ಇತರೆ, ಸ್ಥಳೀಯ

ಮತ್ತೊಮ್ಮೆ ಕಡೆಗಣಿಸಲ್ಪಟ್ಟ ಸುಳ್ಯ!? : ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಲ್ಲಿ ಸುಳ್ಯಕ್ಕೆ ಇಲ್ಲ ಮನ್ನಣೆ!

ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಣೆಯಲ್ಲಿ ಈ ಬಾರಿಯೂ ಸುಳ್ಯ ತಾಲೂಕು ಕಡೆ ಗಣನೆಗೆ ಗುರಿಯಾಗಿದೆ. ಕಳೆದ ಬಾರಿ  ಸಹ ಇದೇ ರೀತಿಯ ಆಯ್ಕೆ ನಡೆದಿದ್ದು, ಆಗ ಸಾರ್ವಜನಿಕ ವಿರೋಧ ವ್ಯಕ್ತವಾದ ನಂತರ ಸಾಮಾಜಿಕ ಕ್ಷೇತ್ರದಲ್ಲಿ ಗೊಕುಲ್ ದಾಸ್ ಅವರಿಗೆ ತುರ್ತು ಕ್ರಮವಾಗಿ ಪ್ರಶಸ್ತಿ ನೀಡಲಾಗಿತ್ತು.

ಆದರೆ ಈ ಬಾರಿಯೂ ಜಿಲ್ಲೆಯ ಪ್ರಶಸ್ತಿ ಪಟ್ಟಿಯಲ್ಲಿ ಸುಳ್ಯ ತಾಲೂಕಿನ ಹೆಸರೇ ಕಾಣಿಸಲಿಲ್ಲ ಜಿಲ್ಲಾಡಳಿತ ಯಾವ ಕಾರಣಕ್ಕಾಗಿ ಪ್ರತಿಬಾರಿ ಸುಳ್ಯವನ್ನು ಪ್ರಶಸ್ತಿ ಪಟ್ಟಿಯಿಂದ ಹೊರಗೆ ಇಡುತ್ತದೆ ಎಂಬ ಪ್ರಶ್ನೆ ಈಗ ಸ್ಥಳೀಯ ವಲಯಗಳಲ್ಲಿ ಕೇಳಿಬರುತ್ತಿದೆ, ಸಾಧನೆಗಳಿರುವ ಸುಳ್ಯ ತಾಲೂಕಿಗೆ ಗುರುತಿನ ಮನ್ನಣೆ ಸಿಗದಿರುವುದು ಸ್ಥಳೀಯ ನಾಗರಿಕರಲ್ಲಿ ಅಸಮಾಧಾನ ಮೂಡಿಸಿದೆ.ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯಲ್ಲಿ ಅರ್ಜಿ ಸಲ್ಲಿಕೆ ಮುಖ್ಯ ಮಾನದಂಡವಾಗಿದೆಯೇ? ಅಥವಾ ಪ್ರಸ್ತಾವಿತ ಸಾಧನೆಗಳ ಪರಿಶೀಲನೆಯು ಸಾಕ್ಷಿಯಾಗಬೇಕೇ? ಎಂಬ ಪ್ರಶ್ನೆಯೂ ಪ್ರಸ್ತುತವಾಗಿದೆ.ಸ್ಥಳೀಯರು ಹೇಳುವಂತೆ, ಹಲವು ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವವರಿದ್ದರೂ, ಅವರ ಹೆಸರುಗಳು ಆಯ್ಕೆ ಪಟ್ಟಿಯಲ್ಲಿ ಕಾಣಿಸದಿರುವುದು ನ್ಯಾಯೋಚಿತವಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸುಳ್ಯದ ಜನತೆಗೆ ಉತ್ತರ ನೀಡಬೇಕಿದೆ!

Related Posts