Featured, ಇತರೆ, ಸ್ಥಳೀಯ

“ಸುಳ್ಯ: ಗುರುಂಪಿನಲ್ಲಿ ಗಾಳಿ–ಮಳೆಗೆ ತೆಂಗಿನಮರ ಬಿದ್ದು ಮನೆಗೆ ಹಾನಿ”

ಸುಳ್ಯ: ಗುರುಂಪು ಪ್ರದೇಶದಲ್ಲಿ ಇಂದು ಸಂಜೆ ಸುರಿದ ಗಾಳಿ ಮಳೆಯಿಂದಾಗಿ ಮನೆಯೊಂದಕ್ಕೆ ತೆಂಗಿನಮರ ಬಿದ್ದು ತೀವ್ರ ಹಾನಿಯಾದ ಘಟನೆ ವರದಿಯಾಗಿದೆ..
ಗುರುಂಪು ನಿವಾಸಿ ಮುನೀರ್ ಅವರ ಮನೆಯ ಮೇಲ್ಭಾಗಕ್ಕೆ ಸಮೀಪದಲ್ಲಿದ್ದ ತೆಂಗಿನಮರ ಗಾಳಿಯ ತೀವ್ರತೆಗೆ ನೆಲಕಚ್ಚಿ ಮನೆಯ ಮೇಲೆ ಬಿದ್ದ ಪರಿಣಾಮ, ಮನೆಯ ಮೇಲ್ಚಾವಣಿ ಹಾಗೂ ಕೆಲವು ಭಾಗಗಳಿಗೆ ಗಂಭೀರ ಹಾನಿಯಾಗಿದೆ ಎಂದು ತಿಳಿದುಬಂದಿದೆ.
ಘಟನೆ ಸಂಭವಿಸಿದ ವೇಳೆ ಮನೆಯಲ್ಲಿ ಕುಟುಂಬದ ಸದಸ್ಯರು ಇದ್ದರೂ, ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಸ್ಥಳೀಯರು ಕೂಡಲೇ ಘಟನಾ ಸ್ಥಳಕ್ಕೆ ಆಗಮಿಸಿ ಅಗತ್ಯ ನೆರವು ಒದಗಿಸಿದ್ದಾರೆ. ಗಾಳಿ ಮಳೆಯಿಂದ ಪ್ರದೇಶದಲ್ಲಿ ಕೆಲ ಸಮಯ ವಿದ್ಯುತ್ ವ್ಯತ್ಯಯವೂ ಉಂಟಾಗಿದೆ ಎಂದು ತಿಳಿದುಬಂದಿದೆ.

Related Posts