ಇತರೆ, ರಾಜ್ಯ, ಸ್ಥಳೀಯ

ಕರ್ನಾಟಕ ಸರ್ಕಾರದ ಶಕ್ತಿ ಯೋಜನೆ ಪಲಾನುಭವಿಗಳ ಸಂಖ್ಯೆ 500 ಕೋಟಿ ದಾಟಿದ ಸಂಭ್ರಮ: ನಾಳೆ ಸುಳ್ಯದಲ್ಲಿ ಶಕ್ತಿ ಸಂಭ್ರಮಾಚರಣೆ

“ಶಕ್ತಿ ಯೋಜನೆಯು ಸಾವಿರಾರು ಮಹಿಳೆಯರಿಗೆ ಪ್ರಯಾಣದ ಸುಲಭ ವ್ಯವಸ್ಥೆ ಒದಗಿಸಿ ಆರ್ಥಿಕ ಸ್ವಾವಲಂಬನೆಗೆ ನೆರವಾಗುತ್ತಿದೆ. ಈ ಯೋಜನೆ ಸಮಾಜಮುಖಿ ಬದಲಾವಣೆಗೆ ಕಾರಣವಾಗಿದೆ” : ಶಾಹುಲ್ ಹಮೀದ್ ಕುತ್ತಮೊಟ್ಟೆ

ಸುಳ್ಯ, ಜುಲೈ 13: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘*ಶಕ್ತಿ ಯೋಜನೆ*’ಯು ಮಹತ್ತರ ಸಾಧನೆ ಸಾಧಿಸಿದ್ದು, ಇದರ ಪಲಾನುಭವಿಗಳ ಸಂಖ್ಯೆ ಇತ್ತೀಚೆಗೆ 500 ಕೋಟಿ ಗಡಿಯನ್ನು ದಾಟಿದೆ. ಈ ಸಾಧನೆಗೆ ಕೃತಜ್ಞತೆ ಸೂಚಿಸುವಂತೆ ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ವತಿಯಿಂದ ಶಕ್ತಿ ಸಂಭ್ರಮಾಚಾರಣೆ ಕಾರ್ಯಕ್ರಮವು ಸೋಮವಾರ, ಜುಲೈ 14ರಂದು ಬೆಳಿಗ್ಗೆ 10.30 ಕ್ಕೆ (ನಾಳೆ)  ಸುಳ್ಯ ಸರಕಾರಿ ಬಸ್ ನಿಲ್ದಾಣದಲ್ಲಿ ನಡೆಯಲಿದೆ. ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಈ ಬಗ್ಗೆ ಪ್ರತಿಕ್ರಿಯಿಸುತ್ತ “ಶಕ್ತಿ ಯೋಜನೆಯು ಸಾವಿರಾರು ಮಹಿಳೆಯರಿಗೆ ಪ್ರಯಾಣದ ಸುಲಭ ವ್ಯವಸ್ಥೆ ಒದಗಿಸಿ ಆರ್ಥಿಕ ಸ್ವಾವಲಂಬನೆಗೆ ನೆರವಾಗುತ್ತಿದೆ. ಈ ಯೋಜನೆ ಸಮಾಜಮುಖಿ ಬದಲಾವಣೆಗೆ ಕಾರಣವಾಗಿದೆ” ಎಂದರು. ಈ ಕಾರ್ಯಕ್ರಮದಲ್ಲಿ ಈ ಕಾರ್ಯಕ್ರಮದಲ್ಲಿ ಸರಕಾರದ ನಾಮನಿರ್ದೇಶಿತ ಸದಸ್ಯರು, ಮಹಿಳಾ ಪಲಾನುಭವಿಗಳು, ಕಾಂಗ್ರೆಸ್‌ನ ಹಿರಿಯ-ಕಿರಿಯ ನಾಯಕರು ಹಾಗೂ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.ಎಂದು ಅವರು ಉಲ್ಲೇಖಿಸಿದರು

m

Related Posts