Featured, ಇತರೆ, ಸ್ಥಳೀಯ

ಕುಶಾಲನಗರದ ಜನಾಬ್ ಮುಹಮ್ಮದ್ ಸೀದಿ ಹಾಜಿ ಅವರಿಗೆ ದಾರುಲ್ ಹುದಾ ಬಹರೈನ್ ಸಮಿತಿಯಿಂದ ಸನ್ಮಾನ

ಕುಶಾಲನಗರದ ನಿವಾಸಿ ಜನಾಬ್ ಮುಹಮ್ಮದ್ ಸೀದಿ ಹಾಜಿ ಅವರು ದಾರುಲ್ ಹುದಾ ತಂಬಿನಮಕ್ಕಿ ಅಭಯ ಕೇಂದ್ರದ ವಿವಿಧ ಧಾರ್ಮಿಕ-ಸಾಮಾಜಿಕ ಚಟುವಟಿಕೆಗಳಿಗೆ ಬಹರೈನ್‌ನಲ್ಲಿನ ತಂಬಿನಮಕ್ಕಿ ಸಮಿತಿ ರೂಪುಗೊಂಡ ದಿನದಿಂದಲೂ ನಿರಂತರವಾಗಿ ಅಮೂಲ್ಯ ಸಹಾಯ-ಸಹಕಾರ ನೀಡುತ್ತಾ ಬಂದಿದ್ದಾರೆ.

ಸುಮಾರು 43 ವರ್ಷಗಳ ಸುದೀರ್ಘ ಅನಿವಾಸಿ ಜೀವನಕ್ಕೆ ವಿದಾಯ ಹೇಳಿ ತಾಯ್ನಾಡಿಗೆ ಮರಳುತ್ತಿರುವ ಸಂದರ್ಭದಲ್ಲಿ, ಅವರ ಸೇವೆ ಹಾಗೂ ಕೊಡುಗೆಗಳನ್ನು ಗೌರವಿಸಿ ದಾರುಲ್ ಹುದಾ ಬಹರೈನ್ ಸಮಿತಿ ವತಿಯಿಂದ ಕೆಸಿಎಫ್ ಕೇಂದ್ರ ಕಚೇರಿಯಲ್ಲಿ ಭವ್ಯ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಈ ಸಂದರ್ಭ ಮಾತನಾಡಿದ ವಕ್ತಾರರು, ಜನಾಬ್ ಮುಹಮ್ಮದ್ ಸೀದಿ ಹಾಜಿ ಅವರು ವಿದೇಶದಲ್ಲಿದ್ದರೂ ಸಹ ತಮ್ಮ ಊರು, ಸಮುದಾಯ ಮತ್ತು ಶಿಕ್ಷಣ-ಸೇವಾ ಕ್ಷೇತ್ರಗಳ ಬಗ್ಗೆ ಹೊಂದಿದ್ದ ನಿಷ್ಠೆ ಹಾಗೂ ಬದ್ಧತೆ ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿದರು. ಅವರ ಸಹಕಾರದಿಂದ ದಾರುಲ್ ಹುದಾ ತಂಬಿನಮಕ್ಕಿ ಅಭಯ ಕೇಂದ್ರದ ಹಲವಾರು ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಗೊಂಡಿವೆ ಎಂದು ಕೃತಜ್ಞತೆಯಿಂದ ಸ್ಮರಿಸಿದರು.
ಕಾರ್ಯಕ್ರಮದಲ್ಲಿ ದಾರುಲ್ ಹುದಾ ಬಹರೈನ್ ಸಮಿತಿಯ ಪದಾಧಿಕಾರಿಗಳು, ಕೆಸಿಎಫ್ ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದು, ಜನಾಬ್ ಮುಹಮ್ಮದ್ ಸೀದಿ ಹಾಜಿ ಅವರಿಗೆ ಶುಭಾಶಯಗಳನ್ನು ಕೋರಿ, ಮುಂದಿನ ಜೀವನಕ್ಕೆ ಯಶಸ್ಸು ಮತ್ತು ಆರೋಗ್ಯವನ್ನು ಹಾರೈಸಿದರು.

 

Related Posts