ನಗುತ್ತಿರುವ ಸೆಲ್ಫಿಯ ಭರವಸೆಯಿಂದ ತುಂಬಿದ ಕುಟುಂಬ” ಭೂಮಿಗೆ ವಿದಾಯ ಹೇಳಿತ್ತು…!

ಇನ್ನೂ
ಚಿಂಟು ಮೂರುವರ್ಷದ ಪುಟ್ಟ ಬಾಲಕ ತನ್ನ ಅಜ್ಜಿ ಗಾಗಿ ಒಂದು ಸೆಲ್ಫಿ ತೆಗಿಯಮ್ಮ..!! ಅ ಪುಟ್ಟ ಕಂದ ಅಂದಿರಬಹುದು ….ಕಳೆದು ಹೊದ ಮುತ್ತಿನ ಬಗ್ಗೆ ಚಿಂಟು ವಿನ ಅಜ್ಜಿಯ ಮಾತುಗಳು…. ಆ ಕುಟುಂಬ ಕಣ್ಣೀರಿನ ಶೋಕ ಸಾಗರದಲ್ಲಿ ಮುಳುಗಿದೆ….
ಹೌದು… ನಗುತ್ತಿರುವ ಸೆಲ್ಫಿಯ ಭರವಸೆಯಿಂದ ತುಂಬಿದ ಕುಟುಂಬ”, “ಆಕಾಶಕ್ಕೆ ಕಳೆದುಹೋಯಿತು” ನಿನ್ನೆ ನಡೆದ ಕರಾಳ ದುರಂತದಲ್ಲಿ ಮಡಿದವರ ಒಂದೊಂದೇ ಭಾವನಾತ್ಮಕ ಚಿತ್ರಗಳು, ಸಾರಿ ಹೇಳುವ ಮಾನವೀಯ ಸಂಬಂಧಗಳು… ಇನ್ನೂ ಸಾಫ್ಟ್‌ವೇರ್ ವೃತ್ತಿಪರರಾಗಿದ್ದ ರಾಜಸ್ಥಾನದ ಬನ್ಸ್ವಾರಾ ಮೂಲದ ಪ್ರತೀಕ್ ಜೋಶಿ ಅವರು, ಪತ್ನಿ ಮತ್ತು ಮೂವರು ಮುದ್ದಾದ ಮಕ್ಕಳೊಂದಿಗೆ ಲಂಡನ್ ನಲ್ಲಿ ಜೀವನ ಕಟ್ಟುವ ಕನಸು ಕಂಡು ತನ್ನ ಮೂಲ ಕುಟುಂಬಕ್ಕೆ ಯಾತ್ರೆಯ ವಿದಾಯ ಹೇಳಿ ಭವಿಷ್ಯವು ಕೈಗೆಟುಕುವ ದೂರದಲ್ಲಿದೆ ಎಂದು ಪ್ರಯಾಣ ಆರಂಭಿಸಿದ್ದರು. ಐದು ವರ್ಷದ ಅವಳಿ ಹೆಣ್ಣು ಮಕ್ಕಳು ಸೇರಿ ಉತ್ಸಾಹದಿಂದ ತುಂಬಿದ ಐವರ ಕುಟುಂಬವು ಲಂಡನ್‌ಗೆ ಪ್ರಯಾಣಿಸಲು ಏರ್ ಇಂಡಿಯಾ ವಿಮಾನ 171 ಅನ್ನು ಹತ್ತಿತ್ತು. ಸೀಟುಗಳಲ್ಲಿ ಕುಳಿತ ಬಳಿಕ ಸೆಲ್ಫಿ ಕ್ಲಿಕ್ಕಿಸಿ ಸಂಬಂಧಿಕರಿಗೆ ಕಳುಹಿಸಿದರು. ಹೊಸ ಜೀವನಕ್ಕೆ ಏಕಮುಖ ಪ್ರಯಾಣ ಎಂದಿಗೂ ಸಾಧ್ಯವಾಗಲಿಲ್ಲ.ಕೆಲವೇ ಕ್ಷಣಗಳಲ್ಲಿ, ಕನಸುಗಳು ಬೂದಿಯಾಯಿತು. ಮುದ್ದಾದ ಕುಟುಂಬದಲ್ಲಿ ಯಾರೂ ಬದುಕುಳಿಯಲಿಲ್ಲ. ತನ್ನ ಕುಟುಂಬಕ್ಕೆ ಸೀಟುಗಳಲ್ಲಿ ಕುಳಿತ ಬಳಿಕ ತೆಗೆದ ಸೆಲ್ಫಿ ಚಿತ್ರಗಳು ಬಾರಿ ವೈರಲ್ ಅಗಿದೆ.! ಮನುಷ್ಯ ಮಾನವೀಯ ಸಂಬಂಧಗಳ ಮೌನ ಸಂದೇಶ ಸಾರಿದೆ! ,ಉಳಿದದ್ದು ಖಾಲಿ ನೆನಪುಗಳು ಮಾತ್ರ…!!!!





m

