Featured, ಇತರೆ, ಸ್ಥಳೀಯ

ಸುಳ್ಯ : ಬೆಟ್ಟಂಪಾಡಿ ಆಟೋ ಚಾಲಕ ಜಬ್ಬಾರ್ ಮೃತ್ಯು — ಸಾವಿನಲ್ಲಿ ಸಂಶಯ ವ್ಯಕ್ತಪಡಿಸಿ ಪೊಲೀಸ್ ದೂರು ನೀಡಿದ ಕುಟುಂಬಸ್ಥರು !!?..

ಸುಳ್ಯ

ಬೆಟ್ಟಂಪಾಡಿ ನಿವಾಸಿ ಹಾಗೂ ಆಟೋ ಚಾಲಕ ಜಬ್ಬಾರ್ ನಿನ್ನೆ (ಶುಕ್ರವಾರ) ಸಂಜೆ ಹಠಾತ್ ತೀವ್ರ ಅನಾರೋಗ್ಯದಿಂದ ಬಳಲಿದ್ದು, ಅವರನ್ನು ತಕ್ಷಣ ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ವೇಳೆ ಮೃತಪಟ್ಟಿದ್ದರು
ಆದಾಗ್ಯೂ, ಜಬ್ಬಾರ್ ಅವರ ಕುಟುಂಬದವರು ಸಾವಿನ ಕುರಿತು ಗಂಭೀರ ಸಂಶಯ ವ್ಯಕ್ತಪಡಿಸಿದ್ದು, ದಿನಾಂಕ 16/10/2025 (ಗುರುವಾರ) ರಾತ್ರಿ ಮೂರು-ನಾಲ್ಕು ಮಂದಿ ಇದ್ದ ತಂಡವೊಂದು ಒಂದು ವಿಷಯದ ಮೇಲೆ ತಕರಾರು ಎತ್ತಿ ಜಬ್ಬಾರ್ ಅವರ ಮೇಲೆ ತೀವ್ರ ಹಲ್ಲೆ ನಡೆಸಿದ ಪರಿಣಾಮ ಗಾಯಗೊಂಡಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ.

ಹಲ್ಲೆಯಿಂದ ಉಂಟಾದ ಗಾಯಗಳ ಪರಿಣಾಮವಾಗಿ ಜಬ್ಬಾರ್ ಅವರ ಅನಾರೋಗ್ಯ ಹೆಚ್ಚಾಗಿ ಮೃತಪಟ್ಟಿದ್ದಾರೆ ಎಂದು ಕುಟುಂಬದವರು ಸಂಶಯ ವ್ಯಕ್ತಪಡಿಸಿ ಆರೋಪಿಸಿ ಈ ಹಿನ್ನೆಲೆಯಲ್ಲಿ ಕುಟುಂಬದವರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ, ಸಾವಿನ ಕುರಿತು ಸಮಗ್ರ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ. ಪೊಲೀಸರು ದೂರು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ, ಮರಣದ ನಿಜವಾದ ಕಾರಣ ಪತ್ತೆಹಚ್ಚುವ ನಿಟ್ಟಿನಲ್ಲಿ ಪೋಸ್ಟ್‌ಮಾರ್ಟಮ್ ವರದಿ ಪ್ರಾಧಾನ್ಯವಾಗಲಿದೆ

m

Related Posts