Featured, ಇತರೆ, ಸ್ಥಳೀಯ

ಸುಳ್ಯ : ಸುನ್ನೀ ಸಂಯುಕ್ತ ಜಮಾಅತ್ ವಾರ್ಷಿಕ ಮಹಾಸಭೆ ಹಾಗೂ ರಾಜ್ಯ ನಾಯಕರ ಸಂದರ್ಶನ

ಸುಳ್ಯ: ಸುನ್ನೀ ಸಂಯುಕ್ತ ಜಮಾಅತ್ ಕರ್ನಾಟಕ ಇದರ ಅಧೀನದಲ್ಲಿರುವ 11 ಸಂಯುಕ್ತ ಜಮಾಅತ್‌ಗಳ 400ಕ್ಕೂ ಅಧಿಕ ಮೊಹಲ್ಲಾ ಖಾಝಿಗಳ ಮಾರ್ಗದರ್ಶನದಲ್ಲಿ, ಬಹು ಇಂಡಿಯನ್ ಗ್ರಾಂಡ್ ಮುಫ್ತಿ ಎ.ಪಿ. ಉಸ್ತಾದ್ ಅವರ ಮಾರ್ಗದರ್ಶನದೊಂದಿಗೆ ಆಯೋಜಿಸಲಾದ ರಾಜ್ಯ ನಾಯಕರ ತವಾಸುಲ್ ಸಮ್ಮಿಟ್ ಕಾರ್ಯಕ್ರಮದ ಉದ್ಘಾಟನೆ ಹಾಗೂ ಸುನ್ನೀ ಸಂಯುಕ್ತ ಜಮಾಅತ್ ಸುಳ್ಯ ಇದರ ವಾರ್ಷಿಕ ಮಹಾಸಭೆ ದಿನಾಂಕ 24-12-2025ರಂದು ಗಾಂಧೀನಗರದ ಮುನವ್ವಿರುಲ್ ಇಸ್ಲಾಂ ಮದರಸದಲ್ಲಿ ನಡೆಯಿತು.

ಕಾರ್ಯಕ್ರಮವು ಸುನ್ನೀ ಸಂಯುಕ್ತ ಜಮಾಅತ್ ಸುಳ್ಯ ಅಧ್ಯಕ್ಷರಾದ ಮುಹಮ್ಮದ್ ಕುಂಞ ಗೂನಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ರಾಜ್ಯ ಸಮಿತಿ ಅಧ್ಯಕ್ಷರಾದ ಬಹು ಅಸ್ಸಯ್ಯಿದ್ ಮುಶ್ತಾಕುರ್ರಹ್ಮಾನ್ ಸಹದಿ ತಂಞಳ್ ದುವಾ ನೆರವೇರಿಸಿದರು. ಸ್ಥಳೀಯ ಖತೀಬರಾದ ಬಹು ಅಶ್ರಫ್ ಖಾಮಿಲ್ ಸಖಾಫಿ ಅವರು ಸ್ವಾಗತ ಭಾಷಣ ನಡೆಸಿದರು

ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಬಹು ಅಶ್ರಫ್ ಸಹದಿ ಮಲ್ಲೂರು ಕಾರ್ಯಕ್ರಮವನ್ನು ಅಧಿಕೃತವಾಗಿ ಉದ್ಘಾಟಿಸಿದರು. ಬಳಿಕ ರಾಜ್ಯ ಸಮಿತಿ ಮೀಡಿಯಾ ಕಾರ್ಯದರ್ಶಿ ಬಹು ಹಾಜಿ ಹಮೀದ್ ಕೊಡುಂಗಾಯಿ ಅವರು ‘ದೀವಾನ್-ಇ-ಖಾಝಿ’ ಕುರಿತು ಸವಿಸ್ತಾರ ವಿವರಣೆ ನೀಡಿದರು. ನಂತರ ಮರ್ಕಝ್, ಕೇರಳದ ಬಹು ಮರ್ಜ್ಹೂಕ್ ಸಹದಿ ಅವರು ತರಬೇತಿ ಅಧಿವೇಶನ ನಡೆಸಿ ಮಾರ್ಗದರ್ಶನ ನೀಡಿದರು.

ಈ ಸಂದರ್ಭದಲ್ಲಿ ಮಹಿಮ್ಮಾತ್ ಉರೂಸ್ ಪೋಸ್ಟರ್ ಹಾಗೂ ಮೂರನೇ ಕೇರಳ ಯಾತ್ರೆಯ ಉದ್ಘಾಟನಾ ಸ್ಟಿಕ್ಕರ್ ಅನ್ನು ಬಿಡುಗಡೆ ಮಾಡಲಾಯಿತು. ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಕುರಿತು ಸರ್ಕ್ಯುಲರ್‌ಗಳನ್ನು ವಿತರಿಸಲಾಯಿತು. ನಂತರ ಸುನ್ನೀ ಸಂಯುಕ್ತ ಜಮಾಅತ್ ಸುಳ್ಯ ಇದರ ವಾರ್ಷಿಕ ಮಹಾಸಭೆ ನಡೆಯಿತು.

ಕಾರ್ಯಕ್ರಮದ ಅಂತ್ಯದಲ್ಲಿ ಆಗಮಿಸಿದ ಎಲ್ಲಾ ರಾಜ್ಯ ನಾಯಕರನ್ನು ಸನ್ಮಾನಿಸಲಾಯಿತು. ಜೊತೆಗೆ ಸುನ್ನೀ ಸಂಯುಕ್ತ ಜಮಾಅತ್ ಸುಳ್ಯ ವತಿಯಿಂದ ರಾಜ್ಯ ಸಮಿತಿಗೆ ಆಯ್ಕೆಯಾದ ಅಬ್ದುಲ್ ಹಮೀದ್ ಬೀಜಕೊಚ್ಚಿ, ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿಗೆ ಆಯ್ಕೆಯಾದ ಅಬ್ದುಲ್ ಹಮೀದ್ ಸುಣ್ಣಮೂಲೆ ಹಾಗೂ ಹನೀಫ್ ಹಾಜಿ ಇಂದ್ರಾಜೆ ಅವರನ್ನು ಗೌರವಿಸಲಾಯಿತು.
ಅಬ್ದುಲ್ ಹಮೀದ್ ಸುಣ್ಣಮೂಲೆ ಅವರು ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಸುನ್ನೀ ಸಂಯುಕ್ತ ಜಮಾಅತ್ ಸುಳ್ಯ ಕಾರ್ಯದರ್ಶಿ ಹಮೀದ್ ಬೀಜಕೊಚ್ಚಿ ಅವರು ನೆರವೇರಿಸಿದರು.

 

Related Posts