ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ಶಿಕ್ಷಣ ಸಂಸ್ಥೆ ಸ್ಥಾಪಿಸಿದವರು ಶಹೀದ್ ಸಾಧನೆ: ಯೇನೆಪೋಯ ಅಬ್ದುಲ್ಲ ಕುoಞ ಶ್ಲಾಘನೆ
ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ ( ಮೀಫ್) ದ. ಕ. ಉಡುಪಿ, ಕೊಡಗು ಶಿವಮೊಗ್ಗ, ಚಿಕ್ಕ ಮಗಳೂರು ಮತ್ತು ಹಾಸನ ಜಿಲ್ಲೆಗಳ ಒಕ್ಕೂಟ ದ ವತಿಯಿಂದ, ಕರ್ನಾಟಕ ರಾಜ್ಯ ಕಾರ್ಮಿಕರ ಕನಿಷ್ಠ ವೇತನ ಮಂಡಳಿ ಅಧ್ಯಕ್ಷ ರಾಗಿ ನೇಮಕಾಗೊಂಡ ಟಿ. ಎಂ. ಶಾಹಿದ್ ರವರನ್ನು ಮಂಗಳೂರಿನಲ್ಲಿ ಸನ್ಮಾನಿಸಲಾಯಿತು.
ಸನ್ಮಾನ ಮಾಡಿದ ಯೇನೆ ಪೋಯ ಡೀಮ್ಡ್ ಯೂನಿವರ್ಸಿಟಿ ಚಾನ್ಸಲರ್ ಯೇನೆ ಪೋಯ ಅಬ್ದುಲ್ಲ ಕುoಞ ಮಾತನಾಡಿ ಟಿ. ಎಂ. ಶಹಿದ್ ರವರು ಗೂನಡ್ಕ ದಂತಹ ಗ್ರಾಮೀಣ ಪ್ರದೇಶ ದಲ್ಲಿ ಶಿಕ್ಷಣ ಸಂಸ್ಥೆ ಗಳನ್ನು ಸ್ಥಾಪಿಸಿರುವುದು ಅಭಿನಂದನಾರ್ಹ ಎಂದರು.
ಒಕ್ಕೂಟ ದ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ,ಕರ್ನಾಟಕ ಅಲೈಡ್ ಹೆಲ್ತ್ ಸೈನ್ಚ್ ರಾಜ್ಯಾಧ್ಯಕ್ಷ ಯು. ಟಿ. ಇಫ್ತಿಕಾರ್ ಅಲಿ ಗೌರವಾಧ್ಯಕ್ಷ ಉಮ್ಮರ್ ಟೀಕೇ,ಬ್ಯಾರಿ’ಸ್ ಗ್ರೂಪ್ ಎಂ. ಡಿ. ಸಯ್ಯದ್ ಬ್ಯಾರಿ, ಮೊದಲಾದವರು ಉಪಸ್ಥಿತರಿದ್ದರು.





m

