ಸುಳ್ಯ: ಅನಿವಾಸಿ ಉದ್ಯೋಗಿ ಹಾಗೂ ಮೊಗರ್ಪಣೆ ನಿವಾಸಿ ಎಂ.ಎಸ್. ಉಮ್ಮರ್ ಅವರ ಅತ್ತೆ (ಪತ್ನಿಯ ತಾಯಿ) ಶಂಶಾದ್ ಬೇಗಂ (60) ಅವರು ಅಸೌಖ್ಯದಿಂದಾಗಿ (08-11-2025) ಶನಿವಾರ ರಾತ್ರಿ ಮೊಗರ್ಪಣೆಯ ಮಗಳ ಮನೆಯಲ್ಲಿ ನಿಧನರಾದರು.
ಅವರು ಕೆಲವು ದಿನಗಳಿಂದ ಅಸೌಖ್ಯದಿಂದ ಬಳಲುತ್ತಿದ್ದು, ಸುಳ್ಯದಲ್ಲಿರುವ ಅಳಿಯ ಎಂ.ಎಸ್. ಉಮ್ಮರ್ ಅವರ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು
ಮೃತರು ಪತಿ ನಝೀರ್ ಬಿ.ಎಸ್., ಮಗಳು ನಿಶಾ, ಅಳಿಯ ಎಂ.ಎಸ್. ಉಮ್ಮರ್, ಮೊಮ್ಮಕ್ಕಳಾದ ನುಹಾ, ನುಮಾ, ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಮೃತರ ಜನಾಝ ನಾಳೆ ಬೆಳಿಗ್ಗೆ ಬಂಟ್ವಾಳದಲ್ಲಿರುವ ಸ್ವಗೃಹಕ್ಕೆ ಕೊಂಡೊಯ್ಯಲಾಗಲಿದ್ದು, ಧಫನ ಕಾರ್ಯ ಬಂಟ್ವಾಳ ಜಮಾಅತ್ ಮಸೀದಿಯಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

