‘ತಂತ್ರಜ್ಞಾನದ ಜೊತೆ ನಿಂತು ಕನ್ನಡವನ್ನು ಉಳಿಸೋಣ’; ಪ್ರೊ. ಕೃಷ್ಣಮೂರ್ತಿ
ಮುಡಿಪು; ‘ಕನ್ನಡ ಭಾಷಾ ಅಧ್ಯಯನವು ಹಲವರಿಗೆ ಹೊಸ ಹೊಸ ಅವಕಾಶಗಳನ್ನು ಕೊಟ್ಟಿದೆ, ನಾವು ಬೆಳೆಯುತ್ತಿರುವ ತಂತ್ರಜ್ಞಾನದ ಜೊತೆ ನಿಂತು ಕನ್ನಡವನ್ನು ಉಳಿಸುವ ಕೆಲಸವನ್ನು ಮಾಡಬೇಕು’ ಎಂದು ಸುರತ್ಕಲ್ ಗೋವಿಂದ ದಾಸ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ. ಕೃಷ್ಣಮೂರ್ತಿ ಅವರು ಹೇಳಿದರು. ಅವರು ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ನಡೆದ ‘ಬಿತ್ತಿ’ ಗೋಡೆ ಬರಹ ಪತ್ರಿಕೆಯನ್ನು ಉದ್ಘಾಟಿಸಿ ಮಾತನಾಡಿದರು.
ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾದ ಪ್ರೊ ನಾಗಪ್ಪಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳು ಕವನ ವಾಚಿಸಿದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಪ್ರೊಫೆಸರ್ ಸೋಮಣ್ಣ ಹೊಂಗಳ್ಳಿ, ಡಾ. ಧನಂಜಯ್ ಕುಂಬ್ಳ, ಬಿತ್ತಿ ಸಂಯೋಜಕರಾದ ಡಾ. ಯಶು ಕುಮಾರ್ ಡಿ, ಬಿತ್ತಿ ಸಂಪಾದಕಿ ಪ್ರತ್ವಿ ಅಶೋಕ್ ನಾಯಕ್, ಉಪಸಂಪಾದಕ ಜಗದೀಶ್ ಉಪಸ್ಥಿತರಿದ್ದರು. ಅಭಿಷೇಕ್ ವಾಲ್ಮೀಕಿ ಸ್ವಾಗತಿಸಿ, ಅನೂಪ್ ಕುಮಾರ್ ವಂದಿಸಿದರು. ರೇಷ್ಮ ಎನ್.ಬಾರಿಗ ಕಾರ್ಯಕ್ರಮವನ್ನು ನಿರೂಪಿಸಿದರು.




m

