ಇತರೆ, ಸ್ಥಳೀಯ

ಸುಳ್ಯ ವಿಧಾನಸಭಾ ಕ್ಷೇತ್ರದ ಮಸೀದಿ–ಮದರಸ ವಕ್ಫ್ ಆಸ್ತಿಗಳ ದುರಸ್ತಿ, ಜೀರ್ಣೋದ್ದಾರಕ್ಕೆ ₹35 ಲಕ್ಷ ಅನುದಾನ ಮಂಜೂರು

ವಕ್ಫ್ ಇಲಾಖೆಯಿಂದ ಅನುದಾನ ಬಿಡುಗಡೆ; ಧಾರ್ಮಿಕ ಶಿಕ್ಷಣ ಕೇಂದ್ರಗಳ ಮೂಲಸೌಕರ್ಯ ಅಭಿವೃದ್ಧಿಗೆ ಉತ್ತೇಜನ

ಸುಳ್ಯ : ಕರ್ನಾಟಕ ಸರಕಾರದ ವಕ್ಫ್ ಇಲಾಖೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದ ಮಸೀದಿ ಹಾಗೂ ಮದರಸ ವಕ್ಫ್ ಆಸ್ತಿಗಳ ದುರಸ್ತಿ ಮತ್ತು ಜೀರ್ಣೋದ್ದಾರ ಕಾರ್ಯಗಳಿಗೆ ಒಟ್ಟು ರೂ. 35 ಲಕ್ಷ ಅನುದಾನ ಮಂಜೂರು ಮಾಡಲಾಗಿದೆ.
ಈ ಅನುದಾನದಡಿ, ಸುಳ್ಯ ತಾಲೂಕಿನ ಅಜ್ಜಾವರದಲ್ಲಿರುವ ತಖ್ವಿಯತ್ತುಲ್ ಇಸ್ಲಾಂ ಜಮಾಅತ್ ಕಮಿಟಿ ಅಧೀನದ ಬದ್ರಿಯಾ ಮಸೀದಿ ದುರಸ್ತಿ ಹಾಗೂ ಜೀರ್ಣೋದ್ದಾರಕ್ಕೆ ರೂ. 20 ಲಕ್ಷ, ಜಾಲ್ಸೂರು ಗ್ರಾಮದ ಬದ್ರಿಯಾ ಜುಮಾ ಮಸೀದಿ ಪೈಚಾರ್ ದುರಸ್ತಿ ಹಾಗೂ ಜೀರ್ಣೋದ್ದಾರಕ್ಕೆ ರೂ. 10 ಲಕ್ಷ ಹಾಗೂ ಸುಳ್ಯ ಶಾಂತಿನಗರ ಮುಸ್ಲಿಂ ವೆಲ್‌ಫೇರ್ ಅಸೋಸಿಯೇಶನ್ ಅಧೀನದ ನೂರುಲ್ ಹುಧಾ ಮಸೀದಿ ಮತ್ತು ಮದರಸ ಕಟ್ಟಡ ಅಭಿವೃದ್ಧಿ ಕಾಮಗಾರಿಗೆ ರೂ. 5 ಲಕ್ಷ ಅನುದಾನ ನೀಡಲಾಗಿದೆ.

ವಕ್ಫ್ ಸಚಿವರಿಗೆ ಅಭಿನಂದನೆ ಸಲ್ಲಿಸಿದ, ಟಿ ಎಂ ಶಾಹಿದ್

ಸುಳ್ಯ ವಿಧಾನ ಸಭಾ ಕ್ಷೇತ್ರದ ಮಸೀದಿ ಮತ್ತು ಮದರಸ ದುರಸ್ತಿ, ಜೀರ್ಣೋದ್ದಾರಕ್ಕೆ ಸರಕಾರದಿಂದ ಗರಿಷ್ಟ ಮೊತ್ತ ಬಿಡುಗಡೆ ಮಾಡಿದ ಕರ್ನಾಟಕ ಸರಕಾರದ ಸರಕಾರದ ವಕ್ಫ್ ಸಚಿವರಾದ ಬಿ.ಝೆಡ್ ಝಮೀರ್ ಅಹ್ಮದ್ ಖಾನ್ ರವರೆಗೆ ಸರಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ (ಸಚಿವ ಸ್ಥಾನಮಾನ) ಟಿ ಎಂ ಶಾಹಿದ್ ತೆಕ್ಕಿಲ್ ಅಭಿನಂದನೆ ಸಲ್ಲಿಸಿದ್ದಾರೆ.

 

Related Posts