Featured, ಅಂಕಣ, ಸ್ಥಳೀಯ

ಎಸ್ಸೆಸ್ಸೆಫ್ ಪುತ್ತೂರು ಸೆಕ್ಟರ್ ಸಾಹಿತ್ಯೋತ್ಸವ

ಸಂಪ್ಯ ಯೂನಿಟ್ ಚಾಂಪಿಯನ್, ಅಜ್ಜಿಕಟ್ಟೆ ಯೂನಿಟ್ ರನ್ನರ್ಸ್, ಬನ್ನೂರು ಯೂನಿಟ್ ತೃತೀಯ

ಪುತ್ತೂರು: ಎಸ್ಸೆಸ್ಸೆಫ್ ಪುತ್ತೂರು ಸೆಕ್ಟರ್ ಸಾಹಿತ್ಯೋತ್ಸವವು ನಿನ್ನೆ ಬನ್ನೂರಿನಲ್ಲಿ ಭವ್ಯ ಸಮಾಪ್ತಿಗೊಂಡಿತು.

ಪುತ್ತೂರು ಕೆಎಂಜೆ ನಾಯಕರಾದ ಯೂಸುಫ್ ಗೌಸಿಯಾ ಧ್ವಜಾರೋಹಣ ನಿರ್ವಹಿಸಿದರು. ಸ್ವಾಗತ ಸಮಿತಿ ಚೇರ್ಮನ್ ಅಬ್ದುಲ್ ಮಜೀದ್ ಬನ್ನೂರುರವರ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಅಬ್ದುಲ್ಲ ಉಸ್ತಾದ್ ಬನ್ನೂರು ದುಆ ನಿರ್ವಹಿಸಿದರು. ಎಸ್ಸೆಸ್ಸೆಫ್ ಪುತ್ತೂರು ಡಿವಿಷನ್ ಉಪಾಧ್ಯಕ್ಷರಾದ ಉಸೈದ್ ಸಖಾಫಿ ಸೂರ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಬಳಿಕ ನಡೆದ ಸ್ಪರ್ಧಾ ಕಾರ್ಯಕ್ರಮದಲ್ಲಿ ಪುತ್ತೂರು ಸೆಕ್ಟರಿನ 9 ಯೂನಿಟ್ ಗಳ, ಸುಮಾರು 160 ಸ್ಪರ್ಧಾರ್ಥಿಗಳು, 130 ರಷ್ಟು ಸ್ಪರ್ಧೆಗಳಲ್ಲಿ ಭಾಗವಹಿಸಿ ಜಿದ್ದಾಜಿದ್ದಿನ ಹೋರಾಟ ನೀಡಿದರು.

ಅಂತಿಮವಾಗಿ ಅತೀ ಹೆಚ್ಚು ಅಂಕ ಪಡೆದ ಸಂಪ್ಯ ಯೂನಿಟ್ ಚಾಂಪಿಯನ್ ಪಟ್ಟ ಪಡೆಯಿತು. ಅಜ್ಜಿಕಟ್ಟೆ ಯೂನಿಟ್ ರನ್ನರ್ ಅಪ್ ಪ್ರಶಸ್ತಿ ತನ್ನದಾಗಿಸಿಕೊಂಡರೆ ಬನ್ನೂರು ಯೂನಿಟ್ ಮೂರನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಸ್ಟೇಜ್ ಕಾರ್ಯಕ್ರಮದಲ್ಲಿ ವೈಯುಕ್ತಿಕವಾಗಿ ಅತೀ ಹೆಚ್ಚು ಅಂಕ ಪಡೆದ ಸಂಪ್ಯ ಯೂನಿಟ್ ನ ಮುಆಝ್ ‘ಸ್ಟಾರ್ ಆಫ್ ದಿ ಫೆಸ್ಟ್’ ಪ್ರಶಸ್ತಿ ಪಡೆದರೆ, ಸ್ಟೇಜೇತರ ಕಾರ್ಯಕ್ರಮದಲ್ಲಿ ಅಜ್ಜಿಕಟ್ಟೆ ಯೂನಿಟ್ ನ ಮಹ್ಮೂದ್ ಕುರಿಯ ‘ಪೆನ್ ಆಫ್ ದಿ ಫೆಸ್ಟ್’ ಪ್ರಶಸ್ತಿ ತನ್ನದಾಗಿಸಿಕೊಂಡರು.

ಸಾಯಂಕಾಲ ನಡೆದ ಸಮಾರೋಪ ಸಮಾರಂಭದಲ್ಲಿ ಅಬ್ದುಲ್ ಮಜೀದ್ ಬನ್ನೂರು ಅಧ್ಯಕ್ಷತೆ ವಹಿಸಿದ್ದರು. ಅಬೂಶಝ ಉಸ್ತಾದರು ದುಆಶೀರ್ವಚನ ನೀಡಿದರು. ಹಾರಿಸ್ ಸುರೈಜಿ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಿಜೆಎಂ ಬನ್ನೂರು ಮುದರ್ರಿಸರಾದ ಸಿರಾಜುದ್ದೀನ್ ಸಖಾಫಿ ಕನ್ಯಾನ ಪ್ರಾಸ್ತಾವಿಕ ಭಾಷಣ ನಡೆಸಿದರು. ವೇದಿಕೆಯಲ್ಲಿ ಕೆಎಂಜೆ, ಎಸ್ ವೈ ಎಸ್, ಎಸ್ಸೆಸ್ಸೆಫ್ ನಾಯಕರು ಹಾಗೂ ಹಲವಾರು ಉಲಮಾ ಉಮರಾ ನೇತಾರರು ಗಣ್ಯ ಉಪಸ್ಥಿತರಿದ್ದರು.

ನೌಶಾದ್ ಹಿಮಮಿ ಬನ್ನೂರು ಕಾರ್ಯಕ್ರಮ ನಿರೂಪಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಅಹ್ಮದ್ ಹಾಶಿಮಿ ಕುರಿಯ ಸ್ವಾಗತಿಸಿ, ಫಾಝಿಲ್ ಬನ್ನೂರು ವಂದಿಸಿದರೆ, ಸಮಾರೋಪ ಸಮಾರಂಭದಲ್ಲಿ ನೌಶಾದ್ ಹಿಮಮಿ ಸಖಾಫಿ ಸಂಪ್ಯ ಸ್ವಾಗತಿಸಿ, ಅಬ್ಬಾಸ್ ಹಾರಾಡಿ ವಂದಿಸಿದರು.

ವರದಿ: ಬಿಕೆಎಸ್ಎ ಸಂಪ್ಯ

m

Related Posts