Featured, ಇತರೆ, ಸ್ಥಳೀಯ

ಸಲಿಂಗ ವಿವಾಹ: ಗುರುಹಿರಿಯರ ಸಮ್ಮುಖದಲ್ಲಿ ಹಸೆಮಣೆಗೆ ಏರಿದ ರಿಯಾ-ರಾಖಿ!

ದೇಶದಲ್ಲಿ ಸಲಿಂಗ ವಿವಾಹದ ಕುರಿತು ಚರ್ಚೆ ನಡೆಯುತ್ತಿರುವಾಗಲೇ, ಪಶ್ಚಿಮ ಬಂಗಾಳದ ಸುಂದರಬನದಲ್ಲಿ ವೃತ್ತಿಪರ ನೃತ್ಯಪಟುಗಳಾದ ರಿಯಾ ಸರ್ದಾರ್ ಮತ್ತು ರಾಖಿ ನಸ್ಕರ್ ಎಂಬ ಇಬ್ಬರು ಯುವತಿಯರು ದೇವಸ್ಥಾನದಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ. 

ಕುಲ್ತಲಿ (ಪಶ್ಚಿಮ ಬಂಗಾಳ), ನ.9 (ಪಿಟಿಐ):
ದೇಶದಲ್ಲಿ ಸಲಿಂಗ ವಿವಾಹದ ಮಾನ್ಯತೆ ಕುರಿತ ಚರ್ಚೆಗಳು ಗರಿಗೆದರುತ್ತಿರುವಾಗಲೇ, ಪಶ್ಚಿಮ ಬಂಗಾಳದ ಸುಂದರಬನ ಪ್ರದೇಶದಲ್ಲಿ ಇಬ್ಬರು ಯುವತಿಯರು ಪರಸ್ಪರ ಒಪ್ಪಿಗೆಯ ಮೇರೆಗೆ ಹಸೆಮಣೆ ಏರಿರುವ ಘಟನೆ ಸ್ಥಳೀಯ ಮಟ್ಟದಲ್ಲಿ ಕುತೂಹಲ ಮೂಡಿಸಿದೆ.
ಸುಂದರಬನದ ಕುಲ್ತಲಿ ತಾಲೂಕಿನ ಜಲಬೇರಿಯಾ ಪಾಳೆಯರ ಚಕ್ ದೇವಾಲಯದಲ್ಲಿ ನ.4ರಂದು ವೃತ್ತಿಪರ ನೃತ್ಯಪಟುಗಳಾದ ರಿಯಾ ಸರ್ದಾರ್ ಮತ್ತು ರಾಖಿ ನಸ್ಕರ್ ಗುರುಹಿರಿಯರ ಸಮ್ಮುಖದಲ್ಲಿ ವಿವಾಹ ಬಂಧನಕ್ಕೆ ಒಳಗಾದರು. ರಿಯಾ ಸಾಂಪ್ರದಾಯಿಕ ವಧು ವೇಷದಲ್ಲಿ ಮೆರೆದರೆ, ರಾಖಿ ಮದುಮಗನ ಉಡುಪಿನಲ್ಲಿ ಗಮನ ಸೆಳೆದರು. ಸ್ಥಳೀಯ ಹಳ್ಳಿಗರು ಈ ವಿಭಿನ್ನ ವಿವಾಹಕ್ಕೆ ಸಾಕ್ಷಿಯಾಗಿದ್ದಾರೆ.
ದೇಶದಲ್ಲಿ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಇನ್ನೂ ಲಭ್ಯವಾಗದಿದ್ದರೂ, ಸುಪ್ರೀಂ ಕೋರ್ಟ್‌ನಲ್ಲಿ ಈ ಕುರಿತು ವಿಚಾರಣೆ ನಡೆಯುತ್ತಿದೆ. ಇದೇ ನಡುವೆ ನಡೆದ ಈ ಘಟನೆ ಸಾಮಾಜಿಕ ವಲಯಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ ಸಮಾಜದ ಕೆಲವರು ಈ ವಿವಾಹವನ್ನು ಆಶ್ಚರ್ಯದಿಂದ ನೋಡುವಾಗ, ಇನ್ನು ಕೆಲವರು ಮೌನವಾಗಿ ಸಮ್ಮತಿಸಿದ್ದಾರೆ. ಸಲಿಂಗ ವಿವಾಹದ ಕುರಿತು ದೇಶಾದ್ಯಂತ ನಡೆಯುತ್ತಿರುವ ಚರ್ಚೆಯ ಮಧ್ಯೆ ಈ ಘಟನೆ ಹೊಸ ಚಿಂತನೆಗೆ ದಾರಿ ಮಾಡಿಕೊಟ್ಟಿದೆ.

ವರ ರಾಖಿ ನಸ್ಕರ್ ಹೇಳುವಂತೆ,

“ನಾವು ಇಬ್ಬರೂ ವಯಸ್ಕರು. ನಮ್ಮ ಜೀವನವನ್ನು ಹೇಗೆ ಬದುಕಬೇಕು ಎಂಬುದನ್ನು ನಾವೇ ತೀರ್ಮಾನಿಸಬಹುದು. ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ ಲಿಂಗ ಏಕೆ ಅಡ್ಡಿಯಾಗಬೇಕು?” ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಪೊಲೀಸರು,

ಮದುವೆ ಕುರಿತು ಅಧಿಕೃತ ದೂರು ಅಥವಾ ವರದಿ ಬಂದಿಲ್ಲ. ಸ್ಥಳೀಯರು ಶಾಂತವಾಗಿ ಕಾರ್ಯಕ್ರಮ ನಡೆಸಿದ್ದರೆ, ನಾವು ಮಧ್ಯಪ್ರವೇಶಿಸುವ ಪ್ರಶ್ನೆಯೇ ಇಲ್ಲ,” ಎಂದು ಸ್ಪಷ್ಟಪಡಿಸಿದ್ದಾರೆ.

Related Posts