Featured, ಇತರೆ, ಸ್ಥಳೀಯ

ದಾಸರಬೈಲು ಶಾಲೆಯ ವಿದ್ಯಾರ್ಥಿನಿ ಹರ್ಷಿಣಿ ಹೆಚ್ ನವೋದಯಕ್ಕೆ ಆಯ್ಕೆ

ಸ ಕಿ ಪ್ರಾಥಮಿಕ ಶಾಲೆ ದಾಸರಬೈಲು ಇಲ್ಲಿಯ ಪ್ರತಿಭಾವಂತ ವಿದ್ಯಾರ್ಥಿನಿ ಹರ್ಷಿಣಿ ಹೆಚ್ ಅವರು ನವೋದಯ ವಿದ್ಯಾಲಯ, ಮುಡಿಪುದಲ್ಲಿ 6ನೇ ತರಗತಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಆಯ್ಕೆಯಾಗಿದ್ದಾರೆ.
ತಮ್ಮ ಪರಿಶ್ರಮ ಮತ್ತು ಅಧ್ಯಯನದ ಮೂಲಕ ಈ ಸಾಧನೆ ಮಾಡಿದ ಹರ್ಷಿಣಿ, ಶಾಲೆ ಹಾಗೂ ಗ್ರಾಮದ ಗೌರವವನ್ನು ಹೆಚ್ಚಿಸಿದ್ದಾಳೆ. ಈಕೆ ಮೋಹನ ಹೊಸೋಳಿಕೆ ಹಾಗೂ ಮರ್ಕಂಜ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷೆ ಶ್ರೀಮತಿ ಗೀತಾ ಹೊಸೋಳಿಕೆ ಇವರ ಪುತ್ರಿಯಾಗಿದ್ದಾರೆ.
ವಿದ್ಯಾರ್ಥಿನಿಯ ಸಾಧನೆಗೆ ಶಿಕ್ಷಕರು, ಪೋಷಕರು ಹಾಗೂ ಸ್ಥಳೀಯರು ಅಭಿನಂದನೆ ಸಲ್ಲಿಸಿದ್ದಾರೆ.
m

Related Posts