ಬದ್ರಿಯಾ ಜುಮಾ ಮಸೀದಿ (ರಿ) ಗುತ್ತಿಗಾರು ಆಡಳಿತ ಮಂಡಳಿಯ ಸಮ್ಮುಖದಲ್ಲಿ ಮೀಲಾದ್ ಕಮಿಟಿ ರಚನೆಯಾಯಿತು.
ಜಮಾಅತ್ ಖತೀಬರಾದ ಸುಲೈಮಾನ್ ಸಅದಿ ಅವರು ದುವಾ ಸಲ್ಲಿಸಿ ಕಾರ್ಯಕ್ರಮವನ್ನು ಚಾಲನೆಗೊಳಿಸಿದರು.
ವೇದಿಕೆಯಲ್ಲಿ ಜಮಾಅತ್ ಅಧ್ಯಕ್ಷರಾದ ಹಾಜಿ ಅಬ್ದುಲ್ ಖಾದರ್ ಒಳಲಂಬೆ, ಮಾಜಿ ಕೋಶಾಧಿಕಾರಿ ಮೊಯ್ದುಕುನ್ಜಿ ಬಾಕಿಲ, ಸಲಹಾ ಸಮಿತಿ ಸದಸ್ಯರಾದ ಮೊಯ್ದುಚ್ಚ ವಳಲಂಬೆ ಹಾಗೂ ಹಿರಿಯ ಜಮಾಅತ್ ಸದಸ್ಯರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಮುಅಜ್ಜಿನ್ ರಾಮದಾ ಹಾರಿಸ್ ಸಹದಿ ಉಸ್ತಾದರು ವಂದನೆಗಳೊಂದಿಗೆ ಮುಕ್ತಾಯಗೊಳಿಸಿದರು.
ಹೊಸಾಗಿ ಆಯ್ಕೆಯಾದ ಹುದ್ದೆಗಳು:
ಚೇರ್ಮನ್ – ಹಸೈನಾರ್ ವಳಲಂಬೆ
ಕನ್ವೀನರ್ – ಮಜೀದ್ ವಳಲಂಬೆ
ಕೋರ್ಡಿನೇಟರ್ – ಮುಫೀದ್ ಬಾಕಿಲ
ವೈಸ್ ಚೇರ್ಮನ್ – ಅಶ್ರಫ್ ವಳಲಂಬೆ, ಬಶೀರ್ ಬಾಕಿಲ
ವೈಸ್ ಕನ್ವೀನರ್ – ಹಮೀದ್ H.M. ಬಾಕಿಲ, ಹಕೀಮ್ ವಿದ್ಯಾನಗರ
ಈ ಸಂದರ್ಭದಲ್ಲಿ ಸಾವಿರದ ಐನೂರನೇ ಮೀಲಾದ್ ಆಚರಣೆಯನ್ನು ಅದ್ದೂರಿಯಾಗಿ ನಡೆಸುವ ತೀರ್ಮಾನ ಕೈಗೊಳ್ಳಲಾಯಿತು.
ಮಸೀದಿ ಪರಿಸರ ಸ್ವಚ್ಛತೆ, ಮಸೀದಿ ಅಲಂಕಾರ, ವಿದ್ಯಾರ್ಥಿಗಳ ಸ್ಪರ್ಧಾ ಕಾರ್ಯಕ್ರಮ ಹಾಗೂ ಹಲವು ಯೋಜನೆಗಳ ಬಗ್ಗೆ ಚರ್ಚಿಸಲಾಯಿತು.





m

