Featured, ಅಂಕಣ, ಸ್ಥಳೀಯ

ಸುಬ್ರಹ್ಮಣ್ಯ: ಅಂಬ್ಯುಲೆನ್ಸ್ ಚಾಲಕ ಹೊನ್ನಪ್ಪ ದೇವರಗದ್ದೆ ನಾಪತ್ತೆ – ಆತಂಕದಲ್ಲಿ ಕುಟುಂಬಸ್ಥರು

ಹುಡುಕಾಟದಲ್ಲಿ ತೊಡಗಿದ ಸುಳ್ಯ ಅಂಬ್ಯುಲೆನ್ಸ್ ಚಾಲಕ ಮಾಲಕ ಸಂಘದ ಸದಸ್ಯರು

ಕಡಬ : ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ಅಂಬ್ಯುಲೆನ್ಸ್ ಚಾಲಕರಾಗಿರುವ ಹೊನ್ನಪ್ಪ ದೇವರಗದ್ದೆ ಅವರು ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ಕಳೆದ ಕೆಲವು ದಿನಗಳಿಂದ ಅವರು ಕುಟುಂಬದವರ ಸಂಪರ್ಕಕ್ಕೆ ಬಂದಿಲ್ಲ ಎನ್ನಲಾಗಿದ್ದು, ಈ ಹಿನ್ನೆಲೆ ಕುಟುಂಬಸ್ಥರು ಹಾಗೂ ಸಹೋದ್ಯೋಗಿಗಳು ಆತಂಕದಲ್ಲಿದ್ದಾರೆ. ಸುಳ್ಯ ಅಂಬ್ಯುಲೆನ್ಸ್ ಚಾಲಕ ಮಾಲಕ ಸಂಘದ ಪ್ರದೀಪ್ ಪಂಜ ಮತ್ತು ಇತರ ಸದಸ್ಯರು ಈಗಾಗಲೇ ಹುಡುಕಾಟದಲ್ಲಿ ತೊಡಗಿಸಿಕೊಂಡಿದ್ದಾರೆ

ಸಂಬಂಧಪಟ್ಟವರು ಪೊಲೀಸರಿಗೆ ದೂರು ನೀಡಿದ್ದು, ಹುಡುಕಾಟ ಮುಂದುವರಿದಿದೆ. ನಾಪತ್ತೆಯಾದ ಸಂದರ್ಭದ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ. ಈ ಕುರಿತು ಪೊಲೀಸ್ ಇಲಾಖೆ ತನಿಖೆ ಕೈಗೊಂಡಿದೆ.

m

Related Posts