Featured, ಇತರೆ, ಸ್ಥಳೀಯ

ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಆಚರಣೆ ಹಿನ್ನೆಲೆಯಲ್ಲಿ – ಸುಳ್ಯ ಪೊಲೀಸ್ ಠಾಣೆಯಲ್ಲಿ ಶಾಂತಿ ಪಾಲನ ಸಭೆ

ಮೆರವಣಿಗೆ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಡೀಜೆ ಸಂಪೂರ್ಣ ನಿಷೇಧ – ಪೊಲೀಸ್ ಇಲಾಖೆ ಸ್ಪಷ್ಟನೆ

ಸುಳ್ಯ, ಆಗಸ್ಟ್ 18 ಸುಳ್ಯ ತಾಲೂಕಿನಲ್ಲಿ ಮುಂದಿನ ದಿನಗಳಲ್ಲಿ ನಡೆಯುವ ವಿವಿಧ ಧಾರ್ಮಿಕ ಹಾಗೂ ಸಮುದಾಯ ಕಾರ್ಯಕ್ರಮಗಳು, ಗಣೇಶೋತ್ಸವ, ಈದ್ ಮೀಲಾದ್, ಶ್ರೀಕೃಷ್ಣ ಜನ್ಮಾಷ್ಟಮಿ, ಹಬ್ಬಗಳನ್ನು ಶಾಂತಿಯುತ ಹಾಗೂ ಸಮನ್ವಯಪೂರ್ಣ ಯೋಜನೆ ವಿಧಾನ ಸುಳ್ಯ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ.

ಸಭೆಯ ಅಧ್ಯಕ್ಷತೆಯನ್ನು ಸುಳ್ಯ ಸರ್ಕಲ್ ಇನ್ಸ್ಪೆಕ್ಟರ್ ತಿಮ್ಮಪ್ಪ ನ್ಯಾಕ್ ವಹಿಸಿದ್ದರು. ಸುಳ್ಯ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಸಂತೋಷ್ ರವರ ಸಭೆಗೆ ಮಾಹಿತಿ, ಧಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು, ಸ್ಥಳೀಯ ಪ್ರತಿನಿಧಿಗಳು, ವ್ಯಾಪಾರಸ್ಥರು, ಯುವ ಸಂಘಟನೆಗಳ ಸದಸ್ಯರು ಮತ್ತು ಪತ್ರಕರ್ತರು ಸಭೆಯಲ್ಲಿ ಭಾಗವಹಿಸಿದರು.

ಸಭೆಯ ಮುಖ್ಯ ಉದ್ದೇಶಗಳು

ವಿವಿಧ ಧಾರ್ಮಿಕ ಆಚರಣೆಗಳು ಮುಂದಿನ ದಿನಗಳಲ್ಲಿ ನಡೆಯಲಿವೆ ಶಿಸ್ತಿನಿಂದ ಮತ್ತು ಶಾಂತಿಯುತವಾಗಿ ನಡೆಯಬೇಕು ಎಂಬ ಉದ್ದೇಶದಿಂದ ಕಾನೂನು ಆತ್ಮಕವಾಗಿ ಕಟ್ಟುನಿಟ್ಟಿನ ಕ್ರಮಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ
– ಮೆರವಣಿಗೆಗಳು, ಧ್ವನಿವ್ಯವಸ್ಥೆ, ಸಾರಿಗೆ ಮತ್ತು ಸಾರ್ವಜನಿಕ ಸ್ಥಳದ ಬಳಕೆಯಲ್ಲಿ ನಿಯಮ ಪಾಲನೆ ಕಡ್ಡಾಯವಾಗಿದ್ದು ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸಾರ್ವಜನಿಕ ಕಾರ್ಯಕ್ರಮಗಳು ಡೀಜೆ ಸೌಂಡ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಸುಳ್ಯ ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ ಮೆರವಣಿಗೆಯಲ್ಲಿ ರಾತ್ರಿ 10 ವರೆಗೆ ಮಾತ್ರ ದ್ವನಿ ವರ್ಧಕ ಬಳಸಲು ಅವಕಾಶವಿದೆ ಅದು ಒಂದು ಬಾಕ್ಸ್ ಮತ್ತು ಎರಡು ಸ್ಪೀಕರ್‌ಗಳಿಗೆ ಮಾತ್ರ ಅವಕಾಶ ಇರುತ್ತದೆ. ಧ್ವನಿ ವರ್ಧಕವಿಲ್ಲದೆ ಕಾರ್ಯಕ್ರಮಗಳನ್ನು 11.30 ರ ಒಳಗೆ ಕಾರ್ಯಕ್ರಮ ಮುಕ್ತಾಯಗೊಳಿಸಬೇಕು, ಈ ಸಮಯದ ನಂತರ ನಡೆಯುವ ಯಾವುದೇ ಸಮಾವೇಶವನ್ನು ಕಾನೂನುಬಾಹಿರ ಸಮಾವೇಶವೆಂದು ಪರಿಗಣಿಸಲಾಗುವುದು, ಕಡ್ಡಾಯ ಪೊಲೀಸ್ ಅನುಮತಿ ಮತ್ತು ಸಮಯದ ನಿರ್ಬಂಧ ಪಾಲನೆ: ಪೊಲೀಸ್ ಮತ್ತು ಇತರ ಸಂಬಂಧಿತ ಇಲಾಖೆಗಳ ಲಿಖಿತ ಅನುಮತಿ ಇಲ್ಲದೆ ಯಾವುದೇ ಕಾರ್ಯಕ್ರಮ ಅಥವಾ ಮೆರವಣಿಗೆ ನಡೆಸಬಾರದು ಎಂದು ಸಭೆಗೆ ಎಲ್ಲ ಸಮುದಾಯಗಳ ಪ್ರತಿನಿಧಿಗಳು ಪರಸ್ಪರ ಸಂವಾದದ ಮೂಲಕ ಸಹಕಾರ ನೀಡಬೇಕೆಂದು ಮನವಿ ಮಾಡಿದರು “ಧಾರ್ಮಿಕ ಆಚರಣೆಗಳು ಶ್ರದ್ಧೆಯ ಆಧಾರವಾಗಿದೆ, ಶಾಂತಿಯುತವಾಗಿ ನಡೆಯಬೇಕೆಂಬುದು ಎಲ್ಲರ ಬದ್ಧತೆ. ಕಾನೂನು ನಿಯಮ ಉಲ್ಲಂಘನೆಯ ಪ್ರಯತ್ನವನ್ನು ಗಂಭೀರವಾಗಿ ಪರಿಗಣಿಸಲಾಗಿದೆ,” ಎಂದು ಅಧಿಕಾರಿಗಳು ವಹಿಸಿದ್ದಾರೆ.
ಸಭೆಯಲ್ಲಿ ಬಾಲಗೋಪಾಲ ಸೆರ್ಕಜೆ, ದೇವಿಪ್ರಸಾದ್,ತೀರ್ಥರಾಮ ಅಡ್ತಲೆ,ಮಣಿ ಪ್ರಸಾದ್‌ ಮರ್ಕಂಜ,ರಘುನಾಥ್ ಜಟ್ಟಿಪಳ್ಳ,ಮಹಮ್ಮದ್ ಕುಂ. ಗೂನಡ್ಕ,ರಾಕೇಶ್ ಕುಂಟಿಕಾನ, ಉಮ್ಮರ್ ಕೆ ಎಸ್,ಅಶ್ರಫ್ ಗುಂಡಿ,ಹನೀಫ್ ಕಲ್ಲುಗುಂಡಿ,ಇರ್ಶಾದ್ ಕಲ್ಲುಗುಂಡಿ,ದೇವಿ ಪ್ರಸಾದ್,ಜಯಂತ,ಇಕ್ಬಾಲ್ ಸುಣ್ಣಮೂಲೆ, ಧರ್ಮಪಾಲ ಕೊಯಿಂಗಾಜೆ,ಎಸ್ ಕೆ ಹನೀಫ್ ಸಂಪಾಜೆ, ಜಿ ಕೆ ಹಮೀದ್,ಆಶ್ರಫ್ ಎಲಿಮಲೆ, ಎ ಬಿ ಅಬ್ಬಾಸ್,ದೀಪಕ್ ರೈ ಕಲ್ಲುಗುಂಡಿ, ಶಿನಪ್ಪ ಕಲ್ಲುಗುಂಡಿ, ರಶೀದ್ ಜಟ್ಟಿಪಳ್ಳ, ಮೊದಲಾದವರು,

m

Related Posts