Featured, ಇತರೆ, ಸ್ಥಳೀಯ

“ಒಂದು ನೆಲೆ, ಸಾವಿರ ನೆನಪುಗಳು” – ಗೂನಡ್ಕದಲ್ಲಿ ಪುತ್ರಿಕಾರ್ಸ್ ಕುಟುಂಬ ಸಮ್ಮಿಲನ

“ಬಾಳ ಹೆಜ್ಜೆಗುರುತುಗಳಲ್ಲಿ ಬೆರೆತ ಕುಟುಂಬ ಬಂಧುಗಳ ಬಾಂಧವ್ಯ”

ಸ್ನೇಹ, ಬಾಂಧವ್ಯ, ನೆನಪು, ಪ್ರೀತಿ – ಇವೆಲ್ಲವನ್ನೂ ಒಟ್ಟಿಗೆ ಜೋಡಿಸಿದ ಅಮೂಲ್ಯ ಕ್ಷಣಗಳು ಗೂನಡ್ಕದ ಸಜ್ಜನ ಸಭಾ ಭವನದಲ್ಲಿ ಮೂಡಿಬಂತು ಪುತ್ರಿಕಾರ್ಸ್ ಕುಟುಂಬದ ಎಲ್ಲಾ ಪೀಳಿಗೆಗಳು ಒಂದೇ ನೆಲೆಯಲ್ಲಿ ಒಂದಾಗುವ ಈ ಸಮ್ಮಿಲನವು ಕೇವಲ ಸಮಾವೇಶವಲ್ಲ – ಅದು ಸಂಬಂಧಗಳ ಪುನರಾವೃತ್ತಿ, ಪ್ರೀತಿಯ ಪುನರ್‌ಜೀವನ! ಸೃಷ್ಟಿಯಾಯಿತು…

ಪುತ್ರಿಕ್ಕಾರ್ಸ್ ಚಾರಿಟೇಬಲ್ ಫೌಂಡೇಶನ್ ಗೂನಡ್ಕ ಇದರ ಅಧೀನದಲ್ಲಿ ಸಂಘಟಿಸಲ್ಪಟ್ಟ ಪುತ್ರಿ ಉಮ್ಮರ್ಚ ಕುಟುಂಬದ ಮಹಾ ಸಮ್ಮಿಲನ ಕಾರ್ಯಕ್ರಮ. ಜೂ 29ರಂದು ಸಜ್ಜನ ಸಭಾ ಭವನದಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು. ಪೇರಡ್ಕ ಮಖಾಂ,ಹಾಗೂ ಅಗಲಿದ ಹಿರಿಯರ ಖಬರ್ ಝಿಯಾರತ್ ನೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸದಸ್ಯರ ನೊಂದಣಿ ನಂತರ ನಡೆದ ಸಬಾ ಕಾರ್ಯಕ್ರಮದ ಅದ್ಯಕ್ಷತೆಯನ್ನು ಪುತ್ರಿಕಾರ್ಸ್ ಕುಟುಂಬ ಸಮ್ಮಿಲನದ ಅದ್ಯಕ್ಷರಾದ ಪಿ ಎ ಉಮ್ಮರ್ ಹಾಜಿ ವಹಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು. ಟಿ.ಬಿ.ಉಮ್ಮರ್ ನೆರವೇರಿಸಿ ಮಾತನಾಡಿ ಕುಟುಂಬ ನಡೆದು ಬಂದ ಹಾದಿಯನ್ನು ವಿವರಿಸಿದರು.
ಕುಟುಂಬ ಸದಸ್ಯರಿಗೆ ವಿವಿಧ ರೀತಿಯ ಕಲಾ, ಸಾಹಿತ್ಯ ಕ್ರೀಡಾ ಸ್ಪರ್ಧೆಗಳು ಏರ್ಪಡಿಸಲಾಗಿತ್ತು. ಹಗ್ಗ ಜಗ್ಗಾಟ ಸ್ಪರ್ಧೆ ಬಹಳ ಪೈಫೊಟಿಯಿಂದ ಕೂಡಿ ರೋಮಾಂಚಕಾರಿಯಾಗಿತ್ತು. ಕುಟುಂಬದ ಮಹಿಳಾ ಸದಸ್ಯರಿಗೆ ಪ್ರತ್ಯೇಕ ಸ್ಪರ್ಧೆಗಳು ನಡೆದವು.
ಕಾರ್ಯಕ್ರಮದಲ್ಲಿ ಕುಟುಂಬದಲ್ಲಿ ವಿಶೇಷ ಸಾದನೆಗೈದ ಮತ್ತು ಕಳೆದ ಶೈಕ್ಷಣಿಕ ವರ್ಷದಲ್ಲಿ ಅತೀ ಹೆಚ್ಚು ಅಂಕ ಪಡೆದ ಕುಟುಂಬದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿವಿಧ ಕಾರ್ಯಕ್ರಮಗಳಲ್ಲಿ ಮಕ್ಕಳ ಉತ್ಸಾಹ, ಹಿರಿಯರ ಆಶೀರ್ವಾದ, ಹಾಗೂ ತಲೆಮಾರಿಗೆ ತಲೆಮಾರಿನ ಜೋಡಣೆ,ಪರಂಪರೆ, ಗೌರವ, ಮೌಲ್ಯಗಳು ಸಭಾ ಭವನದಲ್ಲಿ ಮಿಳಿತಗೊಂಡವು.
ಸ್ಪರ್ಧೆ ಕಾರ್ಯಕ್ರಮದ ಉಸ್ತುವಾರಿಗಳಾಗಿ ಕುಟುಂಬ ಸದಸ್ಯ ರಾದ ಸಾದಿಕ್ ಮಾಸ್ತರ್, ಇಜಾಝ್, ಕಾದರ್ ಮೊಟ್ಟೆಂಗಾರ್,ಹನೀಫ್ ಇವರುಗಳು ನೇತೃತ್ವ ವಹಿಸಿ ಸಹಕರಿಸಿದರು

ಸಂಜೆ ನಡೆದ ಸಮಾರೊಪ ಸಮಾರಂಭ ಕಾರ್ಯಕ್ರಮದಲ್ಲಿ. ಸನ್ಮಾನ ಸ್ವೀಕರಿಸಿ ಮಾತನಾಡಿದ  ಸುಳ್ಯ ಪತ್ರ ಕರ್ತರ ಸಂಘದ ಅದ್ಯಕ್ಷರಾದ ಶರೀಪ್ ಜಟ್ಟಿಪಳ್ಳ ಅವರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.  ಜಿಲ್ಲಾ ಎನ್ ಎಸ್ ಯು ಐ ನಾಯಕರಾದ ಉಬೈಸ್ ಗೂನಡ್ಕ ಮಾತನಾಡಿ ಯುವಕರನ್ನು ಪ್ರೊತ್ಸಾಹಿಸಿದರು.  ಕಾದರ್ ಮೊಟ್ಟೆಂಗಾರ್ ಮಾತನಾಡಿ ಪುತ್ರಿ ಉಮ್ಮರ್ಚಾ ರವರು ಊರಿನಲ್ಲಿ ನೆಲೆಸಿ ಧಾರ್ಮಿಕ ಕಾರ್ಯಕ್ರಮಕ್ಕೆ ನೇತ್ರತ್ವ ನೀಡಿ ಧಾರ್ಮಿಕ ಶಿಕ್ಷಣದ ಗುರುಗಳಾಗಿ ಸೇವೆ ಸಲ್ಲಿಸಿರುವುದು ನಮಗೆಲ್ಲ ಮಾದರಿ ಎಂದರು.
ಪ್ರಸ್ತುತ ಸನ್ನಿವೇಶದಲ್ಲಿ ಕುಟುಂಬ ನಿರ್ವಹಣೆಯಲಿ ಕುಟುಂಬಸ್ಥರು ಪಾಲಿಸಬೇಕಾದ ಜವಾಬ್ದಾರಿ ಎಂಬ ವಿಷಯಗಳ ಕುರಿತು ಖ್ಯಾತ ವಾಗ್ಮಿ ಮುದುಗುಡ ಅಬ್ದುಲ್ ಖಾದರ್ ಸಖಾಪಿ ಪ್ರವಚನ ನೀಡಿದರು. ಪುತ್ತಿರಿಕಾರ್ಸ್ ಚಾರಿಟಿ ಫೌಂಡೇಶನ್ ಕಾರ್ಯಾದ್ಯಕ್ಷ              ಕುಟುಂಬ ಸಮ್ಮಿಲನ ಕಾರ್ಯಕ್ರಮದ ನಿರ್ವಹಣಾ ಸಮಿತಿ ಸಂಚಾಲಕರೂ ಆದ  ಉಮ್ಮರ್ ಪುತ್ರಿ ಸಂದೇಶ ಭಾಷಣ ಮಾಡಿದರು.
ಹಿರಿಯ ಸದಸ್ಯರುಗಳಾದ ಪಿ ಕೆ ಉಮ್ಮರ್, ಕೆ ಮುಹಮ್ಮದ್ ಕಿಯೂರ್, ಟಿ ಕೆ ಅಬ್ದುಲ್ಲಾ, ಟಿ ಬಿ ಅಬ್ಬುಲ್ಲಾ, ಪಿ ಎಂ ಉಮ್ಮರ್ ಚಕ್ರ ನಗರ, ಸೇರಿದಂತೆ ಪುತ್ರಿ ಕುಟುಂಬದ ಬಹುತೇಕ ಸದಸ್ಯರು ಪಾಲ್ಗೊಂಡಿದ್ದರು. ಇಜಾಝ್ ಗೂನಡ್ಕ ಕಾರ್ಯಕ್ರಮ ನಿರೂಪಿಸಿ ವಂದಿಸಿದರು

m

Related Posts