Featured, ಇತರೆ, ಸ್ಥಳೀಯ

ದ್ವಿತೀಯ ಪಿಯುಸಿ ಫಲಿತಾಂಶ: ಮಹಮ್ಮದ್ ಶಿಹಾಬುದ್ದೀನ್ ಪಿ.ಎಂಗೆ ವಾಣಿಜ್ಯ ವಿಭಾಗದಲ್ಲಿ ಡಿಸ್ಟಿಂಕ್ಷನ್

ಸುಳ್ಯ: ಇಲ್ಲಿನ ರೋಟರಿ ಪಿ.ಯು. ಕಾಲೇಜಿನ ವಿದ್ಯಾರ್ಥಿ ಮಹಮ್ಮದ್ ಶಿಹಾಬುದ್ದೀನ್ ಪಿ.ಎಂ ಅವರು ದ್ವಿತೀಯ ಪಿಯುಸಿ ಪರೀಕ್ಷೆ ವಾಣಿಜ್ಯ ವಿಭಾಗದಲ್ಲಿ 513 ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದಾರೆ.
ಪೈಂಬಚಾಲ್ ನಿವಾಸಿಗಳಾದ ಅಬ್ದುಲ್ಲಾ ಪಿ.ಎಂ ಮತ್ತು ನಸೀಮಾ ಕೆ ದಂಪತಿಗಳ ಪುತ್ರರಾದ ಇವರು, ತಮ್ಮ ಶ್ರಮ ಮತ್ತು ಸಮರ್ಪಣೆಯಿಂದ ಈ ಸಾಧನೆಯನ್ನು ಮಾಡಿದ್ದಾರೆ. ವಿದ್ಯಾರ್ಥಿಯ ಸಾಧನೆಗೆ ಕುಟುಂಬದವರು, ಗುರುಗಳು ಹಾಗೂ ಸ್ನೇಹಿತರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.
m

Related Posts