ತಿರುವನಂತಪುರ : ಸೆಪ್ಟೆಂಬರ್ 27ರಂದು ನಡೆಯಬೇಕಾಗಿದ್ದ ಓಣಂ ಬಂಪರ್ ಲಾಟರಿ ಡ್ರಾವನ್ನು ಅಕ್ಟೋಬರ್ 4ಕ್ಕೆ ಮುಂದೂಡಲಾಗಿದೆ.
ಜಿಎಸ್‌ಟಿಯಲ್ಲಿ ಕೈಗೊಳ್ಳಲಾಗಿರುವ ಸುಧಾರಣಾ ಕ್ರಮ, ಮಳೆ ಹಾಗೂ ಹವಾಮಾನ ವೈಪರೀತ್ಯಗಳ ಕಾರಣದಿಂದಾಗಿ ಟಿಕೆಟ್ ಮಾರಾಟ ಪೂರ್ಣಗೊಳ್ಳದ ಹಿನ್ನೆಲೆ ಲಾಟರಿ ಏಜೆನ್ಸಿಗಳು ಮತ್ತು ಮಾರಾಟಗಾರರು ಡ್ರಾ ಮುಂದೂಡಿಕೆ ಆಗ್ರಹಿಸಿದ್ದರು. ಈ ಮನವಿಯನ್ನು ಪರಿಗಣಿಸಿ ಹಣಕಾಸು ಇಲಾಖೆ ನಿನ್ನೆ ನಡೆಯಬೇಕಾಗಿದ್ದ ಡ್ರಾವನ್ನು ಮುಂದೂಡಿ, ಅಕ್ಟೋಬರ್ 4ಕ್ಕೆ ಹೊಸ ದಿನಾಂಕ ನಿಗದಿ ಪಡಿಸಿದೆ. ಈ ಬದಲಾವಣೆಯಿಂದ ಲಾಟರಿ ಟಿಕೆಟ್ ಖರೀದಿದಾರರಿಗೆ ಇನ್ನಷ್ಟು ದಿನಗಳ ಅವಕಾಶ ದೊರೆತಿದೆ.




m

