Featured, ಇತರೆ, ಸ್ಥಳೀಯ

ನ 11 ಸುಳ್ಯದಲ್ಲಿ ವಕ್ಫ್ ಕಾರ್ಯಾಗಾರ ಉಮ್ಮೀದ್ ಪೋರ್ಟಲ್ ನಲ್ಲಿ ಮಾಹಿತಿ ನೋಂದಣಿ ಶಿಬಿರ

ಸುಳ್ಯ

ನವೆಂಬರ್ 11 ಮಂಗಳವಾರ ಬೆಳಿಗ್ಗೆ  9.30 ಗಂಟೆಗೆ ಸುಳ್ಯ ಅನ್ಸಾರಿಯಾ ಗಲ್ಫ್ ಆಡಿಟೋರಿಯಂ ನಲ್ಲಿ ಸುಳ್ಯ ತಾಲೂಕಿನ ಎಲ್ಲಾ ಮಸೀದಿ, ಮದ್ರಸ, ಗಳ ಆಡಳಿತ ಮಂಡಳಿ ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿಗಳ  ಸಭೆ ಆಯೋಜಿಸಲಾಗಿದೆ
ಜಿಲ್ಲಾ ವಕ್ಫ್ ಅಧಿಕಾರಿಗಳ ನಿರ್ದೇಶನದಂತೆ ಆಯೋಜಿಸಲಾದ ಈ ಕಾರ್ಯಗಾರದಲ್ಲಿ ಮಾಹಿತಿ ನೀಡಲು ಜಿಲ್ಲಾ ವಕ್ಫ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ದವರು ಭಾಗವಹಿಸಲಿದ್ದಾರೆ
ವಕ್ಫ್ ಆಸ್ತಿಗಳನ್ನು ಉಮ್ಮೀ ದ್ ಪೋರ್ಟಲ್ ನಲ್ಲಿ ನೋಂದಣಿ ಕಡ್ಡಾಯವಾಗಿ ನೋಂದಣಿ ಮಾಡಬೇಕೆಂದು ಸರ್ಕಾರದ ಆದೇಶ ಇರುವುದರಿಂದ ಸಂಬಂಧ ಪಟ್ಟ ಧಾಖಲೆಗಳನ್ನು ತರಬೇಕಾಗಿ ವಿನಂತಿಸಲಾಗಿದೆ
ಎಲ್ಲಾ ಮಸೀದಿ, ಮದ್ರಸ ಗಳ ಪದಾಧಿಕಾರಿಗಳು ಈ ಕಾರ್ಯಾ ಗಾರದಲ್ಲಿ ಭಾಗವಹಿಸಿ  ಪ್ರಯೋಜನ ಪಡೆದು ಕೊಳ್ಳುವoತೆ ಕರ್ನಾಟಕ ರಾಜ್ಯ ಕಾರ್ಮಿಕರ ಕನಿಷ್ಠ ವೇತನ ಕಲ್ಯಾಣ ಮಂಡಳಿ ಅಧ್ಯಕ್ಷ ಟಿ. ಎಂ. ಶಹೀದ್ ಸುಳ್ಯ ನಗರ ಯೋಜನಾ ಪ್ರಾಧಿಕಾರ ( ಸೂಡ) ಅಧ್ಯಕ್ಷ ಕೆ. ಎಂ. ಮುಸ್ತಫ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸುತ್ತಾರೆ

Related Posts