Featured, ಇತರೆ, ಸ್ಥಳೀಯ

ಅರಂತೋಡು ಎಸ್ ಕೆ ಎಸ್ ಎಸ್ ಎಫ್ ಶಾಖೆ ವತಿಯಿಂದ ಸಮಸ್ತ ಸಮ್ಮೇಳನ ಪ್ರಚಾರಾರ್ಥ ಸೌಹಾರ್ದ ಚಹಾ ಕೂಟ

ಅರಂತೋಡು ಎಸ್‌.ಕೆ‌.ಎಸ್‌.ಎಸ್‌.ಎಫ್ ಶಾಖೆಯ ವತಿಯಿಂದ ಅರಂತೋಡು ಬದ್ರಿಯಾ ಜುಮ್ಮಾ ಮಸೀದಿ ವಠಾರದಲ್ಲಿ ಸಮಸ್ತ ಶತಾಬ್ಧಿ ಸಮ್ಮೇಳನ ಪ್ರಯುಕ್ತ ಸೌಹಾರ್ದ ಚಹಾ ಕೂಟವನ್ನು ಫೆಬ್ರವರಿ 3ರಂದು ಆಯೋಜಿಸಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜುಬೇರ್ ವಹಿಸಿದ್ದರು. ಅರಂತೋಡು ಜುಮ್ಮಾ ಮಸೀದಿ ಖತೀಬರಾದ ಇಸ್ಮಾಯಿಲ್ ಫೈಝಿ ಗಟ್ಟಿ ಮನೆ ದುವಾ ನೆರವೇರಿಸಿದರು.
ವೇದಿಕೆಯಲ್ಲಿ ಅರಂತೋಡು ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಅಶ್ರಫ್ ಗುಂಡಿ ಮಾತನಾಡಿ, ಸಮಸ್ತ ಶತಾಬ್ಧಿ ಕಾರ್ಯಕ್ರಮವು ಕುಣಿಯದಲ್ಲಿ ಫೆಬ್ರವರಿ 4ರಂದು ಪ್ರಾರಂಭಗೊಂಡು ಯಶಸ್ವಿಯಾಗಿ ನಡೆಯಲಿದೆ ಎಂದು ತಿಳಿಸಿ, ಕಾರ್ಯಕ್ರಮದ ವಿವರಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಸುಳ್ಯ ಎಸ್‌.ವೈ‌.ಎಸ್ ಅಧ್ಯಕ್ಷ ಹಮೀದ್ ಹಾಜಿ, ಅರಂತೋಡು ಜುಮ್ಮಾ ಮಸೀದಿ ಕಾರ್ಯದರ್ಶಿ ಕೆ.ಎಂ. ಮೂಸಾನ್, ನಿವೃತ್ತ ಶಿಕ್ಷಕ ಅಬ್ದುಲ್ಲ ಮಾಸ್ಟರ್, ನುಸ್ರತುಲ್ ಇಸ್ಲಾಂ ಮದರಸ ಮ್ಯಾನೇಜ್ಮೆಂಟ್ ಸಂಚಾಲಕ ಅಮೀರ್ ಕುಕ್ಕುಂಬಳ, ಸಹಾಯಕ ಅಧ್ಯಾಪಕ ಅಬ್ದುಲ್ ರಹಿಮಾನ್, ಮುನೀರ್ ದಾರಿಮಿ, ಹಾಜಿ ಅಬ್ದುಲ್ ಖಾದರ್ ಪಟೇಲ್, ಉಸ್ಮಾನ್, ಮೋಯಿದು ಕುಂಞ, ರಜಾಕ್ ಹಾಜಿ ಅಡಿಮರಡ್ಕ, ಅಬ್ದುಲ್ ಖಾದರ್ ಮೊಟ್ಟಂಗಾರ್, ಕೆ.ಎಂ. ಮುಸ್ತಫಾ, ಮುಜೀಬ್, ಆಶಿಕ್, ಮುಹ್ಸಿನ್, ಹಿರಿಯರಾದ ಮೋಯಿದು ಕು, ಮಿಸ್ಬಾ, ಕಬೀರ್, ಇಕ್ಬಾಲ್, ಮುಝಾಮ್ಮಿಲ್, ಗೂನಡ್ಕ ಶಾಖೆಯ ಕಾರ್ಯದರ್ಶಿ ಹನೀಪ್ ಮೊಟ್ಟೆಂಗಾರ್, ಜುರೈದ್ ತೆಕ್ಕಿಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು ತಾಜುದ್ದೀನ್ ಅರಂತೋಡು ಸ್ವಾಗತಿಸಿ, ವಂದಿಸಿದರು.

ವರದಿ: ತಾಜುದ್ದೀನ್ ಎಸ್ ಅರಂತೋಡು

Related Posts