ಖ್ಯಾತ ವಾಗ್ಮಿ ಸ್ವಲಾಹುದ್ದಿನ್ ಫೈಝಿ ವಲ್ಲಪುಝ ಸುಳ್ಯಕ್ಕೆ

ಎಸ್ಕೆಎಸ್ಎಸ್ಎಫ್ ಸುಳ್ಯ ವಲಯದ ವತಿಯಿಂದ ಸಮಸ್ತ ಶತಮಾನೋತ್ಸವದ ಅಂಗವಾಗಿ ನಡೆಯಲಿರುವ ಅಂತಾರಾಷ್ಟ್ರೀಯ ಮಹಾ ಸಮ್ಮೇಳನದ ಪ್ರಚಾರ ಕಾರ್ಯಕ್ರಮವು ಜ.20ರಂದು ಸಂಜೆ ಸುಳ್ಯ ಗಾಂಧಿನಗರ ಪೆಟ್ರೋಲ್ ಪಂಪ್ ಮುಂಭಾಗ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾದ ಹಾಜಿ ಅಬ್ದುಲ್ ಖಾದರ್ ಬಾಯಂಬಾಡಿ ವಹಿಸಲಿದ್ದಾರೆ. ಬಹು ಸಯ್ಯಿದ್ ಜೈನುಲ್ ಆಬಿದೀನ್ ತಂಗಳ್ ದುಗ್ಗಳಡ್ಕ ಅವರು ದುವಾ ನೆರವೇರಿಸಲಿದ್ದು, ಕಾರ್ಯಕ್ರಮವನ್ನು ಬಹು ಶೈಖುನಾ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಉದ್ಘಾಟಿಸಲಿದ್ದಾರೆ.
ಮುಖ್ಯ ಭಾಷಣವನ್ನು ಬಹು ಸ್ವಲಾಹುದ್ದಿನ್ ಫೈಝಿ ವಲ್ಲಪುಝ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಬಹು ಶೈಖುನಾ ಉಸ್ಮಾನುಲ್ ಫೈಝಿ ತೊಡಾರ್, ಬಹು ಅಬ್ದುಲ್ಲಾ ಮುಸ್ಲಿಯಾರ್ ಕೊಡಗು, ಬಹು ಅನೀಸ್ ಕೌಸರಿ, ಟಿ.ಎಂ. ಶಾಹಿದ್ ತೆಕ್ಕಿಲ್, ಬಹು ಮಹಮ್ಮದ್ ಮುಸ್ಲಿಯಾರ್ ಮುಂಡೊಳೆ, ಎಸ್ಕೆಎಸ್ಎಸ್ಎಫ್ ಸುಳ್ಯ ವಲಯ ಅಧ್ಯಕ್ಷ ಅಬೂಬಕ್ಕರ್ ಪೂಪಿ ಸೇರಿದಂತೆ ಹಲವು ಉಲಮಾ, ಉಮರಾ ಹಾಗೂ ರಾಜಕೀಯ-ಸಾಮಾಜಿಕ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ.
ಸಮಸ್ತ ಶತಮಾನೋತ್ಸವದ ಮಹತ್ವವನ್ನು ಜನತೆಗೆ ಪರಿಚಯಿಸುವ ಉದ್ದೇಶದಿಂದ ಈ ಪ್ರಚಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

