ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ ಅತೀ ಶೀಘ್ರದಲ್ಲೇ ಪಾಲಿಯೇಟಿವ್ ಹೋಮ್ ಕೇರ್ ಆರಂಭ : ಅಫ್ಹಾಂ ಅಲೀ ತಂಙಳ್
AIKMCC ಸೆಂಟ್ರಲ್ ಕಮೀಟಿ ಬೆಂಗಳೂರು ಇದರ ವ್ಯಾಪ್ತಿಯಲ್ಲಿ ಬರುವ ಸುಳ್ಯ ತಾಲೂಕು AIKMCC ಹಾಗೂ ಶಿಹಾಬ್ ತಂಙಳ್ ಸೆಂಟರ್ ಫಾರ್ ಹ್ಯುಮಾನಿಟಿ ಇದರ ನೂತನ ಸದಸ್ಯರ ಸೇರ್ಪಡೆ ಅಭಿಯಾನ ಸುಳ್ಯ ದಲ್ಲಿ ನಡೆಯಿತು,

ಅಭಿಯಾನವನ್ನು ದ,ಕ,ಜಿಲ್ಲಾ AIKMCC ಪ್ರದಾನ ಕಾರ್ಯದರ್ಶಿ ಅಫ್ಹಾಂ ಅಲೀ ತಂಙಳ್ ಪುತ್ತೂರು ಉದ್ಘಾಟಿಸಿದರು,

AIKMCC ವತಿಯಿಂದ ಸುಳ್ಯ ದ ಸಂಪಾಜೆ ಪರಿಸರದಲ್ಲಿ ಪಾಲಿಯೇಟಿವ್ ಹೋಮ್ ಕೇರ್ ಮುಖಾಂತರ ಮನೆಯಲ್ಲಿಯೇ ಇರುವ ನಿತ್ಯ ರೋಗಿಗಳ ಉಪಚರಣೆಯು ಸಂಪೂರ್ಣ ಉಚಿತವಾಗಿ ನಡೆಯುತ್ತಿದ್ದು ಅದನ್ನು ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ ಅತೀ ಶೀಘ್ರದಲ್ಲೇ ಪ್ರಾರಂಭಿಸುವುದಾಗಿ ಅವರು ತಿಳಿಸಿದರು,

ಕಾರ್ಯಕ್ರಮದಲ್ಲಿ ಸುಳ್ಯ ಅಧ್ಯಕ್ಷರಾದ ಖಲಂದರ್ ಎಲಿಮಲೆ, ಪ್ರದಾನ ಕಾರ್ಯದರ್ಶಿ ತಾಜುದ್ದೀನ್ ಟರ್ಲಿ, ದಾವೂದ್ ಕೋಲ್ಪೆ, ಜಬ್ಬಾರ್ KMCC, ಶಂಸುದ್ದೀನ್ ಆರಂತೋಡು,ರಶೀದ್ ಜಟ್ಟಿಪಳ್ಳ ,ಶಾಹಿದ್ ಪಾರೆ, ಫೈಸಲ್ ಜಟ್ಟಿಪಳ್ಳ, ಇಕ್ಬಾಲ್ ಸುಣ್ಣಮೂಲೆ, ಉನೈಸ್ ಪೆರಾಜೆ ಉಪಸ್ಥಿತರಿದ್ದರು,
AIKMCC ಸದಸ್ಯತ್ವ ಅಭಿಯಾನ ನವಂಬರ್ 15 ರಂದು ಕೊನೆಗೊಳ್ಳಲಿದ್ದು ಸದಸ್ಯರಾಗ ಬಯಸುವವರು ಪ್ರದಾನ ಕಾರ್ಯದರ್ಶಿ ಯವರನ್ನು ಸಂಪರಿಸಬಹುದು ಎಂದು ತಿಳಿಸಿದರು,9686947071

