ಇತರೆ, ಸ್ಥಳೀಯ

ಸುಳ್ಯ, ನ.14 : ಸುಳ್ಯ ಮತ್ತು ಸುಬ್ರಹ್ಮಣ್ಯ ಉಪವಿಭಾಗ ಮಟ್ಟದ ಮೆಸ್ಕಾಂ ಜನಸಂಪರ್ಕ ಸಭೆಯು ನ.12 ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಸಭೆಗೆ ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್ ಅಧ್ಯಕ್ಷತೆ ವಹಿಸಿದ್ದರು.

ಸಭೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಿರುವ ವಿದ್ಯುತ್ ಕಡಿತ, ತುರ್ತು ಸ್ಪಂದನೆ ಕೊರತೆ, ಹೊಸ ಸಂಪರ್ಕದ ವಿಳಂಬ, ಹಾಗೂ 110 ಕೆ.ವಿ. ಸಬ್‌ಸ್ಟೇಷನ್ ಕಾಮಗಾರಿ ಮುಂತಾದ ವಿಷಯಗಳನ್ನು ಗ್ರಾಹಕರು ತೀವ್ರವಾಗಿ ಎತ್ತಿಹಿಡಿದರು. ಮೆಸ್ಕಾಂ ಅಧಿಕಾರಿಗಳಿಂದ ಸಮಸ್ಯೆಗಳಿಗೆ ಸ್ಪಷ್ಟ ಉತ್ತರ ಹಾಗೂ ಶೀಘ್ರ ಪರಿಹಾರದ ಭರವಸೆ ನೀಡಲಾಯಿತು.

ಅಮೆ ನಡಿಗೆಯಲ್ಲಿ ನಡೆಯುತ್ತಿರುವ “ವನ್ ಟನ್” ವಿದ್ಯುತ್ ಕಾಮಗಾರಿಯ ವಿರುದ್ಧ ಗ್ರಾಹಕರ ತೀವ್ರ ಆಕ್ರೋಶ..!?

ಅಮೆ ನಡಿಗೆಯಲ್ಲಿ ನಡೆಯುತ್ತಿರುವ “ವನ್ ಟನ್” ವಿದ್ಯುತ್ ಕಾಮಗಾರಿ ನಿಧಾನಗತಿ, ಅಧಿಕಾರಿಗಳ ನಿರುತ್ಸಾಹ,ಸುಳ್ಳು ಭರವಸೆ, ಈ ಬಗ್ಗೆ ಸಭೆಯಲ್ಲಿ ಬಾರಿ ಚರ್ಚೆ ಯಾಗಿ ಗ್ರಾಹಕರ ತೀವ್ರ ಆಕ್ರೋಶ..! ವ್ಯಕ್ತಪಡಿಸಿದರು ವಿವರ ನೀಡಿದರು. ಈ ವೇಳೆ ಮಾತನಾಡಿದ ಜಿ.ಕೆ. ಹಮೀದ್, ಈ ಭಾಗದಿಂದ ಕೋಲಾರಕ್ಕೆ ಗುಡ್ಡ ಅಗೆದು ನೀರು ಕೊಂಡು ಹೋಗುತ್ತಾರೆ. ಆದರೆ ಪುತ್ತೂರಿನಿಂದ ಸುಳ್ಯಕ್ಕೆ 110 ಕೆ.ವಿ. ಲೈನ್ ಯಾಕೆ ಇಷ್ಟು ವಿಳಂಬ ಎಂದು ಪ್ರಶ್ನಿಸಿದರು. ಆಕ್ಷೇಪ ಮಾಡುವವರ ಪಟ್ಟಿ ತಯಾರಿಸಿ ಬಿಡುಗಡೆ ಮಾಡಿ. ಅವರೊಂದಿಗೆ ಸುಳ್ಯ ಮತ್ತು ಪುತ್ತೂರಿನ ಶಾಸಕರು, ಇತರ ಪ್ರತಿನಿಧಿಗಳು ಮಾತನಾಡಿ ಮನವೊಲಿಸುವ ಕಾರ್ಯ ಮಾಡುತ್ತಾರೆ ಎಂದು ಸಭೆಯಲ್ಲಿದ್ದವರು ಹೇಳಿದರು. ಜಿ ಕೆ ಹಮೀದ್, ಮತ್ತೊಮ್ಮೆ ಎಲ್ಲೆಲ್ಲಿ ಟವರ್ ಆಗಿದೆ ಎಂಬ ಕುರಿತು ಪ್ರಶ್ನಿಸಿದರು. ಆ ವೇಳೆ ಇಂಜಿನಿಯ‌ರ್ ಸಚಿನ್, ಟವರ್‌ಗೆ ಪೌಂಡೇಶನ್ ಮಾಡಲಾಗಿದೆ. ಟವರ್ ಏಕಕಾಲಕ್ಕೆ ಜೋಡಣೆ ಮಾಡುತ್ತಾರೆ ಎಂದರು. ಇದರಿಂದ ಅಸಮಾಧಾನಗೊಂಡ ಹಮೀದ್, ಟವರ್ ಆಗಿದೆ ಎಂದು ಸಭೆಗೆ ಸುಳ್ಳು ಮಾಹಿತಿ ನೀಡಿರುವುದು ಅಕ್ಷಮ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಲವಾರು ವರ್ಷಗಳಿಂದ ಸುಳ್ಯ ಜನತೆಯ ಬಹು ಆಕಾಂಕ್ಷೆ ಯಾದ ವನ್ ಟನ್ ವಿದ್ಯುತ್‌ ಸರಬರಾಜು ಬಗ್ಗೆ ನಡೆಯುವ ಕಾಮಗಾರಿ ಕುಂಟಿತವಾಗಿ ಸಾಗುತ್ತಿದ್ದು ಈ ವಿಚಾರ ಮೂಲವಾಗಿ ಗ್ರಾಹಕರ ಆಕ್ರೋಶ ಕ್ಕೆ ಗುರಿಯಾಯಿತು, ಸುಳ್ಯದ ವಿದ್ಯುತ್‌ ಸಮಸ್ಯೆಯನ್ನು ಅಧಿಕಾರಿಗಳು ಗಣನೆಗೆ ತೆಗೆದುಕೊಳ್ಳುವುದಿಲ್ಲ, ಯಾಕೆ?.. ವನ್ ಟನ್.. ವಿಚಾರವಾಗಿ ಕೇಳಿದರೆ ಸಮಸ್ಯೆ ಗಳು ಜಟಿಲವಾಗಿದೆ..? ಎಂದು ಸಮಜಾಯಿಷಿ ಮಾತ್ರ ನೀಡುತ್ತಿರಿ… ಇಂದು ನಮಗೆ ಕಾಮಗಾರಿ ಮುಗಿದು ಯಾವಾಗ ವಿದ್ಯುತ್ ಸರಬರಾಜು ಅಗುತ್ತೆ ಎಂಬುವುದಕ್ಕೆ ಉತ್ತರ ಬೇಕಾಗಿದೆ. ಕೇವಲ ಕಾಟಚಾರಕ್ಕೆ ಸಭೆ ಕರೆದು ಏನು? ಪ್ರಯೋಜನ. ವಿಷಯಗಳು ಇಲ್ಲಿ ಪ್ರಸ್ತಾಪ ವಾಗುತ್ತೆ ಹೊರತ್ತು “ಪರಂತು ಅನುಷ್ಠಾನ ಆಗುವುದಿಲ್ಲ” ಎಂದು ಗ್ರಾಹಕರು ತಿವ್ರ ಆಕ್ರೋಶ ವ್ಯಕ್ತಪಡಿಸಿದರು
ಇದಕ್ಕೆ ಉತ್ತರಿಸಿದ ಕೆಪಿಟಿಸಿಎಲ್ ಸಹಾಯಕ ಇಂಜಿನಿಯರ್ ಸಚಿನ್, ಮಾತನಾಡುತ್ತಾ ಒಟ್ಟು 89 ಟವರ್ ನಿರ್ಮಾಣ  ಆಗಬೇಕಾಗಿದ್ದು ಸುಳ್ಯ ತಾಲೂಕಿನಲ್ಲಿ 40, ಪುತ್ತೂರಿನಲ್ಲಿ 39, ಅರಣ್ಯದಲ್ಲಿ 10 ಟವರ್ ನಿರ್ಮಾಣ ಆಗಬೇಕಾಗಿದೆ. ಇದರಲ್ಲಿ ಕೇವಲ 10 ಟವರ್‌ನ ಫೌಂಡೇಶನ್ ಕೆಲಸ ಆಗಿದೆ. 5 ಟವರ್ ಫೌಂಡೇಷನ್ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳಿದರು. ಸುಳ್ಯದಲ್ಲಿ 27 ಫೌಂಡೇಶನ್ ಟವರ್ ಕಾಮಗಾರಿಗೆ ಜಂಟಿ ಸಮೀಕ್ಷೆ ನಡೆಸಲಾಗಿದೆ ಎಂದು ಕೆಪಿಟಿಸಿಎಲ್ ಇಂಜಿನಿಯರ್ ಸಭೆಗೆ ಮಾಹಿತಿ ನೀಡಿದರು

“ಭ್ರಷ್ಟಾಚಾರ ಅಲ್ಲವೇ?” — ಆರ್. ಬಿ. ಬಶೀರ್ ಪ್ರಶ್ನೆ

ವಿದ್ಯುತ್‌ ಕಂಬ, ಮೀಟರ್‌ ಬದಲಾವಣೆಗೆ ನಿಗದಿತ ದರಕ್ಕಿಂತ ಹೆಚ್ಚಾಗಿ ಈಡು ಮಾಡುವ ಘಟನೆಗೆ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು, ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಆರ್ ಬಿ ಬಶೀರ್ ಅಧಿಕಾರಿಗಳಿಗೆ ಪ್ರಶ್ನೆ ಮಾಡುತ, ಸರಕಾರದ ಅಧಿಕೃತ ದರ ಪಟ್ಟಿಯನ್ನು ಲೆಕ್ಕಿಸದೇ, ತಮ್ಮ ಇಷ್ಟದ ಮೊತ್ತವನ್ನು ವಸೂಲು ಮಾಡುತ್ತಿರುವುದಾಗಿ  ಆರೋಪಿಸಿದ್ದಾರೆ. “ವಿದ್ಯುತ್‌ ಸೇವೆ ಜನಹಿತಕ್ಕಾಗಿ, ಆದರೆ ನಿಗದಿತ ದರ ಮೀರಿ ಹಣ ಈಡು ಮಾಡುವುದು ಭ್ರಷ್ಟಾಚಾರ ಅಲ್ಲವೇ?” ಎಂದು ಪ್ರಶ್ನಿಸಿದ್ದಾರೆ..ಮಾತ್ರವಲ್ಲ ಮೆಸ್ಕಾಮ್ ಕಛೇರಿಯಲ್ಲಿ, ಸರಕಾರದ ಅಧಿಕೃತ ದರ ಪಟ್ಟಿಯ ಸೂಚನ ಫಲಕ ಅಳವಡಿಸಿ ಎಂದು ಕೇಳಿಕೊಂಡರು, ಬಶೀರ ರವರ ಪ್ರಶ್ನೆಗೆ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ, ಉತ್ತರಿಸುತ್ತಾ ಇದು ಅಧಿಕಾರಿಗಳ ಗಮನಕ್ಕೆ ತನ್ನಿ ಇಂತಹ ವಿಚಾರಗಳು ಕಂಡರೆ ಕೂಡಲೇ ತಪ್ಪಿತಸ್ಥ ರ ಮೇಲೆ ಕ್ರಮ ತೆಗೆದು ಕೊಳ್ಳುತ್ತವೆ. ಇನ್ನೂ ಸರಕಾರದ ಸೇವೆ ದರ ಪಟ್ಟಿಯ ಸೂಚನ ಫಲಕಗಳನ್ನು ಮೆಸ್ಕಾಮ್ ಕಚೇರಿಯಲ್ಲಿ ಸ್ಥಾಪಿಸುತ್ತೆವೆ ಎಂದು ಸಭೆಗೆ ತಿಳಿಸಿದರು

ದಾಖಲೆಗಳು ಇಲ್ಲದೇ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ನಿಡಿದ್ದು ನಮ್ಮ ಗಮನಕ್ಕೆ ಬಂದಿದೆ..!!!!? : ರಾಧಾಕೃಷ್ಣ ಪರಿವಾರಕಾನ 

ಸಭೆಯಲ್ಲಿ ಭಾಗವಹಿಸಿದ ಸಾಮಾಜಿಕ ಕಾರ್ಯಕರ್ತ ರಾಧಕೃಷ್ಣ ಪರಿವಾರಕಾನ ಮಾತನಾಡುತ್ತಾ.ದಾಖಲೆಗಳಿಲ್ಲದೆ ಅನಧಿಕೃತವಾಗಿ ವಿದ್ಯುತ್‌ ಸಂಪರ್ಕ ನೀಡುತ್ತಿರುವ ಬಗ್ಗೆ ಗಂಭೀರ ಆಕ್ಷೇಪ ವ್ಯಕ್ತಪಡಿಸಿದರು. ಈ ಅನಧಿಕೃತ ಸಂಪರ್ಕಗಳ  ವಿಷಯ ನಮ್ಮ ಗಮನಕ್ಕೂ ಬಂದಿದೆ. ಆದರೆ ನಿಮ್ಮ ಗಮನಕ್ಕೂ ಬರುತ್ತಿದ್ದರೂ ಕ್ರಮ ಕೈಗೊಳ್ಳುವುದಿಲ್ಲವೇ? ಹಣ ಇರುವವರಿಗೆ ಎಲ್ಲ ‘ವ್ಯವಸ್ಥೆ’ ಆಗುತ್ತದೆ. ಆದರೆ ಬಡವರ ಕೆಲಸ ಮಾತ್ರ ಬೇಗನೆ ಆಗುವುದಿಲ್ಲ, ಯಾಕೆ?” ಎಂದು ಕಹಿಯಾಗಿ  ಪ್ರಶ್ನೆಮಾಡಿದರು. ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ವಿಷಯವನ್ನು ಪರಿಶೀಲಿಸಲಾಗುವುದು. ಅನಧಿಕೃತವಾಗಿ ಸಂಪರ್ಕ ನೀಡಿರುವುದು ಕಂಡುಬಂದರೆ ಖಂಡಿತ ಕ್ರಮ ಕೈಗೊಳ್ಳುತ್ತೇವೆ” ಎಂದು ಸ್ಪಷ್ಟಪಡಿಸಿದರು ಆಗೂಡದೆ, ಇಂತಹ ಗಂಭೀರ ಆರೋಪಗಳು ನಿಮ್ಮ ಗಮನಕ್ಕೆ ಬಂದ ಕ್ಷಣದಲ್ಲೇ ಅಗತ್ಯ ದಾಖಲೆಗಳೊಂದಿಗೆ ಮೇಲಾಧಿಕಾರಿಗಳ ಗಮನಕ್ಕೆ ತರಬೇಕು. ಅಧಿಕೃತ ಮಾಹಿತಿ ದೊರೆತರೆ ಕ್ರಮ ಕೈಗೊಳ್ಳಲು ಸಾಧ್ಯ” ಎಂದು ಹೇಳಿದರು.

ಬೆಳ್ಳಾರೆ ಮೆಸ್ಕಾಮ್ ಕಛೇರಿಗೆ ಮೂಲಭೂತ ಸೌಕರ್ಯ ಒದಗಿಸಿ : ಇಬ್ರಾಹಿಂ ಅಂಬಟ್ಟೆಗದ್ದೆ 

ಬೆಳ್ಳಾರೆ ಮೆಸ್ಕಾಮ್ ಕಛೇರಿಯಲ್ಲಿ ಮೂಲಭೂತ ಸೌಕರ್ಯ ಕೊರತೆ ಇದ್ದು ಕೆಲಸಗಳು ಕುಂಠಿತ ರೀತಿಯಲ್ಲಿ ಸಾಗುತ್ತದೆ ಕಛೇರಿ ಗೆ ಸರಿಯಾದ ಮೂಲಭೂತ ಸೌಕರ್ಯ ಏರ್ಪಡಿಸಿ ಎಂದು ಮನವಿ ಮಾಡಿಕೊಂಡರು

ಹೆಚ್ಚುವರಿ ಡಿಪಾಸೀಟ್ ಶುಲ್ಕ ರದ್ದು ಗೊಳಿಸಿ : ಲೊಲಾಜಾಕ್ಷಾ 

ಇದೀಗಹೆಚ್ಚುವರಿಡಿಪಾಸೀಟ್ಶುಲ್ಕಕಟ್ಟಲುಒತ್ತಾಯಮಾಡುತ್ತಿದ್ದುಈಶುಲ್ಕವನ್ನುರದ್ದುಗೊಳಿಸಲು ಸಾಧ್ಯಇಲ್ಲವೇ ? ಎಂದುಪ್ರಶ್ನಿಸಿದರು

ಮರ್ಕಂಜದಲ್ಲಿ ಕಾರ್ಯಾಚರಿಸುತ್ತಿರುವ ಕ್ರಶರ್‌ಗೆ ವಿದ್ಯುತ್‌ ಸಂಪರ್ಕ ನೀಡಲಾಗಿದೆಯೇ? : ರಶೀದ್ ಜಟ್ಟಿಪಳ್ಳ

ಮರ್ಕಂಜ ಗ್ರಾಮದಲ್ಲಿ ಕ್ರಶರ್ ಒಂದು ಕಾರ್ಯಾಚರಿಸುತ್ತಿದ್ದು ಅದಕ್ಕೆ ತಾಲೂಕು ಮಟ್ಟದಲ್ಲಿ ಪರವಾನಿಗೆ ಆಗಿರುವುದಿಲ್ಲ!? ಆದರೆ ವಿದ್ಯುತ್ ಸಂಪರ್ಕ ನೀಡಿದ್ದರೆ? ಅದು ಎಲ್ಲಿಂದ ನೀಡಲಾಯಿತು ಎಂದು ಮಾಹಿತಿ ಬೇಕು ? ಹಾಗೂ ಗಂಗಾ ಕಲ್ಯಾಣ ಯೋಜನೆಯಲ್ಲಿ ವಿದ್ಯುತ್ ಸಂಪರ್ಕ ಸೇವೆ ಯ ಭಾಗವಾಗಿ ಫಲಾನುಭವಿಗಳ ಅನುದಾನದ ಖಾತೆಯಿಂದ ಮೆಸ್ಕಾಮ್ ಇಲಾಖೆಗೆ 75 ಸಾವಿರದಷ್ಟು ಹಣ ಬರುತ್ತದೆ ಇದರಲ್ಲಿ ಮೆಸ್ಕಾಮ್ ಗೆ ಸಲ್ಲ ಬೇಕಾದ ಸೇವೆಯ ಶುಲ್ಕ ಕಳೆದು ಉಳಿದ ಶುಲ್ಕ ಫಲಾನುಭವಿಗಳಿಗೆ ಮರಳಿಸಲಾಗುತ್ತದೆಯೇ ? ರಶೀದ್ ಜಟ್ಟಿಪಳ್ಳ ಕೇಳಿದ ಪ್ರಶ್ನೆಗೆ ಈ ಎರಡು ಪ್ರಶ್ನೆ ಗಳನ್ನು ಲಿಖಿತ ರೂಪದಲ್ಲಿ ಕೇಳಿ ಹಿಂಬರಹ ಪಡೆದುಕೊಳ್ಳಿ ಎಂದು ಅಧಿಕಾರಿಗಳು ಉತ್ತರಿಸಿದರು
ಇನ್ನೂ ಉಳಿದಂತೆ ಮರ್ಕಂಜ ಭಾಗಕ್ಕೆ ಖಾಯಂ ಪವರ್ ಮ್ಯಾನ್ ಒದಗಿಸಿ ಎಂದು ಮರ್ಕಂಜ ನಿವಾಸಿಗಳು ಮನವಿ ಮಾಡಿದರು . ಕಟ್ಟಡದ ಮೆಲ್ಬಾಗದಿಂದ ಹಾದೂ ಹೊದಾ ಲೈನ್ ಅನ್ನು ತೆರವು ಗೊಳಿಸಲು, ಹಾಗೂ ಇನ್ನಿತರ ವಿಷಯಗಳ ಬಗ್ಗೆ ಸುಮಾರು 2.30 ಗಂಟೆಗಳ ಕಾಲ ಸಭೆ ನಡೆಯಿತು, ಗ್ರಾಹಕರ ಪ್ರಶ್ನೆಗಳಿಗೆ ನೇರಾ ನೇರಾ ಉತ್ತರ ಅಧಿಕಾರಿಗಳು ನೀಡಿದರು ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ, ಕೆಪಿಟಿಸಿಎಲ್ ಸಹಾಯಕ ಇಂಜಿನಿಯರ್ ಸಚಿನ್, ಮೆಸ್ಕಾಂ ಸುಳ್ಯ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹರೀಶ್ ನಾಯ್ಕ, ಸುಬ್ರಹ್ಮಣ್ಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸತೀಶ್ ಸಫಲ್ಯ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮಿದ್ ಕುತ್ತಮೊಟ್ಟೆ, ಸೂಡ ಅಧ್ಯಕ್ಷ ಕೆ ಎಂ ಮುಸ್ತಫ ಸೇರಿ ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದರು.
ಮೆಸ್ಕಾಮ್ ನಲ್ಲಿ ಸಮರ್ಪಣಾ ಸೇವೆ ಸಲ್ಲಿಸುತ್ತಿರುವ ಸುನೀಲ್ ಕುಮಾರ್, ಶರತ್ ಕುಮಾರ್, ತನ್ವೀರ್ ಶೇಖ್, ಭವಾನಿ ಶಂಕರ ಇವರಿಗೆ ತುಂಬಿದ ಸಭೆಯಲ್ಲಿ ಗ್ರಾಹಕರೋರ್ವರು ಅವರ ಸೇವಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು

 

 

Related Posts