ಪುತ್ತೂರು: ಎಸ್ಸೆಸ್ಸೆಫ್ ಪುತ್ತೂರು ಸೆಕ್ಟರ್ ಇದರ ವಾರ್ಷಿಕ ಮಹಾಸಭೆಯು ಜನವರಿ 12 ರಂದು ಸೆಕ್ಟರ್ ಅಧ್ಯಕ್ಷರಾದ ಹಾರಿಸ್ ಸುರೈಜಿ ಸಖಾಫಿ ಉಸ್ತಾದರ ಅಧ್ಯಕ್ಷತೆಯಲ್ಲಿ ಸುನ್ನೀ ಸೆಂಟರ್ ಪಡೀಲ್ ನಲ್ಲಿ ನಡೆಯಿತು.
ವೀಕ್ಷಕರಾಗಿ ಆಗಮಿಸಿದ ಡಿವಿಷನ್ ನಾಯಕರಾದ ಸಿನಾನ್ ಕಾಮಿಲ್ ಸಖಾಫಿ, ಸಲಾಂ ಹನೀಫಿ ಉಸ್ತಾದರು ಸಂಘಟನೆಯ ಮಹತ್ವದ ಕುರಿತು, ಸಂಘಟನೆಯ ಕಾರ್ಯ ವೈಖರಿಯ ಕುರಿತು ಮಾತನಾಡಿದರು.
ಕಾರ್ಯದರ್ಶಿ ರಫೀಕ್ ಕೆಮ್ಮಾಯಿ ವಾರ್ಷಿಕ ವರದಿ ವಾಚಿಸಿ ಕೋಶಾಧಿಕಾರಿ ನೌಶದ್ ಹಿಮಮಿ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು. ಬಳಿಕ ಡಿವಿಷನ್ ನಾಯಕರ ಸಮ್ಮುಖದಲ್ಲಿ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು.ರಫೀಕ್ ಕೆಮ್ಮಾಯಿ ಸ್ವಾಗತಿಸಿ, ಖಾದರ್ ಬನ್ನೂರು ವಂದಿಸಿದರು.
2025-26 ನೇ ಸಾಲಿನ ಪದಾಧಿಕಾರಿಗಳು:
ನೌಶದ್ ಹಿಮಮಿ ಸಖಾಫಿ ಸಂಪ್ಯ (ಅಧ್ಯಕ್ಷರು), ರಫೀಕ್ ಕೆಮ್ಮಾಯಿ (ಉಪಾಧ್ಯಕ್ಷರು), ಅಬ್ದುಲ್ ಖಾದರ್ ಫಾಝಿಲ್ ಬನ್ನೂರು (ಪ್ರ.ಕಾರ್ಯದರ್ಶಿ), ರಾಶಿದ್ ಹಿಮಮಿ ಸಖಾಫಿ ಅಜ್ಜಿಕಟ್ಟೆ (ಕೋಶಾಧಿಕಾರಿ), ಅಹ್ಮದ್ ಅಲ್ ಮದೀನಿ ಅಜ್ಜಿಕಟ್ಟೆ (ದಅವಾ ಕಾರ್ಯದರ್ಶಿ), ಅಫ್ರೀಝ್ ಕೆಮ್ಮಾಯಿ (ಕ್ಯಾಂಪಸ್ ಕಾರ್ಯದರ್ಶಿ), ಝುಬೈರ್ ಸಂಪ್ಯ (ರೈನ್ಬೋ ಕಾರ್ಯದರ್ಶಿ), ಬಿ.ಕೆ.ಸ್ವಾದಿಕ್ ಅಲಿ ಸಂಪ್ಯ (ಮೀಡಿಯಾ ಕಾರ್ಯದರ್ಶಿ), ರಾಫಿ ಮುಸ್ಲಿಯಾರ್ ಬುಳೇರಿಕಟ್ಟೆ (ಕ್ಯೂ.ಡಿ), ಶಾಹುಲ್ ಹಮೀದ್ ಬನ್ನೂರು (ಜಿ.ಡಿ), ಹಾಗೂ 23 ಕಾರ್ಯಕಾರಿ ಸಮಿತಿ ಸದಸ್ಯರು.
ವರದಿ: ಬಿಕೆಎಸ್ಎ ಸಂಪ್ಯ.





m
