Featured, ಇತರೆ, ಸ್ಥಳೀಯ

ಹೃದಯ ಮತ್ತು ಕ್ಯಾನ್ಸರ್ ರೋಗಿಗಳಿಗೆ ಉಚಿತ ಬಸ್ ಪ್ರಯಾಣದ ಮನವಿ — ಮೂಸಾ ಪೈಂಬಚಾಲ್ ಅವರಿಂದ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರಿಗೆ ವಿನಂತಿ

ಇತ್ತೀಚಿನ ದಿನಗಳಲ್ಲಿ ನಮ್ಮ ರಾಜ್ಯದಲ್ಲಿ ಹೃದಯ ಸಂಬಂಧಿ ಹಾಗೂ ಕ್ಯಾನ್ಸರ್ ಸಂಬಂಧಿ ರೋಗಿಗಳು ಗಣನೀಯವಾಗಿ ಹೆಚ್ಚಾಗಿರುವುದು ದೃಢವಾಗಿದೆ. ವಿಶೇಷವಾಗಿ ಹೃದಯ ರೋಗಿಗಳು ಹಾಗೂ ಕ್ಯಾನ್ಸರ್ ಪೀಡಿತರೇ ಬಹುತೇಕ ಬಡಮಟ್ಟದ ಕೂಲಿ ಕಾರ್ಮಿಕರಾಗಿದ್ದು, ಚಿಕಿತ್ಸೆಗಾಗಿ ತಮ್ಮ ಗ್ರಾಮದ ಹೊರಗಿನ ನಗರಗಳಿಗೆ ಅಥವಾ ಹಸಿರಾದ ಆಸ್ಪತ್ರೆಗಳಿಗೆ ತೆರಳಬೇಕಾಗುತ್ತದೆ.ಅಂತಹ ಪರಿಸ್ಥಿತಿಯಲ್ಲಿ, ಈ ರೋಗಿಗಳಿಗೆ ಸರಕಾರವು ವಿಶೇಷ ಗುರುತಿನ ಚೀಟಿ ನೀಡುವುದರ ಮೂಲಕ ಸರಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ವ್ಯವಸ್ಥೆ ಒದಗಿಸುವ ಮೂಲಕ ಸರಕಾರವು ಅಗತ್ಯ ಕ್ರಮ ಕೈಗೊಂಡಲ್ಲಿ ರೋಗಿಗಳಿಗೆ ತುಂಬಾ ಅನುಕೂಲವಾಗುತ್ತದೆ ಎಂದು  ಮೂಸಾ ಪೈಂಬಚಾಲ್ ಇವರು ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರಿಗೆ ಮನವಿ ಮಾಡಿ ವಿನಂತಿಸಿ ಕೊಂಡಿದ್ದಾರೆ

ಇತ್ತೀಚೆಗೆ ಕೇರಳ ರಾಜ್ಯ ಸರಕಾರವು ಜಾರಿಗೆ ತಂದಿರುವ ಕ್ಯಾನ್ಸರ್ ಪೀಡಿತರಿಗೆ ಎಲ್ಲಾ ಸರಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ವ್ಯವಸ್ಥೆ ಕಲ್ಪಿಸಿದಂತೆ ನಮ್ಮ ಕರ್ನಾಟಕ ಸರಕಾರವು ಈ ಎರಡು ಯೋಜನೆಗಳನ್ನು ಜಾರಿ ಮಾಡಿದ್ದಲ್ಲಿ ರೋಗಿಗಳಿಗೆ ತುಂಬಾ ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರಕಾರದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವರಾದ ಶ್ರೀ ರಾಮಲಿಂಗಾ ರೆಡ್ಡಿಯವರಿಗೂ ಸದ್ರಿ ಯೋಜನೆಯನ್ನು ಜಾರಿ ಮಾಡುವಂತೆ ಮನವಿ ಮಾಡಿರುತ್ತಾರೆ.

m

Related Posts