2025–2028ರ ನೂತನ ಆಡಳಿತ ಮಂಡಳಿ ರಚನೆ: ಲತೀಫ್ ಸಖಾಫಿ ಗೂನಡ್ಕ ಅಧ್ಯಕ್ಷರಾಗಿ ಆಯ್ಕೆ
ಅಲ್-ಅಮೀನ್ ವೆಲ್ಫೇರ್ ಅಸೋಸಿಯೇಷನ್ (ರಿ), ಗೂನಡ್ಕ ಇದರ 14ನೇ ವಾರ್ಷಿಕ ಮಹಾಸಭೆಯು ದಿನಾಂಕ 19-12-2025ರ ಶುಕ್ರವಾರ ಅಪರಾಹ್ನ 2.00 ಗಂಟೆಗೆ ಹಯಾತುಲ್ ಇಸ್ಲಾಂ ಮದರಸಾ, ಗೂನಡ್ಕದಲ್ಲಿ ಅಸೋಸಿಯೇಷನ್ ಅಧ್ಯಕ್ಷರಾದ ಜಾಫರ್ ಸಾಧಿಕ್ ಕುಂಭಕ್ಕೋಡ್, ಗೂನಡ್ಕರವರ ಅಧ್ಯಕ್ಷತೆಯಲ್ಲಿ ಜರುಗಿತು.
ಸಭೆಯ ಪ್ರಾರಂಭದಲ್ಲಿ ಅಧ್ಯಕ್ಷ ಜಾಫರ್ ಸಾಧಿಕ್ ಅವರು ಸರ್ವರನ್ನು ಸ್ವಾಗತಿಸಿದರು. ಬಳಿಕ 2024–2025ನೇ ಸಾಲಿನ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರವನ್ನು ಅಸೋಸಿಯೇಷನ್ ಸಂಘಟನಾ ಕಾರ್ಯದರ್ಶಿ ಟಿ. ಬಿ. ಅಬ್ದುಲ್ ಅಝೀಝ್ ಅವರು ಮಂಡಿಸಿದರು. ಮುಖ್ಯ ಅತಿಥಿಗಳಾಗಿ ಸಲಹಾ ಸಮಿತಿ ಸದಸ್ಯರು ಹಾಗೂ ಜಮಾಅತ್ ಅಧ್ಯಕ್ಷರಾದ ಮಹಮ್ಮದ್ ಕುಂಞಿ ಗೂನಡ್ಕ ಅವರು ಸಂಘಟನೆಯ ಸಾಧನೆಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಬದ್ರಿಯಾ ಜುಮಾ ಮಸೀದಿ ಖತೀಬರು ಹಾಗೂ ಅಲ್-ಅಮೀನ್ ಸಲಹಾ ಸಮಿತಿ ಸದಸ್ಯರಾದ ಅಬ್ದುಲ್ ರಹಿಮಾನ್ ಸಖಾಫಿ ಉಸ್ತಾದ್ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ವೇದಿಕೆಯಲ್ಲಿ ಸದರ್ ಮುಅಲ್ಲಿಂರಾದ ಸವಾದ್ ಮದನಿ, ಅಲ್-ಅಮೀನ್ ಸಲಹಾ ಸಮಿತಿ ಸದಸ್ಯರು ಹಾಗೂ ಜಮಾಅತ್ ಪ್ರಧಾನ ಕಾರ್ಯದರ್ಶಿ ಅಶ್ರಫ್ ಎಸ್.ಎ, ಅಲ್-ಅಮೀನ್ ಪ್ರಧಾನ ಕಾರ್ಯದರ್ಶಿ ಹಸೈನ್ ಎ.ಟಿ, ಉಪಾಧ್ಯಕ್ಷ ಮಹಮ್ಮದ್ ಪೆಲ್ತಡ್ಕ, ಕಾರ್ಯದರ್ಶಿ ಮಹಮ್ಮದ್ ಮಿರ್ಷಾದ್ ಚೇರೂರು, ಸಂಘಟನಾ ಕಾರ್ಯದರ್ಶಿ ಟಿ.ಬಿ. ಅಬ್ದುಲ್ ಅಝೀಝ್, ಕೋಶಾಧಿಕಾರಿ ಡಿ.ಎಂ. ಅಬ್ದುಲ್ಲಾ ಪೆಲ್ತಡ್ಕ, ನಿರ್ದೇಶಕರುಗಳಾದ ಅಬ್ದುಲ್ ಲತೀಫ್ ಸಖಾಫಿ ಹಾಗೂ ಜಾಬಿರ್ ಎಂಬಿ ಉಪಸ್ಥಿತರಿದ್ದರು.
ತಮ್ಮ ಮೂರು ವರ್ಷದ ಅಧ್ಯಕ್ಷತ್ವ ಅವಧಿಯಲ್ಲಿ ಸಂಪೂರ್ಣ ಸಹಕಾರ ನೀಡಿದ ಹಾಗೂ ಆಡಳಿತ ಮಂಡಳಿಯ ಮಾಸಿಕ ಸಭೆಗಳಲ್ಲಿ ಉತ್ತಮ ಹಾಜರಾತಿ ಪಡೆದ ಸಂಘಟನಾ ಕಾರ್ಯದರ್ಶಿ ಟಿ. ಬಿ. ಅಬ್ದುಲ್ ಅಝೀಝ್ ಮತ್ತು ಕಾರ್ಯದರ್ಶಿ ಮಹಮ್ಮದ್ ಮಿರ್ಷಾದ್ ಚೇರೂರು ಅವರಿಗೆ ಅಧ್ಯಕ್ಷರು ಪ್ರಶಂಸನಾ ಪತ್ರ ನೀಡಿ ಗೌರವಿಸಿದರು. ಅದೇ ವೇಳೆ ತಮ್ಮ ಅಧಿಕಾರಾವಧಿಯಲ್ಲಿ ಸಹಕರಿಸಿದ ಜಮಾಅತ್ ಅಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ, ಊರಿನ ಪ್ರಮುಖರಾದ ಇಬ್ರಾಹಿಂ ಗೂನಡ್ಕ, ಅಬೂಸಾಲಿ ಪಿ.ಕೆ, ಶೌವಾದ್ ಗೂನಡ್ಕ, ದುಬೈ ಪ್ರತಿನಿಧಿಗಳಾದ ಎಸ್.ಎಂ. ಅಬ್ದುಲ್ ಖಾದರ್, ಮುಸ್ತಾಫ ಪಾಂಡಿ, ಫೈಝಲ್ ಟಿ.ಕೆ, ಬದ್ರುದ್ದೀನ್, ತಾಜುದ್ದೀನ್ ಟಿ.ಎ, ಕತಾರ್‌ನ ಯೂನುಸ್ ಪಿ.ಯು. ಸವಾದ್, ಸಿರಾಜುದ್ದೀನ್ ಶಾಲಾಬಳಿ, ಝಕರಿಯಾ ಅಲ್-ಜೀರಿಯ, ಸಂಸ್ಥೆಯೊಂದಿಗೆ ಸಹಕರಿಸಿದ ಎಲ್ಲಾ ಅನಿವಾಸಿ ಭಾರತೀಯರಿಗೆ, ಉತ್ತಮ ಮಾರ್ಗದರ್ಶನ ನೀಡಿದ ಊರಿನ ಹಿರಿಯರಾದ ಹಾಜಿ ಅಬ್ಬಾಸ್ ಗೂನಡ್ಕ, ಹಾಜಿ ಅಬ್ದುಲ್ಲಾ ಕೊಪ್ಪದಕಜೆ, ಉಮ್ಮರ್ ಹಾಜಿ ಪಿ.ಎ, ಮೂಸಾನ್ ಹಾಜಿ, ಡಿ.ಆರ್. ಅಬ್ದುಲ್ ಖಾದರ್, ಹಾಗೂ ತಮ್ಮ ಕುಂಭಕ್ಕೋಡು ಕುಟುಂಬದ ಸದಸ್ಯರಾದ ಮಹಮ್ಮದ್, ಅಬ್ದುಲ್ ಖಾದರ್, ಶರೀಫ್ ಕುಂಭಕ್ಕೋಡು, ಊರಿನ ಯುವ ಪ್ರಮುಖರಾದ ಹಾರಿಸ್ ಝಮ್ ಝಮ್, ರಹೀಂ ಕೊಪ್ಪ, ಇಬ್ರಾಹಿಂ ಟಿ.ಎ ಸೇರಿದಂತೆ ಎಲ್ಲಾ ಸದಸ್ಯರಿಗೆ ಅಧ್ಯಕ್ಷರು ಕೃತಜ್ಞತೆ ಸಲ್ಲಿಸಿದರು.ಸಭೆಯ ಕೊನೆಯಲ್ಲಿ ಅಧ್ಯಕ್ಷರ ವತಿಯಿಂದ ಸಭೆಗೆ ಹಾಜರಾದ ಎಲ್ಲಾ ಸದಸ್ಯರಿಗೆ ಸುಗಂಧ ದ್ರವ್ಯ ವಿತರಿಸಲಾಯಿತು. ನಂತರ 2025–2028ನೇ ಸಾಲಿನ ನೂತನ ಆಡಳಿತ ಮಂಡಳಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ನೂತನ ಆಡಳಿತ ಮಂಡಳಿ ರಚನೆ
ಅಧ್ಯಕ್ಷರಾಗಿ ಅಬ್ದುಲ್ ಲತೀಫ್ ಸಖಾಫಿ, ಉಪಾಧ್ಯಕ್ಷರಾಗಿ ಜಿ.ಎಂ. ಅಬ್ದುಲ್ಲಾ (ಗೂನಡ್ಕ), ಪ್ರಧಾನ ಕಾರ್ಯದರ್ಶಿಯಾಗಿ ಟಿ.ಬಿ. ಅಬ್ದುಲ್ ಅಝೀಝ್ ದರ್ಖಾಸ್, ಕಾರ್ಯದರ್ಶಿಯಾಗಿ ಮಹಮ್ಮದ್ ಮಿರ್ಷಾದ್, ಕೋಶಾಧಿಕಾರಿಯಾಗಿ ಜಾಬಿರ್ ಎಂಬಿ, ನಿರ್ದೇಶಕರಾಗಿ ಜಾಫರ್ ಸಾಧಿಕ್ ಕುಂಭಕ್ಕೋಡ್, ಡಿ.ಎಂ. ಅಬ್ದುಲ್ಲಾ, ಮಹಮ್ಮದ್ ಪೆಲ್ತಡ್ಕ, ಅಬೂಬಕ್ಕರ್ ಸಿದ್ದೀಕ್ ಬಿ.ಎಂ. ಅವರನ್ನು ಆಯ್ಕೆ ಮಾಡಲಾಯಿತು. ಸಲಹಾ ಸಮಿತಿ ಸದಸ್ಯರಾಗಿ ಮಹಮ್ಮದ್ ಕುಂಞಿ ಗೂನಡ್ಕ, ಅಬ್ದುಲ್ ರಹಿಮಾನ್ ಸಖಾಫಿ, ಎಸ್.ಎ. ಅಶ್ರಫ್ ದೊಡಡ್ಕ ಅವರನ್ನು ಆಯ್ಕೆ ಮಾಡಲಾಯಿತು.



