ಎಸ್ಸೆಸ್ಸೆಫ್ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಸಾಹಿತ್ಯೋತ್ಸವದ ಪುತ್ತೂರು ಸೆಕ್ಟರ್ ಮಟ್ಟದ ಸಾಹಿತ್ಯೋತ್ಸವವು ಆಗಸ್ಟ್ 10 ರಂದು (ನಾಳೆ) ಬನ್ನೂರಿನಲ್ಲಿ ನಡೆಯಲಿದೆ.
ಬೆಳಗ್ಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಸ್ವಾಗತ ಸಮಿತಿ ಚೇರ್ಮನ್ ಅಬ್ದುಲ್ ಮಜೀದ್ ಬನ್ನೂರು ರವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರಂಭವನ್ನು ಎಸ್ ವೈ ಎಸ್ ನಾಯಕರಾದ ಅಬೂಶಝ ಉಸ್ತಾದರು ಉದ್ಘಾಟಿಸಲಿದ್ದಾರೆ.

ಬಳಿಕ ನಡೆಯುವ ಸಾಹಿತ್ಯ ಕಲರವದಲ್ಲಿ ಪುತ್ತೂರು ಸೆಕ್ಟರಿನ 9 ಶಾಖೆಗಳ 150 ರಷ್ಟು ಸ್ಪರ್ಧಾರ್ಥಿಗಳು, 7 ವಿಭಾಗಗಳಲ್ಲಿ ಸುಮಾರು 130 ಸ್ಪರ್ಧೆಗಳಲ್ಲಿ ಸ್ಪರ್ಧಿಸಲಿದ್ದಾರೆ.
ಸಾಯಂಕಾಲ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಯ್ಯದ್ ಮುಸ್ತಫಾ ತಂಙಳ್ ದುಆ ನಡೆಸಲಿದ್ದಾರೆ. ಬಿಜೆಎಂ ಬನ್ನೂರು ಮುದರ್ರಿಸರಾದ ಸಿರಾಜುದ್ದೀನ್ ಸಖಾಫಿ ಕನ್ಯಾನ ಉದ್ಘಾಟನಾ ಪ್ರಭಾಷಣಗೆಯ್ಯಲಿದ್ದಾರೆ. ಕಾರ್ಯಕ್ರಮದಲ್ಲಿ ಹಲವಾರು ಉಲಮಾ ಉಮರಾಗಳು ಭಾಗವಹಿಸಲಿದ್ದಾರೆಂದು ಸಂಘಟಕರು ತಿಳಿಸಿದ್ದಾರೆ.
ವರದಿ: ಬಿಕೆಎಸ್ಎ ಸಂಪ್ಯ






m
