ಆಸ್ಪತ್ರೆಗಳು ಬಡವರ ಪಾಲಿನ ಆಶಾಕಿರಣ ವಾಗಲಿ : ಜಿಫ್ರಿ ಮುತ್ತುಕೋಯ ತಂಙಳ್

ಮಂಗಳೂರು : ಮಂಗಳೂರಿನ ಪ್ರಖ್ಯಾತ ಜನಪ್ರಿಯ ಆಸ್ಪತ್ರೆ ಯಲ್ಲಿ ವಿವಿಧ ಆರೋಗ್ಯ ಘಟಕಗಳು ಮತ್ತು ಯೋಜನೆಗಳ ಉದ್ಘಾಟನೆ ಸೆಪ್ಟೆಂಬರ್ 09 ರಂದು ನೆರವೇರಿತು. ಡಾ. ಅಬ್ದುಲ್ ಬಶೀರ್ ಅವರ ಮಾಲಕತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೇಂದ್ರ ಮುಶಾವರದ ಅಧ್ಯಕ್ಷರಾದ ಸಯ್ಯಿದುಲ್ ಉಲಮಾ ಜಿಫ್ರಿ ಮುತ್ತುಕೋಯ ತಂಘಲ್ ವಹಿಸಿ, ಉದ್ಘಾಟನೆ ಹಾಗೂ ದುವಾ ನೆರವೇರಿಸಿದರು.

ತಮ್ಮ ಭಾಷಣದಲ್ಲಿ ತಂಙಳ್, “ಆಸ್ಪತ್ರೆಗಳು ಬಡಜನರ ಪಾಲಿಗೆ ಆಶಾಕಿರಣವಾಗಬೇಕು” ಎಂಬ ಆಶಯ ವ್ಯಕ್ತಪಡಿಸಿ, ಆಸ್ಪತ್ರೆಯಲ್ಲಿ ಈಗ ಡಯಾಲಿಸಿಸ್ ಯಂತ್ರ, ಫಿಸಿಯೋಥೆರಪಿ, ದಂತ ಚಿಕಿತ್ಸಾ ಘಟಕ, ಸ್ವಲೀನತೆ ಚಿಕಿತ್ಸಾ ಘಟಕ, ಜಠರ ಕರುಳು ಹಾಗೂ ಯಾಕೃತ ಚಿಕಿತ್ಸಾ ವಿಭಾಗಗಳು ಸಜ್ಜುಗೊಂಡಿದ್ದು, ಬಡಜನರಿಗೆ ಈ ಸೌಲಭ್ಯಗಳು ಅನುಕೂಲವಾಗಲಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ ಎಂ ಶಾಹಿದ್ ತೆಕ್ಕಿಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಹಾಸನದ ಗ್ರಾಮೀಣ ಭಾಗದಲ್ಲಿ ಕಳೆದ 11 ವರ್ಷಗಳಿಂದ ಜನಪ್ರಿಯ ಆಸ್ಪತ್ರೆ ಮಹತ್ವದ ಸೇವೆ ಸಲ್ಲಿಸುತ್ತಿದ್ದು, ಅದು ಇಡೀ ಸಮಾಜಕ್ಕೆ ಮಾದರಿಯಾಗಿದೆ, ಎಂದು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಡಾಕ್ಟರ್ ಬಶೀರ್ ಪತ್ನಿ ತೆಕ್ಕಿಲ್ ನಸ್ರಿನ ಪಾದೂರ್ ಪುತ್ರ ಡಾಕ್ಟರ್ ಶಾರುಖ್ ಮತ್ತು ಕುಟುಂಬಸ್ಥರು ಶಾಹಿದ್ ತೆಕ್ಕಿಲ್ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು ಸಮಾರಂಭದಲ್ಲಿ ಇರ್ಷಾದ್ ದಾರಿಮಿ ಮಿತ್ತಬೈಲು,ಅಬ್ಬಾಸ್ ಫೈಝಿ ಪುತ್ತಿಗೆ, ಯು ಟಿ ಇಫ್ತಿಕಾರ್, ರಿಯಾಸ್ ಬಾವ, ಎಸ್ ಎಂ ಮುಸ್ತಫ, ಡಾಕ್ಟರ್ ಸಚ್ಚಿದಾನಂದ ರೈ, ಹಸನಬ್ಬ ಚಾರ್ಮಾಡಿ, ಎನ್ ಎಸ್ ಕರೀಂ,ಇಸ್ಮಾಯಿಲ್ ನವಾಜ್,ಅಶ್ರಫ್ ಕಲ್ಲೇಗ,ಜಬ್ಬಾರ್ ಮಾರಿಪ್ಪಳ್ಳ,ಸಿರಾಜ್ ಮಾನಿಲ ಮೊದಲಾದವರು ಭಾಗವಹಿಸಿದರು ಡಾಕ್ಟರ್ ಅಬ್ದುಲ್ ಬಶೀರ್ ಸ್ವಾಗತಿಸಿ ಡಾಕ್ಟರ್ ಕಿರಾಶ್ ಪರ್ತಿಪ್ಪಾಡಿ ವಂದಿಸಿದರು.




m

