ಇತರೆ

ಧರ್ಮದ ಹೆಸರಿನಲ್ಲಿ ಕ್ರೌರ್ಯ: ಚಲಿಸುವ ರೈಲಿನಿಂದ ಎಸೆದು ಮುಸ್ಲಿಂ ಧಾರ್ಮಿಕ ಪಂಡಿತನ ಹತ್ಯೆ – ಸುಳ್ಯ ತಾಲ್ಲೂಕು ಮುಸ್ಲಿಂ ಯೂತ್ ಫೆಡರೇಶನ್ ಕಟು ಖಂಡನೆ” : ಉಮ್ಮರ್ ಕೆ ಎಸ್

ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಕ್ರೌರ್ಯ, ದ್ವೇಷ ಮತ್ತು ಗೂಂಡಾರಾಜ್ಯದ ತಾಂಡವಾಟಕ್ಕೆ ಮತ್ತೊಂದು ಹೃದಯವಿದ್ರಾವಕ ಘಟನೆ ಸಾಕ್ಷಿಯಾಗಿರುವುದು ಅತ್ಯಂತ ಖಂಡನೀಯ. ಬಿಹಾರ ಮೂಲದ ಯುವ ಮುಸ್ಲಿಂ ವಿದ್ವಾಂಸರನ್ನು ಕೇವಲ ಗಡ್ಡ ಮತ್ತು ಟೋಪಿ ನೋಡಿ ಮುಸ್ಲಿಂ ಎಂಬ ಕಾರಣಕ್ಕೆ ಗುರುತಿಸಿ, ಚಲಿಸುತ್ತಿದ್ದ ರೈಲಿನಲ್ಲಿ ಅಮಾನುಷವಾಗಿ ಹಲ್ಲೆ ನಡೆಸಿ ಬಳಿಕ ರೈಲಿನಿಂದ ಎಸೆದು ಹತ್ಯೆ ಮಾಡಿರುವುದು ಮಾನವೀಯತೆಯೇ ಸತ್ತಂತಾಗಿದೆ ಎಂಬುದಕ್ಕೆ ನಿದರ್ಶನವಾಗಿದೆ.

ಈ ದುರ್ಘಟನೆಯನ್ನು ಸುಳ್ಯ ಮುಸ್ಲಿಂ ಯೂತ್ ಫೆಡರೇಶನ್ ತೀವ್ರ ಹಾಗೂ ಕಟು ಶಬ್ದಗಳಲ್ಲಿ ಖಂಡಿಸುತ್ತದೆ ಎಂದು ಸಂಘದ ಅಧ್ಯಕ್ಷ ಉಮ್ಮರ್ ಕೆ.ಎಸ್ ಮಾಧ್ಯಮಕ್ಕೆ ತಿಳಿಸಿದ್ದಾರೆ. ಇಂತಹ ಕೃತ್ಯಗಳು ನಾಗರಿಕ ಸಮಾಜಕ್ಕೆ ಕಳಂಕವಾಗಿದ್ದು, ಕಾನೂನು ಸುವ್ಯವಸ್ಥೆಗೆ ಸವಾಲು ಎಸೆದಂತಾಗಿದೆ.
ಇತ್ತಿಚಿನ ದಿನಗಳಲ್ಲಿ ಉತ್ತರ ಪ್ರದೇಶದಲ್ಲಿ ಮುಸ್ಲಿಂ ಮತ್ತು ದಲಿತ ಸಮುದಾಯಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿಗಳು ಆ ರಾಜ್ಯವನ್ನು “ಗೂಂಡಾರಾಜ್ಯ” ಎಂದು ಕರೆಯುವ ಪರಿಸ್ಥಿತಿಗೆ ತಳ್ಳಿವೆ. ಧರ್ಮದ ಆಧಾರದ ಮೇಲೆ ವ್ಯಕ್ತಿಗಳನ್ನು ಗುರಿಯಾಗಿಸಿ ಹಲ್ಲೆ ನಡೆಸುವುದು ಹಾಗೂ ಹತ್ಯೆ ಮಾಡುವುದು ಅತಿ ಕ್ರೂರ ಮತ್ತು ಅಮಾನವೀಯ ಕೃತ್ಯವಾಗಿದ್ದು, ಇದನ್ನು ಯಾವ ಕಾರಣಕ್ಕೂ ಸಮರ್ಥಿಸಲಾಗುವುದಿಲ್ಲ.
ಒಬ್ಬ ವ್ಯಕ್ತಿಯನ್ನು ಕೇವಲ ಅವನ ಧರ್ಮದ ಗುರುತು ಆಧರಿಸಿ ಹತ್ಯೆ ಮಾಡುವುದು ಭಾರತೀಯ ಸಂವಿಧಾನದ ಮೂಲ ಸಿದ್ಧಾಂತಗಳಾದ ಸಮಾನತೆ, ಸ್ವಾತಂತ್ರ್ಯ ಮತ್ತು ಭದ್ರತೆಗೆ ವಿರೋಧವಾಗಿದೆ. ಇದು ಸಮಾಜದ ಸೌಹಾರ್ದತೆಯನ್ನು ಹಾಳು ಮಾಡುವ ಅಪಾಯಕಾರಿ ಪ್ರವೃತ್ತಿಯಾಗಿದೆ.
ಆದ್ದರಿಂದ, ಈ ಪ್ರಕರಣದ ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಅಲ್ಲದೆ, ಇಂತಹ ದ್ವೇಷ ಪ್ರೇರಿತ ಹಿಂಸಾಚಾರವನ್ನು ತಡೆಯಲು ಸರ್ಕಾರ ತಕ್ಷಣ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ದೇಶದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಮಾನವೀಯ ಮೌಲ್ಯಗಳನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.

ಉಮ್ಮರ್ ಕೆ, ಎಸ್, ಅಧ್ಯಕ್ಷರು ಸುಳ್ಯ ಮುಸ್ಲಿಂ ಯೂತ್ ಫೆಡರೇಶನ್

m

 

Related Posts