎಂದು ಸುಳ್ಯ ತಾಲೂಕು ಮುಸ್ಲಿಂ ಯೂತ್ ಫೆಡರೇಶನ್ ಅಧ್ಯಕ್ಷರಾದ ಉಮ್ಮರ್ ಕೆ ಎಸ್ ಮುಖಂಡರಾದ ಶರೀಫ್ ಕಂಠಿ, ಇಕ್ಬಾಲ್ ಸುಣ್ಣಮೂಲೆ, ಉನೈಸ್ ಪೆರಾಜೆ,ಕಲಂದರ್ ಎಲಿಮಲೆ, ಮಾಧ್ಯಮ ಕ್ಕೆ ಮಾಹಿತಿ ನೀಡಿದ್ದಾರೆ

m

 

Related Posts